ಕೇರಳದ ಗುಡ್ಡಗಾಡಿನಲ್ಲಿ ಸ್ವಾಮಿ ಜಪಾನಂದಜಿ ಸಹಾಯಹಸ್ತ

ತುಮಕೂರು

              ಶತಮಾನದ ಮಳೆಯಿಂದ ಕಂಗೆಟ್ಟಿರುವ, ಜಲಪ್ರಳಯದಿಂದ ನಲುಗಿಹೋಗಿರುವ ಕೇರಳ ರಾಜ್ಯದ ಅದರಲ್ಲೂ ಗುಡ್ಡಗಾಡಿನ ಸಂತ್ರಸ್ತರಾಗಿರುವ ಆದಿವಾಸಿಗಳಿಗೆ ತುಮಕೂರು ಜಿಲ್ಲೆಯ ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಅಕ್ಷರಾದ ಶ್ರೀ ಸ್ವಾಮಿ ಜಪಾನಂದಜಿ ಅವರು ಸ್ಥಳಕ್ಕೆ ತೆರಳಿ ಸಹಾಯ ಹಸ್ತ ಚಾಚಿದ್ದಾರೆ.

              ಮಾನವೀಯ ಸೇವಾಕಾರ್ಯಗಳಲ್ಲೇ ಅವಿರತವಾಗಿ ತೊಡಗಿಸಿಕೊಂಡಿರುವ ಸ್ವಾಮೀಜಿ ಅವರು, ಇದೀಗ ನೆರೆಯ ಕೇರಳದ ನೊಂದ ಜನರ ನೆರವಿಗೆ ತೆರಳಿದ್ದಾರೆ. ಈ ಹಿಂದೆ ಗುಜರಾತ್ `ಕಂಪ, ಚೈನ್ನೆ` ಸುನಾಮಿ, ರಾಯಚೂರು ನೆರೆಹಾವಳಿ ಸಂದರ್ಗಳಲ್ಲಿ ಸ್ಥಳಕ್ಕೆ ತೆರಳಿ ನೊಂದವರಿಗೆ ನೆರವು ನೀಡಿಬಂದಿದ್ದ ಅವರು, ಈಗ ಕೇರಳದ ಗುಡ್ಡಗಾಡಿನ ಆದಿವಾಸಿಗಳ ಸೇವೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್‍ನ ಅ`ಅವರ ನೇತೃತ್ವದಲ್ಲಿ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಸಂತ್ರಸ್ತರಿಗಾಗಿ ವಿವಿ ರೀತಿಯ ಅಗತ್ಯ ವಸ್ತುಗಳುಳ್ಳ ಬ್ಯಾಗ್‍ಗಳನ್ನು ಸಿದ್ಧಪಡಿಸಿದ್ದು, ಯಾವುದೇ ಬಿಗುಮಾನವಿಲ್ಲದೆ ಸ್ವತಃ ಸುಧಾ ಮೂರ್ತಿ ಅವರೇ ಈ ಕಾಯಕದಲ್ಲಿ ತಲ್ಲೀನರಾಗಿರುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಹೋಗಿದೆಯಲ್ಲದೆ ಅಪಾರ ಪ್ರಸಂಸೆಗೂ ಒಳಗಾಗಿದೆ. ಇನ್ಫೋಸಿಸ್ ಫೌಂಡೇಷನ್ ಸಿದ್ಧಪಡಿಸಿರುವ ಇಂಥ ಪರಿಹಾರ ಸಾಮಗ್ರಿಗಳುಳ್ಳ ಬ್ಯಾಗ್‍ಗಳನ್ನು ಅತ್ಯಂತ ಸಮರ್ಥವಾಗಿ ಹಾಗೂ ಯಶಸ್ವಿಯಾಗಿ ನೊಂದ ಜನತೆಗೆ ತಲುಪಿಸುವಲ್ಲಿ ಶ್ರೀ ಸ್ವಾಮಿ ಜಪಾನಂದಜಿ ಮತ್ತವರ ತಂಡವು ಕ್ಷಿಪ್ರಗತಿಯಲ್ಲಿ ಸಲವಾಗಿದೆ.

            ಪರಿಹಾರ ಸಾಮಗ್ರಿಗಳನ್ನು ವಾಹನಗಳಿಗೆ ತುಂಬಿಕೊಂಡು ಬೆಂಗಳೂರಿನಿಂದ ಹೊರಟು ಕೇರಳ ರಾಜ್ಯದ ವಯನಾಡ್ ಜಿಲ್ಲೆ ವ್ಯಾಪ್ತಿಯ ಮಾನಂದವಾಡಿ ಸನಿಹದ ಗುಡ್ಡಗಾಡು ಹಳ್ಳಿಗಳಲ್ಲಿ ವಾಸಿಸುವ ಸುಮಾರು 600 ಕ್ಕೂ ಅಧಿಕ ಸಂತ್ರಸ್ತ ಆದಿವಾಸಿ ಕುಟುಂಬಗಳಿಗೆ ಸ್ವಾಮಿಜಿ ನೇತೃತ್ವದ ತಂಡವು ಪರಿಹಾರ ಸಾಮಗ್ರಿಗಳನ್ನು ಯಶಸ್ವಿಯಾಗಿ ವಿತರಣೆ ಮಾಡಿದೆ.

            ಸರಿಯಾದ ರಸ್ತೆಯ ಸಂಪರ್ಕವೂ ಇಲ್ಲದಿರುವ ಹಾಗೂ ಈವರೆಗೆ ಯಾವುದೇ ನೆರವು ತಲುಪದಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿಗೆ ತೆರಳಿ ವಿಶೇಷವಾಗಿ ಗುಡ್ಡಗಾಡು ವಾಸಿಗಳಿಗೆ ಕಳೆದ ಮೂರು ದಿನಗಳಿಂದ ಇನ್ಫೋಸಿಸ್ ಮೂಲದ ಪರಿಹಾರ ಸಾಮಗ್ರಿಗಳನ್ನು ಯಶಸ್ವಿಯಾಗಿ ತಲುಪಿಸಿರುವುದು ಶ್ರೀ ಸ್ವಾಮಿ ಜಪಾನಂದಜಿ ಮತ್ತು ಅವರ ತಂಡದ ವಿಶೇಷವಾಗಿದೆ.

ಬ್ಯಾಗ್‍ನಲ್ಲಿ ಏನೇನಿದೆ?

              ಇನ್ಫೋಸಿಸ್ ಸಿದ್ಧಪಡಿಸಿರುವ ಪ್ರತಿ ಬ್ಯಾಗ್‍ನಲ್ಲೂ ಒಂದು ಸೀರೆ, ಒಂದು ಲುಂಗಿ, ಅಕ್ಕಿ, ಸಕ್ಕರೆ, ಅಡಿಗೆ ಎಣ್ಣೆ, ಕಾಫಿ ಪುಡಿ, ಟೀ ಪುಡಿ, ಟೂತ್‍ಪೇಸ್ಟ್, ಟೂತ್ ಬ್ರಷ್, ಸೋಪು, ಬ್ಲೀಚಿಂಗ್ ಪೌಡರ್ ಇರುತ್ತದೆ. ಇದರ ಜೊತೆಗೆ ಪ್ರತ್ಯೇಕವಾಗಿ ಒಂದು ಪ್ಲಾಸ್ಟಿಕ್ ಚಾಪೆ ಇರುತ್ತದೆ. ಇವೆಲ್ಲವೂ ಸೇರಿ ಒಂದು ಬ್ಯಾಗ್ ಸುಮಾರು 30 ರಿಂದ 35 ಕೆ.ಜಿ. ತೂಕ ಹೊಂದಿರುತ್ತದೆ.
ಮಳೆ-`ಕುಸಿತದ ನಡುವೆ ಪರಿಹಾರ ವಿತರಣೆ
ಬುದವಾರ ಬೆಳಗ್ಗೆ “ಪ್ರಜಾಪ್ರಗತಿ”ಯು ಕೇರಳದಲ್ಲಿರುವ ಶ್ರೀ ಸ್ವಾಮಿ ಜಪಾನಂದಜಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅವರು “ಸತತವಾಗಿ ಸುರಿಯುತ್ತಿರುವ ಮಳೆ, `ಕುಸಿತದ ನಡುವೆ ಗುಡ್ಡಗಾಡಿನಲ್ಲಿ ಪರಿಹಾರ ವಿತರಣೆ ಕಾರ್ಯ ಮಾಡುತ್ತಿವೆ” ಎಂದು ಮಾಹಿತಿ ನೀಡಿದರು.
“ಒಟ್ಟು ಹತ್ತು ಜನರು ನಮ್ಮ ತಂಡದಲ್ಲಿವೆ. ಇನ್ಫೋಸಿಸ್ ಫೌಂಡೇಷನ್ ಪೂರೈಸುತ್ತಿರುವ ಪರಿಹಾರ ಸಾಮಗ್ರಿಗಳನ್ನು ನಾವು ಆದಿವಾಸಿಗಳಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿವೆ. ಇಲ್ಲಿ ಮಳೆ ಬರುತ್ತಲೇ ಇದೆ. ಗುಡ್ಡಗಾಡುಗಳ ರಸ್ತೆಗಳು ಕುಸಿದಿವೆ. ಸೇತುವೆಗಳು ಶಿಥಿಲಗೊಂಡಿವೆ. ವಾಹನಗಳು ಸಂಚರಿಸುವುದೇ ಕಷ್ಟಕರ. ಕೆಲವೆಡೆ ನಡೆದುಕೊಂಡೇ ಹೋಗಬೇಕು. ಛತ್ರಿ ಹಿಡಿದು, ರೈನ್‍ಕೋಟ್ `ಧರಿಸಿ, ಪರಿಹಾರ ಸಾಮಗ್ರಿಗಳನ್ನು ಹೊತ್ತೊಯ್ಯಬೇಕು. ವಯನಾಡ್ ಜಿಲ್ಲೆಯ ಮಾನಂದವಾಡಿ ಸುತ್ತಮುತ್ತಲಿನ ತ್ರಿಶಲೇರಿ, ಪೇರಿಯಾ, ಇಲ್ಲಿಗತ್ವೆ`, ವಾರಿಯರ್ ಮೊದಲಾದ ಆದಿವಾಸಿಗಳಿರುವ ಗುಡ್ಡಗಾಡು ಪ್ರದೇಶಗಳನ್ನೇ ಆಯ್ಕೆ ಮಾಡಿಕೊಂಡು ಅಲ್ಲಿಗೆ ನಾವು ಹೋಗುತ್ತಿವೆ. ಸರ್ಕಾರವು ಇನ್ನೂ ತಲುಪದಿರುವ ಸ್ಥಳಗಳಿಗೆ ನಾವು ತಲುಪಿ ಪರಿಹಾರ ಸಾಮಗ್ರಿಗಳನ್ನು ನೀಡುತ್ತಿವೆ. ಒಂದು ಬ್ಯಾಗ್ ಪರಿಹಾರ ಸಾಮಗ್ರಿ ಸಿಕ್ಕಿದರೆ ಒಂದು ಕುಟುಂಬ ಸುಮಾರು 10 ದಿನಗಳ ಕಾಲ ಅದನ್ನು ಬಳಸಿಕೊಳ್ಳಬಹುದು. ಸುಮಾರು 600 ಜನರಿಗೆ ಈವರೆಗೆ ಪರಿಹಾರ ಸಾಮಗ್ರಿ ತಲುಪಿಸಿವೆ” ಎಂದು ಸ್ವಾಮೀಜಿ ವಿವರಿಸಿದರು.
“ಕೇರಳದ ಮತ್ತೊಂದು ಪ್ರದೇಶದಲ್ಲಿರುವ ಹರಿಪಾದ್ ಎಂಬ ಸ್ಥಳಕ್ಕೂ ಸುಮಾರು 1000 ಜನರಿಗೆ ಪರಿಹಾರ ಸಾಮಗ್ರಿಗಳನ್ನು ಟ್ರಕ್ ಮೂಲಕ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಶುದ್ಧ ಕುಡಿಯುವ ನೀರಿಗಾಗಿ ಅಲ್ಲಿನ ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿಯವರು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ 1000 ಲೀಟರ್‍ನಷ್ಟು ನೀರಿನ ಬಾಟಲ್‍ಗಳನ್ನೂ ಜೊತೆಗೆ ಕಳಿಸಲು ವ್ಯವಸ್ಥೆ ಮಾಡಿದ್ದು, ಸದ್ಯದಲ್ಲೇ ನಮ್ಮ ತಂಡದ ಸ್ವಯಂಸೇವಕರು ಅಲ್ಲಿಗೆ ತಲುಪಲಿದ್ದಾರೆ” ಎಂದು ಸ್ವಾಮೀಜಿ ತಿಳಿಸಿದರು.

Recent Articles

spot_img

Related Stories

Share via
Copy link