ಕೊಡವರ ಕಷ್ಟಕ್ಕೆ ಮರುಗಿ ಹಾಸನದಿಂದ ಹಾಲು ಮತ್ತು ಬಿಸ್ಕೆಟ್ ರವಾನೆ

ಹಾಸನ: 

            ಸತತ ಮಳೆಯ ಆರ್ಭಟದಿಂದ ಸಂಕಷ್ಟದಲ್ಲಿ ಇರುವ  ಕೊಡಗಿನ ಜನತೆಗೆ ಇಡೀ ನಾಡೆ ಸಹಕಾರಕ್ಕೆ ನಿಂತಿದೆ , ನಮ್ಮ ರಾಜ್ಯದ ವಿವಿಧ ಭಾಗದ ಜನರು ಅವರ ನೆರವಿಗೆ ತಮ್ಮ ಕೈಲಾದ ಕೃಷಿ ಮಾಡಲು ಮುಂದಾಗಿದ್ದಾರೆ . ಇತ್ತ ಹಾಸನ ಉತ್ಪಾದಕರ ಸಂಘ ಐದು ಸಾವಿರ ಲೀಟರ್ ಹಾಲು ಹಾಗೂ ಎರಡು ಸಾವಿರ ಪ್ಯಾಕೆಟ್ ಬಿಸ್ಕೆಟ್ ರವಾನೆ ಮಾಡಿದೆ.

          ಮಾನ್ಯ ಲೋಕೋಪಯೋಗಿ ಸಚಿವರಾದ ಶ್ರೀ ಎಚ್.ಡಿ.ರೇವಣ್ಣ ಅವರ  ಸೂಚನೆ ಮೇರೆಗೆ ಡೈರಿ ಈ ನಿರ್ಧಾರ ಕೈಗೊಂಡಿದ್ದು, ಅತಿವೃಷ್ಠಿ ಪೀಡಿತ ಪ್ರದೇಶಗಳಾದ ಕೊಡಗು ಸೇರಿದಂತೆ ರಾಮನಾಥಪುರ ಸಂತ್ರಸ್ತರಿಗೆ ಹಾಲು ಹಾಗೂ ಬಿಸ್ಕೆಟ್ ವಿತರಿಸಲು ಡೈರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಿದ್ಧತೆ ಮಾಡಿಕೊಂಡಿದ್ದಾರೆ.

Recent Articles

spot_img

Related Stories

Share via
Copy link