ಕೊರೋನಾ ಕೇಸ್ ; ವಿಶ್ವದಲ್ಲಿ 2ನೇ ಸ್ಥಾನಕ್ಕೆರಿದ ಭಾರತ..!

ನವದೆಹಲಿ : 

      ದೇಶದಲ್ಲಿ ಕೋವಿಡ್​ 19 ಸೋಂಕಿತ ಸಂಖ್ಯೆ ದಿನ ದಿನೇ ಹೆಚ್ಚಾಗುತ್ತಲೇ ಇದ್ದು, ವಿಶ್ವದಲ್ಲಿ ಭಾರತ ಈಗ ಎರಡನೇ ಸ್ಥಾನದಲ್ಲಿದೆ. 

      ಕಳೆದ 24 ಗಂಟೆಗಳಲ್ಲಿ49,310 ಹೊಸ ಕೇಸ್​ಗಳು ಬೆಳಕಿಗೆ ಬಂದಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ12,87,945ಕ್ಕೆ ಏರಿಕೆಯಾದ್ರೆ, 740 ಮಂದಿ ಒಂದೇ ದಿನ ಬಲಿಯಾಗಿದ್ದಾರೆ. ಸದ್ಯ ಇಲ್ಲಿಯವರೆಗೆ ಬಲಿಯಾದವರ ಸಂಖ್ಯೆ 30,601ಕ್ಕೆ ಬಂದು ನಿಂತಿದೆ.

      ಈವರೆಗೆ ಭಾರತದಲ್ಲಿ ಸೋಂಕಿತರ ಸಂಖ್ಯೆ 12.88 ಲಕ್ಷ ಹಾಗೂ ಸಾವಿನ ಪ್ರಮಾಣ 30,000 ದಾಟಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ.

     ದೇಶದಲ್ಲಿ ಈಗ 4.40 ಲಕ್ಷ ಆಕ್ಟಿವ್ ಕೇಸ್‍ಗಳಿದ್ದು, 8.17 ಲಕ್ಷ ರೋಗಿಗಳು ಚೇತರಿಸಿಕೊಂಡು, ಗುಣಮುಖರಾಗಿ ಡಿರ್ಸಾಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ನಿನ್ನೆವರೆಗೆ ಒಂದೂವರೆ ಕೋಟಿಗೂ ಅಧಿಕ ಜನರ ಸ್ಯಾಂಪಲ್‍ಗಳನ್ನು ಪರೀಕ್ಷಿಗೆ ಒಳಪಡಿಸಲಾಗಿದೆ ಅಲ್ಲದೇ ಸೋಂಕು ಪರೀಕ್ಷೆ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

      ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳು ಅತಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದ್ದು, ಸೋಂಕು ಪ್ರಕರಣಗಳಲ್ಲಿ ಭಾರತ ಬ್ರೆಜಿಲ್‍ನನ್ನು ಹಿಂದಿಕ್ಕೆ ಎರಡನೇ ಸ್ಥಾನಕ್ಕೇರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap