ಕೌಶಲ್ಯ ಮೈಗೂಡಿಸಿಕೊಂಡಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ

ದಾವಣಗೆರೆ:

ವಿದ್ಯಾರ್ಥಿಗಳು ಕೌಶಲ್ಯ ಮೈಗೂಡಿಸಿಕೊಂಡರೆ, ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ.ಈಶ್ವರಪ್ಪ ಅಭಿಪ್ರಾಯಪಟ್ಟರು.
ನಗರದ ಮಾ.ಸ.ಬ. ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕೌಶಲ್ಯಾಭಿವೃದ್ದಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಂಕಪಟ್ಟಿ, ಪ್ರಮಾಣ ಪತ್ರಗಳು ಕೇವಲ ಸಾಧನಗಳಾಗಿವೆ. ಇವೆರಡಕ್ಕಿಂತ ವಿದ್ಯಾರ್ಥಿಗಳು ಕೌಶಲ್ಯ ಮೈಗೂಡಿಸಿಕೊಂಡರೆ, ಉದ್ಯೋಗ ಲಭಿಸಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಲಿದೆ ಎಂದರು.
ವಿದ್ಯಾರ್ಥಿ ದೆಸೆಯಿಂದಲೇ ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳುವುದರ ಜೊತೆಗೆ, ಶಿಸ್ತು ರೂಢಿಸಿಕೊಳ್ಳಬೇಕು. ಕನ್ನಡ ಭಾಷೆ ಮಾತನಾಡುವುದನ್ನು, ಬರೆಯುವುದನ್ನು ಕಲಿಸುವುದು ಕೇವಲ ಕನ್ನಡ ಶಿಕ್ಷಕರ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಯಾವುದೇ ಒಂದು ವಸ್ತುವನ್ನು ಕೊಟ್ಟರೆ ಹೊಸತನ ಮತ್ತು ಮೌಲ್ಯ ತುಂಬುವ ನಿಟ್ಟಿನಲ್ಲಿ ಕೌಶಲ್ಯ ಬೆಳೆಸಿಕೊಳ್ಳಬೇಕು. ಜ್ಞಾನದ ಜೊತೆಗೆ ಕೌಶಲ್ಯವನ್ನು ಮೈಗೂಡಿಸಿಕೊಂಡಾಗ ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈಯಲು ಸಾಧ್ಯವಾಗುತ್ತದೆ. ಅನುಭವದ ಜೊತೆ ಜ್ಞಾನ ಪಡೆದು ಇತರರಿಗೆ ಅದನ್ನು ಪಸರಿಸುವ ಕೆಲಸ ಮಾಡಬೇಕೆಂದು ಹೇಳಿದರು.
ಹಿರಿಯರ ಮಾತುಗಳಲ್ಲಿ ಅನುಭವ, ವಿವೇಕವಿರುತ್ತದೆ. ಅವರಿಂದ ನಾವು ತಿಳಿದುಕೊಂಡು ಜೀವನದಲ್ಲಿ ಅದನ್ನು ಪಾಲನೆ ಮಾಡಬೇಕು. ಸರಳತೆ, ಸಜ್ಜನಿಕೆ, ಮಾತುಗಾರಿಕೆ ವ್ಯಕ್ತಿತ್ವದ ಜೊತೆಗೆ ಇರಬೇಕು. ಶಿಕ್ಷಣ ಉದ್ಯೋಗ ಕಲ್ಪಿಸಿಕೊಡುವಂತಾಗಬೇಕು ಆಗ ನಾವು ಪಡೆದ ವಿದ್ಯಾಭ್ಯಾಸ ಸಾರ್ಥಕವಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಕಾಲೇಜುಗಳ ಅಧ್ಯಾಪಕರ ಒಕ್ಕೂಟದ ಮಾಜಿ ಅಧ್ಯಕ್ಷ ಸಿ.ಹೆಚ್   .ಪೋ .ಮುರುಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳು ನಿತ್ಯ ಜೀವನದಲ್ಲಿ ಭವಿಷ್ಯ ರೂಪಿಸಿಕೊಳ್ಳುವ ವಿಧಾನ, ಹೊಸತನವನ್ನು ಕಲಿಯಬೇಕು. ಪ್ರಸ್ತುತ ದಿನದಲ್ಲಿ ಶಿಕ್ಷಣ ಜೀವನಮೌಲ್ಯಗಳನ್ನು ಕಲಿಸುವವರಿದ್ದಾರೆ. ಆದರೆ, ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ವಿಷಾಧನೀಯ ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ಕೀಳರಿಮೆ ಇರಬಾರದು. ಪ್ರಸ್ತುತ ದಿನದಲ್ಲಿ ಕಲಿಕೆ ಮತ್ತು ಕಲಿಸುವುದು ವ್ಯಾಪಾರದೃಷ್ಟಿಕೋನದಿಂದ ನೋಡುವಂತಾಗಿದೆ ಇದು ಬದಲಾಗಬೇಕು. ಇಂದಿನ ವಿದ್ಯಾರ್ಥಿಗಳಲ್ಲಿ ಮೌಲ್ಯ ಹಾಗೂ ನಮ್ಮ   ಸಂಸ್ಕೃತಿ     ಪ್ರಜ್ಞೆ ಇಲ್ಲವಾಗಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯಗಳನ್ನು ಕಲಿಸುವುದಕ್ಕೆ ತಿಂಗಳಿಗೊಮ್ಮೆ ಕಾರ್ಯಾಗಾರ ಏರ್ಪಡಿಸುವುದು ಒಳ್ಳೆಯದು ಎಂದರು.
ಮಾ.ಸ.ಬ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ದಾವಣಗೆರೆ ವಿವಿಯ ವಾಣಿಜ್ಯ ಮತ್ತು ನಿರ್ವಹಣಾ ಅರ್ಥಶಾಸ್ತ್ರ ಅಧ್ಯಾಪಕರ ಸಂಘದ ಅಧ್ಯಕ್ಷ  ಪೊ  ಎಸ್.ಪಿ.ರವಿ, ಸೇರಿದಂತೆ ಮತ್ತಿತರರಿದ್ದರು.

Recent Articles

spot_img

Related Stories

Share via
Copy link
Powered by Social Snap