ಮುಂಬೈ
ದೇಶದ ವಾಣಿಜ್ಯ ರಾಜಧಾನಿಯೆಂದೇ ಕರೆಸಿಕೊಳ್ಳುವ ಮುಂಬೈಯ ಪ್ಯಾರೆಲ್ ಪ್ರದೇಶದ ಕ್ರಿಸ್ಟೆಲ್ ಟವರ್ ನ ಮೂರನೇ ಮಹಡಿಗೆ ಬೆಂಕಿ ತಗುಲಿದ ಪರಿಣಾಮ 4 ಜನ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳಿಗ್ಗೆ 8:30 ಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಕಾರ್ಯಪ್ರವುತ್ತರಾದ ಅಗ್ನಿಶಾಮಕ ದಡಳದ ಸಿಬ್ಬಂದಿಗಳು ರಕ್ಷಣಾ ಕಾರ್ಯ ಆರಂಭಿಸಿದ್ದರು. ಈ ಸಂದರ್ಭದಲ್ಲಿ ಮೂರನೇ ಮಹಡಿಯೊಳಗೆ ಸಿಲುಕಿಕೊಂಡಿದ್ದ ಹಲವರನ್ನು ರಕ್ಷಿಸಲಾಯಿತಾದರೂ, ನಾಲ್ವರು ಮೃತರಾಗಿದ್ದಾರೆ. ಈವರೆಗೆ ಮುಂಬೈನಲ್ಲಿ ಭಾರೀ ಅಗ್ನಿ ದುರಂತಗಳಲ್ಲಿ ಇದು ಒಂದು, 14 ಜನ ಮೃತಪಟ್ಟರೂ ರಕ್ಷಣಾ ಕಾರ್ಯ ಮುಂದುವರಿದಿದ್ದು, ಕಟ್ಟಡದೊಳಗೆ ಮತ್ತಷ್ಟು ಜನ ಸಿಲುಕಿ ಕೊಂಡಿರುವ ಶಂಕೆ ವ್ಯಕ್ತವಾಗಿದೆ.
![](https://prajapragathi.com/wp-content/uploads/2018/08/vbk-Mumbai-fire.jpg)