ಬೆಂಗಳೂರು:
ಮುಖ್ಯಮಂತ್ರಿಗಳಿಗೆ ಪರಿಹಾರ ನಿಧಿಗೆ 3.75 ಕೋಟಿ.ರೂ.ಗಳ ಚೆಕ್ಕನ್ನು ಸಚಿವ ಕೆ.ಜೆ.ಜಾರ್ಜ್ ಅವರ ನೇತೃತ್ವದಲ್ಲಿ ಕೈಗಾರಿಕಾ ಸಂಘದ ವತಿಯಿಂದ ನೀಡಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಪರಿಹಾರದ ಚೆಕ್ ಪಡೆದು ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಕೊಡಗು ಸಂತ್ರಸ್ಥರ ಮಾಹಿತಿ ಪಡೆದಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಇಂದು ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇದುವರೆಗೆ ಕೊಡಗು ಜಿಲ್ಲೆಯಲ್ಲಿ 7 ಮಂದಿ ಮೃತಪಟ್ಟಿದ್ದು, ನಾಲ್ವರು ನಾಪತ್ತೆಯಾಗಿದ್ದಾರೆ. ಅವರ ಶೋಧನಾ ಕಾರ್ಯ ಭರದಿಂದ ಸಾಗಿದೆ.
ಇನ್ನು ನೆರೆ ಸಂತ್ರಸ್ತ ಸ್ಥಳಗಳ ಮನೆಗಳಲ್ಲಿ ಕಳ್ಳತನ ನಡೆಯುತ್ತಿರುವುದಾಗಿ ತಿಳಿದು ಬಂದಿದ್ದು,ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ.ಒಂದೇ ಮನೆ ಇದ್ದರೂ ಕೂಡಾ ಆ ಮನೆಗೆ ಭದ್ರತೆ ಒದಗಿಸುವಂತೆ ಆದೇಶಿಸಲಾಗಿದೆ. ಪೊಲೀಸ್ ಕೊರತೆ ಹೆಚ್ಚುವರಿಯಾಗಿ ಹೋಮ್ ಗಾರ್ಡ್‍ಗಳನ್ನು ತೆಗೆದು ಕೊಳ್ಳಲಾಗಿದೆ.
ಒಂದೇ ಮನೆ ಇದ್ದರೂ ಕೂಡ ಅಲ್ಲಿಗೆ ಭದ್ರತೆ ನೀಡುವ ಭರವಸೆ ನೀಡಿದರು.ಮಕ್ಕಳ ವಿದ್ಯಾಬ್ಯಾಸಕ್ಕೆ ತೊಂದರೆಯಾಗದಂತೆ ತರಗತಿಗಳನ್ನು ತೆರೆಯಲಾಗುವುದು.ಪುಸ್ತಕಗಳು ಹಾಳಾಗಿದ್ದಲ್ಲಿ ಹೊಸದಾಗಿ ಪುಸ್ತಕಗಳನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕೊಡಗು ಜಿಲ್ಲೆಗೆ 100 ಕೋಟಿ.ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 30 ಕೋಟಿ ರೂ.ಗಳನ್ನು ಬಳಸಲಾಗಿದೆ. ದೇಣಿಗೆ ಸಂಗ್ರಹಕ್ಕೆ ಆನ್‍ಲೈನ್ ಪೋರ್ಟಲ್ ಆರಂಭಿಸಿದ್ದು, ಇದರಲ್ಲಿ ಈಗಾಗಲೇ 79 ಲಕ್ಷ ರೂ.ಗಳ ದೇಣಿಗೆ ಬಂದಿದೆ. ಈ ಆನ್‍ಲೈನ್ ಮೂಲಕ ಹಣ ಕಳುಹಿಸುವವರಿಗೆ ರಸೀದಿಯನ್ನು ನೀಡಲಾಗುವುದು ಎಂದರು.
![](https://prajapragathi.com/wp-content/uploads/2018/08/Kumaraswamy-AVdf.gif)