ಕೊಡಗು ಸಂತ್ರಸ್ತರಿಗೆ ಬರಗೂರು ಜನತೆಯ ನೆರವು

ಬರಗೂರು

              ಕೂಡಗಿನಲ್ಲಿ ಸುರಿಯುತ್ತಿರುವ ಮಳೆಗೆ ಜಲಪ್ರಳಯದಂತಾಗಿ ಜನತೆ ತುಂಬಾ ಸಂಕಟದ ಜೀವನಕ್ಕೆ ಸಿಲುಕಿ ಎಲ್ಲಾ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ ಇಂತಹ ಪರಿಸ್ಥಿತಿಗೆ ಪ್ರತಿಯೋಬ್ಬರು ಸಹಾಯ ಹಸ್ತವನ್ನು ನೀಡಲೆಬೇಕಾಗಿದೆ ಎಂದು ವಿನಾಯಕ ಪರ್ಟಿಲೇಜರ್ ಮಾಲೀಕ ಬಿ.ಎನ್.ತಿಪ್ಪೇಸ್ವಾಮಿ ಹೇಳಿದರು.

              ಸಿರಾ ತಾಲ್ಲೂಕಿನ ಬರಗೂರು ಗ್ರಾಮದಲ್ಲಿ ಇಂದು ವಿವಿಧ ಸಂಘಟನೆಗಳು ಮತ್ತು ಸಾರ್ವನಾಗರಿಕರು ಕೂಡಗಿನ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಣೆ ಸಂದರ್ಭದಲ್ಲಿ ಮಾತನಾಡುತ್ತಾ ಕೂಡಗಿನ ಜನತೆ ನಮ್ಮ ಸಹೋದರರಿದ್ದಂತೆ ಅವರು ಇಂದು ಸಂಕಷ್ಟದಲ್ಲಿದ್ದಾರೆ ಈ ಸಂಕಷ್ಟಕ್ಕೆ ನಾವು ಸಹಕಾರ ಮಾಡುವುದು ನಮ್ಮ ಧರ್ಮವಾಗಿದೆ ಎಂದರು.

             ಬರಗೂರಿನ ವಿಎಸ್‍ಎಸ್‍ಎನ್ ಮುಂಭಾಗದಿಂದ ಊರಿನ ಪ್ರಮುಖದ ಬೀದಿಯಲ್ಲಿನ ಅಂಗಡಿ ಮಳಿಗೆಯ ಮಾಲೀಕರು ಅಭಿಮಾನಿಗಳು ಧಣಿಗೆಯನ್ನು ನೀಡುತ್ತಾ ಸಹಕಾರ ನೀಡಿದರು.

              ಒಗ್ಗಟ್ಟಾಗಿ ಸೇರಿ ಸುಮಾರು 20,000 ರೂ.ಗಳ ದೇಣಿಗೆ ಸಂಗ್ರಹಿಸಿದರು. ದೇಣಿಗೆ ಸಂಗ್ರಹಿಸಿದ ಹಣವನ್ನು ಗ್ರಾ.ಪಂ.ಅಧ್ಯಕ್ಷರು,ಸದಸ್ಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಎಣಿಕೆ ಮಾಡಿ ಆ ಹಣವನ್ನು ಮುಖ್ಯ ಮಂತ್ರಿಗಳ ಸಹಾಯ ನಿಧಿಗೆ ತುಂಬಲಾಯಿತು.

             ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಜಯರಾಮಯ್ಯ, ಬರಗೂರು ಗ್ರಾಪಂ ಅಧ್ಯಕ್ಷೆ ಲಕ್ಷ್ಮೀನರಸಮ್ಮ, ಪಿಡಿಓ ಅನಿತಾ, ಉಪಾಧ್ಯಕ್ಷ ತಿಪ್ಪೇಸ್ವಾಮಿ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆ ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ, ಕಾರ್ಯಕರ್ತ ಬಿಸಿ ಬಸವರಾಜು,ಸಾಹಿತಿ ಕೆ.ನರಸಪ್ಪ,ಬಾದೇಗೌಡ, ಮುದ್ದುಕೃಷ್ಣೇಗೌಡ,ಹರ್ಷಿತ, ಬಾಬು, ರವಿ, .ನಂದೀಶ್,ಡಾ,ರಾಜು, ಗ್ರಾ.ಪಂ.ಸದಸ್ಯ ಈರಮಲ್ಲಪ್ಪ ಇತರರು ಹಾಜರಿದ್ದರು.

Recent Articles

spot_img

Related Stories

Share via
Copy link
Powered by Social Snap