ಕೊರಟಗೆರೆ : ಸೋಂಕು ತಪಾಸಣೆಗೆ ಹೆದರಿದ ಥರಟಿ ಗ್ರಾಮಸ್ಥರು..!

 ಕೊರಟಗೆರೆ :

      ತಾಲೂಕಿನ ಥರಟಿ ಗ್ರಾಮದಲ್ಲಿ ಕೊರೋನ ತಪಾಸಣೆಗಾಗಿ ಹೋಗಿದ್ದ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನೋಡಿ ಗ್ರಾಮಸ್ಥರು ಬಾಗಿಲು ಹಾಕಿಕೊಂಡ ಘಟನೆ ತಾಲ್ಲೂಕಿನ ಜಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಥರಟಿ ಗ್ರಾಮದಲ್ಲಿ ನಡೆದಿದೆ.

ಕೊರೋನ ಸೋಂಕು ತಪಾಸಣೆ ನಡೆಸಲು ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಪಂ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿ ಥರಟಿ ಗ್ರಾಮಕ್ಕೆ ತೆರಳಿದ್ದಾರೆ. ಆಗ ಅಲ್ಲಿನ ಗ್ರಾಮಸ್ಥರು ಸೋಂಕು ತಪಾಸಣೆಗೆ ಹೊರ ಬಾರದೆ, ಮನೆಗಳ ಬಾಗಿಲುಗಳನ್ನು ಮುಚ್ಚಿದ್ದಾರೆ. ನಂತರ ಗ್ರಾಪಂಯ ಟಾಸ್ಕ್‍ಫೋರ್ಸ್ ಕಮಿಟಿ ಹಾಗೂ ಕೊರಟಗೆರೆ ಎಎಸ್‍ಐ ಯೋಗೀಶ್ ಆಗಮಿಸಿ, ಸಾರ್ವಜನಿಕರಿಗೆ ತಿಳಿ ಹೇಳಿ ಸೋಂಕು ತಪಾಸಣೆ ಮಾಡಿಸಿಕೊಳ್ಳಲು ಮನವಿ ಮಾಡಿದ್ದಾರೆ. ಇವರ ಮಾತಿಗೆ ಸ್ಪಂದಿಸಿದ ಗ್ರಾಮೀಣರು ಸುಮಾರು 45 ಮಂದಿ ಸೋಂಕು ತಪಾಸಣೆ ಮಾಡಿಸಿಕೊಂಡಿದ್ದಾರೆ.

      ಈ ಸಂದರ್ಭದಲ್ಲಿ ಎಎಸ್‍ಐಯೋಗೀಶ್ ಮಾತನಾಡಿ, ತಾಲ್ಲೂಕಿನಲ್ಲಿ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಗ್ರಾಮದ ಪ್ರಜ್ಞಾವಂತ ಯುವಕರು ತಮ್ಮ ಮನೆಗಳಲ್ಲಿರುವ ವೃದ್ದರು, ಮಕ್ಕಳು ಹಾಗೂ ಎಲ್ಲಾ ವಯಸ್ಸಿನವರು ಈ ಸಮಯದಲ್ಲಿ ಕೋವಿಡ್ 19 ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿ ಹೇಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ. ಹಾಗೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕೊರೋನ ಲಸಿಕೆಯನ್ನ ಹಾಕಲಾಗುತ್ತಿದ್ದು, ತಪ್ಪದೇ ಲಸಿಕೆಯನ್ನು ಹಾಕಿಸಿಕೊಳ್ಳಿ ಎಂದು ತಿಳಿಸಿದರು.

      ಪಟ್ಟಣಗಳಲ್ಲಿ ಕೊರೋನ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಥರಟಿ ಗ್ರಾಮದಲ್ಲಿ ಕೆಲವರು ಇಲ್ಲದ ಸುಳ್ಳುಗಳನ್ನು ಹಬ್ಬಿಸಿ ತಪಾಸಣೆ ಮಾಡಿಸಿಕೊಳ್ಳವವರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ತಾಲ್ಲೂಕಿನ ಅನೇಕ ಗ್ರಾಪಂಗಳು ಕೊರೋನ ಹಾಟ್‍ಸ್ಪಾಟ್‍ಗಳಾಗಿವೆ. ಯಾರು ಕೂಡ ಭಯ ಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ಕಡ್ಡಾಯವಾಗಿ ತಪಾಸಣೆ ಮಾಡಿಸಿಕೊಂಡು, ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರುಗಳಾದ ದ್ರಾಕ್ಷಾಯಣಮ್ಮ, ನವೀನ್, ಪುಷ್ಪ ರವಿಕುಮಾರ್, ಡಾ.ಹರ್ಷವಧರ್Àನ್, ಪಿಡಿಓ ಮಂಜಮ್ಮ ಸೇರಿದಂತೆ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗ್ರಾಪಂ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖಾ ಸಿಬ್ಬಂದಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link