ಕೋಟೆ ಅಭಿವೃದ್ದಿ ಕ್ರಮ : ವಿನೋತ್ ಪ್ರಿಯಾ

ಚಿತ್ರದುರ್ಗ:

      ಐತಿಹಾಸಿಕ ಚಿತ್ರದುರ್ಗದ ಕೋಟೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯನ್ನಿಟ್ಟುಕೊಂಡು ಕೋಟೆಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ವಿನೋತ್‍ಪ್ರಿಯಾ ತಿಳಿಸಿದರು.

       ಸೋಮವಾರ ಸಂಜೆ ಕೋಟೆಗೆ ತೆರಳಿ ಅಲ್ಲಿಸಿ ವಾಯುವಿಹಾರಿಗಳಿಂದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಪ್ರವಾಸಿಗರಿಗೆ ಶುದ್ದವಾದ ಕುಡಿಯುವ ನೀರು, ಶೌಚಾಲಯ, ಆಸನಗಳ ವ್ಯವಸ್ಥೆ ಮಾಡಲಾಗುವುದು. ಕೋಟೆಯ ಎರಡು ಕಡೆ ವಾಹನಗಳ ಪಾರ್ಕಿಂಗ್, ಕೋಟೆಗೆ ಆಗಮಿಸುವ ಪ್ರವಾಸಿಗರಿಗೆ ದಣಿವಾದರೆ ಅಲ್ಲಲ್ಲಿ ಕುಳಿತು ಕೆಲವು ಕಾಲ ವಿಶ್ರಾಂತಿ ಪಡೆದುಕೊಳ್ಳಲು ಬೆಂಚ್‍ಗಳನ್ನು ಅಳವಡಿಸಿ ಕೋಟೆಗೆ ಸುಗಮವಾಗಿ ಬರಲು ರಸ್ತೆಗಳನ್ನು ನಿರ್ಮಾಣ ಮಾಡಲಾಗುವುದು. ಒಟ್ಟಾರೆ ಐತಿಹಾಸಿಕ ಚಿತ್ರದುರ್ಗದ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಸರ್ಕಾರದಿಂದ ಹಣ ಮಂಜೂರಾಗಿದೆ. ಹಂತ ಹಂತವಾಗಿ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಹೇಳಿದರು.

      ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಕೋಟೆಯಲ್ಲಿ ಬಹುಮುಖ್ಯವಾಗಿ ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ, ರಸ್ತೆಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಕೋಟೆ ವಾಯುವಿಹಾರಿಗಳ ಸಂಘದ ಗೌರವಾಧ್ಯಕ್ಷ ಜಯಣ್ಣ, ಕೂಬಾನಾಯ್ಕ, ನರಸಿಂಹಪ್ಪ, ಉಡುಸಾಲಪ್ಪ, ಭದ್ರಣ್ಣ, ಲತ, ಜಯಶ್ರಿ, ರಮೇಶ್, ರತ್ನಮ್ಮ, ಬುಡ್ಡಪ್ಪ, ಭೋವಿ ಸಮಾಜದ ತಿಮ್ಮಣ್ಣ ಇನ್ನು ಮುಂತಾದವರು ಈ ಸಂದರ್ಭದಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

 

Recent Articles

spot_img

Related Stories

Share via
Copy link