ರಾಮನಗರ:
ಕರ್ನಾಟಕದಲ್ಲಿರುವ ಯಾವ ಡ್ಯಾಂ ಗಳು ಬಿರುಕು ಬಿಟ್ಟಿಲ್ಲ. ಅದೆಲ್ಲವೂ ಸುಳ್ಳು ಸುದ್ದಿ ಅಷ್ಟೇ. ಈ ಬಗ್ಗೆ ಸುಳ್ಳು ವಂದತಿ ಹಬ್ಬಿಸಿದವರ ವಿರುದ್ಧ ಸೈಬರ್ ಕ್ರೈಮ್ ಗೂ ಕೂಡ ದೂರು ನೀಡಲಾಗಿದೆ. ಇದೇ ವಿಚಾರವಾಗಿ ಮುಖ್ಯಮಂತ್ರಿಗಳು ವರದಿ ಕೇಳಿದ್ದರು. ಅವರಿಗೂ ಕೂಡ ಸವಿವರವಾಗಿ ವರದಿ ನೀಡಿದ್ದೇವೆ ಎಂದು ಮಾನ್ಯ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೊಡಗಿನಲ್ಲಿ ಮಳೆಯ ರುಧ್ರ ನರ್ತನಕ್ಕೆ ಕಂಗಾಲಾದ ನೆರೆಸಂತ್ರಸ್ತರಿಗೆ ರಾಮನಗರ ಜಿಲ್ಲಾಡಳಿತ ಸಹಾಯಹಸ್ತ ಚಾಚಿದೆ, ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯಿಂದ 5 ಟ್ರಕ್ ಗಳಲ್ಲಿ ಅಗತ್ಯ ಆಹಾರ ಹಾಗೂ ಔಷಧಿ ಪದಾರ್ಥಗಳನ್ನು ಕಳುಹಿಸುತ್ತಿದ್ದು, ಕೊಡಗಿನ ಕಡೆಗೆ ಪಯಣ ಬೆಳೆಸಿದ ವಾಹನಗಳಿಗೆ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.