ಕೊಡಗಿನ ಜನರಿಗೆ ಮಕ್ಕಳಿಂದ ವಸ್ತುಗಳ ಕೊಡುಗೆ

ಗುಬ್ಬಿ

            ಭೀಕರ ಮಳೆಯಿಂದ ನೆರೆಹಾವಳಿಗೆ ತುತ್ತಾಗಿರುವ ಕೊಡಗು ಮತ್ತು ಮಡಿಕೇರಿ ಭಾಗದ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ನೀಡುತ್ತಿರುವ ಸಾರ್ವಜನಿಕರ ಸಹಕಾರವನ್ನು ಗಮನಿಸಿದ ಶಾಲೆಯ ಸಣ್ಣಪುಟ್ಟ ಮಕ್ಕಳು ತಮ್ಮ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ತಾಲ್ಲೂಕಿನ ದೊಡ್ಡಗುಣಿ ಶ್ರೀ ರೇಣುಕ ವಿದ್ಯಾಪೀಠ ಕಾನ್ವೆಂಟ್‍ನ ಮಕ್ಕಳು ಪ್ರತಿಯೊಬ್ಬರು ಸಹ ಸಂತ್ರಸ್ತರಿಗೆ ತಲುಪಿಸಲು ಒಂದೊಂದು ವಸ್ತುವನ್ನು ನೀಡುವ ಮೂಲಕ ಮಾನವೀಯತೆಯ ಪಾಠ ಕಲಿಸಿದ್ದಾರೆ. ಮಕ್ಕಳ ಮುದ್ದು ಮಾತಿಗೆ ಮನ ಸೋತಿರುವ ಪೋಷಕರು ಸಹ ಇದರಲ್ಲಿ ಪಾಲ್ಗೊಂಡು ಇಂತಹ ಕೆಲಸ ಮಾಡುತ್ತಿರುವ ಶಾಲೆಗೆ ಸಲಾಂ ಹೇಳಿದ್ದಾರೆ.

           ಮಕ್ಕಳು ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಸಂತ್ರಸ್ತರ ಸಮಸ್ಯೆಯನ್ನು ಆಲಿಸಿ ನಾವು ಸಹ ನಮ್ಮ ಕೈಲಾದ ಸಹಾಯ ಮಾಡುವ ಉದ್ದೇಶದಿಂದ ಪೋಷಕರ ಮನವೊಲಿಸಿ ಅಗತ್ಯ ವಸ್ತುಗಳಾದ ಟೂತ್‍ಪೇಸ್ಟ್, ಸೋಪು, ಸೋಪಿನಪುಡಿ, ಪೌಡರ್, ವಾಟರ್ ಬಾಟಲ್, ಬ್ರಶ್ ಸೇರಿದಂತೆ ಅಗತ್ಯವಾದ ವಸ್ತುಗಳನ್ನು ಪೋಷಕರಿಂದ ಪಡೆದು ತಂದು ಶಾಲೆಗೆ ನೀಡಿದ್ದಾರೆ. ಶಾಲೆಯ ಶಿಕ್ಷಕರು ಅವುಗಳನ್ನು ಸಂಗ್ರಹಿಸಿ ಪ್ಯಾಕ್ ಮಾಡಿ ಸಂತ್ರಸ್ತರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

          ಪುಟ್ಟ ಮಕ್ಕಳ ಇಂತಹ ಮಾನವೀಯತೆಯ ಗುಣಗಳನ್ನು ಪ್ರತಿಯೊಬ್ಬರು ಮೆಚ್ಚಲೆಬೇಕಿದೆ. ಶಾಲೆಯ 120 ಮಕ್ಕಳು ಒಂದೊಂದು ವಸ್ತುಗಳನ್ನು ತಮ್ಮ ಪೋಷಕರಿಂದ ಸಂಗ್ರಹಿಸಿ ಸಂತ್ರಸ್ತರಿಗೆ ನೀಡಿರುವುದು ಅಭಿನಂದನಾರ್ಹವಾದುದೆಂದು ಶಾಲೆಯ ಶಿಕ್ಷಕರು ತಿಳಿಸುತ್ತಾರೆ.
ಮುಖ್ಯ ಶಿಕ್ಷಕ ಶಿವಕುಮಾರ್, ಕಾರ್ಯದರ್ಶಿ ನೇತ್ರಾವತಿ ಶಿಕ್ಷಕರಾದ ನೇಮಿರಾಜ್, ಶ್ರೀನಿವಾಸ್, ಪ್ರಿಯಾ, ಮಮತಾ, ರಾಜೇಶ್ವರಿ, ಕಾವ್ಯ ಉಪಸ್ಥಿತರಿದ್ದರು

Recent Articles

spot_img

Related Stories

Share via
Copy link