ಕೈಗಾರಿಕೆ ಸ್ಥಾಪನೆಗೆ ಯಾರೇ ಬಂದರೂ ಜಗ ಕೊಡುತ್ತೇವೆ : ಎಂ ಬಿ ಪಾಟೀಲ್‌

ಬೆಂಗಳೂರು

     ರಾಜ್ಯದಲ್ಲಿ ಕೈಗಾರಿಕೆ ಸ್ಥಾಪಿಸಲು ಅಂಬಾನಿ,ಅದಾನಿಯಂತಹ ಉದ್ಯಮಿಗಳು ಮುಂದೆ ಬಂದರೂ ಅವರಿಗೆ ಜಾಗ ಕೊಡುತ್ತೇವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು,ಅಂಬಾನಿ ಮತ್ತು ಅದಾನಿ ಕೂಡಾ ಉದ್ಯಮಿಗಳು.ಅವರು ಉದ್ಯಮ ಸ್ಥಾಪಿಸಲು ಮುಂದೆ ಬಂದರೆ ನಮ್ಮ ಕೈಗಾರಿಕಾ ನೀತಿಯ ಅಡಿ ಏನು ಕೊಡಬೇಕೋ?ಅದನ್ನೆಲ್ಲ ಕೊಡುತ್ತೇವೆ ಎಂದರು.

     ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದವರು ಅಲೆದಾಡುವ ಪರಿಸ್ಥಿತಿ ಇರಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ರೂಪಿಸಲಾದ ಏಕಗವಾಕ್ಷಿ ಯೋಜನೆ ಸರಿ ಇಲ್ಲ ಎಂದರು.

     ಈ ಏಕಗವಾಕ್ಷಿ ಯೋಜನೆಯಲ್ಲಿ ಇರುವ ಲೋಪ ದೋಷಗಳನ್ನು ಸರಿಪಡಿಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದು ಒಂದೆರಡು ದಿನಗಳಲ್ಲಿ ಅದು ಲಭ್ಯವಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು.

     ಉಪನಗರ ರೈಲ್ವೆ ಕುರಿತು ಚರ್ಚೆ ನಡೆಸಲಾಗಿದ್ದು ಇದನ್ನು ಮೈಸೂರು,ತುಮಕೂರು,ಉಲ್ಲಾಳ ಮತ್ತು ದಾಬಸ್ ಪೇಟೆವರೆಗೆ ವಿಸ್ತರಣೆ ಮಾಡುವ ಅಗತ್ಯವಿದೆ ಎಂದರು.

    ರಾಜ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಏರ್ ಪೋರ್ಟ್ ಗಳನ್ನು ಖಾಸಗಿಯವರಿಗೆ ಕೊಡುವ ಬದಲು ರಾಜ್ಯ ಸರ್ಕಾರವೇ ನಿರ್ವಹಿಸಬೇಕು ಎಂದು ಯೋಚಿಸಿದ್ದೇವೆ ಎಂದ ಅವರು,ಮಹಾರಾಷ್ಟçದ ಶಿರಡಿಯಲ್ಲಿರುವ ಏರ್ ಪೋರ್ಟ್ ಅನ್ನು ಅಲ್ಲಿನ ಸರ್ಕಾರವೇ ನಿರ್ವಹಿಸುತ್ತಿದೆ ಎಂದರು.

    ರಾಜ್ಯದಲ್ಲೂ ಇದೇ ಮಾರ್ಗ ಅನುಸರಿಸಲು ನಿರ್ಧರಿಸಲಾಗಿದ್ದು ಈ ಸಂಬಂಧ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.

    ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದಕ್ಕೂ ನಮ್ಮ ಸರ್ಕಾರಕ್ಕೂ ಸಂಬAಧವಿಲ್ಲ.ವಿದ್ಯುತ್ ದರ ಏರಿಕೆ ಮಾಡಲು ಕೆ.ಇ.ಆರ್.ಸಿ ಶಿಫಾರಸು ಮಾಡಿದಾಗ ಹಿಂದಿದ್ದ ಬಿಜೆಪಿ ಸರ್ಕಾರ ಅದನ್ನು ಒಪ್ಪಿಕೊಂಡಿದೆ.ದರ ಏರಿಕೆ ಬೇಡ ಎಂದಾಗಿದ್ದರೆ ಅದನ್ನು ಅವತ್ತೇ ಹೇಳಬಹುದಿತ್ತು.

    ಆದರೆ ಅವತ್ತು ದರ ಏರಿಕೆಯ ಪ್ರಸ್ತಾಪವನ್ನು ಒಪ್ಪಿ ಈಗ ದರ ಏರಿಕೆಯ ವಿರುದ್ದ ಹೋರಾಡುತ್ತೇವೆ ಎಂಬುದು ಸರಿ ಅಲ್ಲ.ಈಗ ಬೇರೆ ಅವರಿಗೆ ಕೆಲಸವಿಲ್ಲ.ಹೀಗಾಗಿ ಅದರ ಕುರಿತು ಚರ್ಚಿಸುತ್ತಾ ಕಾಲ ಕಳೆಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

    ಒಂದು ವೇಳೆ ಏರಿಕೆಯಾಗಿರುವ ವಿದ್ಯುತ್ ದರವನ್ನು ಕಡಿಮೆ ಮಾಡಬೇಕು ಎಂದರೆ ಸಚಿವ ಸಂಪುಟದಲ್ಲಿ ಆ ಕುರಿತು ಚರ್ಚೆ ನಡೆಯಬೇಕು ಎಂದು ಇದೇ ಸಂದರ್ಭದಲ್ಲಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆಯಾಗಿರುವ ಕುರಿತು ಸಂಸದ ಪ್ರತಾಪ್ ಸಿಂಹ ಮತ್ತು ಸಿ.ಟಿ.ರವಿ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು,ಇಂತಹ ಹೊಂದಾಣಿಕೆ ನಡೆದಿದ್ದರೆ ಅಂತವರ ಹೆಸರುಗಳನ್ನು ಬಹಿರಂಗಪಡಿಸುವAತೆ ಆಗ್ರಹಿಸಿದರು.

    ಹಾಗೊಂದು ವೇಳೆ ಹೊಂದಾಣಿಕೆ ಮಾಡಿಕೊಂಡಿದ್ದರೆ ಅದು ನಮಗೂ ಗೊತ್ತಾಗುತ್ತಿತ್ತು.ಆದರೆ ಈಗ ರವಿ ಮತ್ತು ಪ್ರತಾಪ್ ಸಿಂಹ ಅವರು ಹೇಳಿರುವ ಹೊಂದಾಣಿಕೆಯ ವಿವರ ನಮಗೆ ಗೊತ್ತಿಲ್ಲ.ಹೀಗಾಗಿ ಅವರು ಈ ಹೆಸರುಗಳನ್ನು ಬಹಿರಂಗಪಡಿಸಲಿ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap