ಕ್ರೀಡಾಪಟುಗಳ ಕೊರತೆ ಎದುರಿಸುತ್ತಿರುವ ಬಾಸ್ಕೆಟ್ ಬಾಲ್

ದಾವಣಗೆರೆ:

            ಇತ್ತೀಚಿನ ದಿನಗಳಲ್ಲಿ ಬಾಸ್ಕೇಟ್‍ಬಾಲ್ ಕ್ರೀಡೆಯು ಕ್ರೀಡಾಪಟುಗಳ ಕೊರತೆ ಎದುರಿಸುತ್ತಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಥಣಿ ವೀರಣ್ಣ ಬೇಸರ ವ್ಯಕ್ತಪಡಿಸಿದರು.

             ನಗರದ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಮಂಗಳವಾರ ಬಾಪೂಜಿ ಇನ್ಸ್‍ಸ್ಟಿಟ್ಯೂಟ್ ಆಫ್ ಹೈಟೆಕ್ ಎಜುಕೇಷನ್‍ವತಿಯಿಂದ ದಾವಣಗೆರೆ ವಿವಿಯ ಅಂತರ ಕಾಲೇಜು ಮಟ್ಟದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

               ಈ ಕಾಲೇಜು ಆವರಣದಲ್ಲಿ ಸುಮಾರು 16 ರಿಂದ 17 ಲಕ್ಷ ರೂ. ವೆಚ್ಚದಲ್ಲಿ ಬಾಸ್ಕೆಟ್ ಬಾಲ್ ಅಂಕಣವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕ್ರೀಡಾಪಟುಗಳ ಕೊರತೆಯಿಂದ ಈ ಅಂಕಣ ಸದ್ಬಳಕೆಯಾಗುತ್ತಿಲ್ಲ. ಇಲ್ಲಿ ಬಾಸ್ಕೆಟ್ ಬಾಲ್ ಅಭ್ಯಾಸಿಸುವ ಪಟುಗಳಿಗೆ ಯಾವುದೇ ನಿಯಮಾವಳಿಲ್ಲ. ಹಗಲು ರಾತ್ರಿ ಎನ್ನದೆ ಎರಡು ಹೊತ್ತೂ ಆಟವಾಡುವುದಕ್ಕೆ ಸೂಕ್ತ ಸೌಲಭ್ಯವಿದೆ. ಆದ್ದರಿಂದ ಇದರ ಸದುಪಯೋಗವನ್ನು ಕ್ರೀಡಾಪಟುಗಳು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

                ಇಲ್ಲಿ ಎಂಬಿಎ ಕಾಲೇಜು, ಬಾಪೂಜಿ ಹೈಟೆಕ್ ಕಾಲೇಜು, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಬಿಡುವಿನ ವೇಳೆಯಲ್ಲಿ ಆಟವಾಡುತ್ತಿದ್ದಾರೆ. ಆದರೆ, ಕ್ರೀಡೆಪಟುಗಳ ಸಂಖ್ಯೆ ಮಾತ್ರ ಹೆಚ್ಚಳವಾಗುತ್ತಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ದಾವಣಗೆರೆ ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್.ರಾಜಕುಮಾರ್, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಕುಂಠಿತವಾಗಿರುವ ಪರಿಣಾಮ ಪಂದ್ಯಾವಳಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಕ್ರೀಡಾ ತಂಡಗಳು ಭಾಗವಹಿಸಿಲ್ಲ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗÀವಹಿಸುವುದರಿಂದ ದೈಹಿಕವಾಗಿ ಸದೃಢಗೊಂಡು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಂಡು ತಂಡಗಳ ಸಂಖ್ಯೆ ಹೆಚ್ಚಿಸಿ ವಿವಿಗೂ, ಕಾಲೇಜಿಗೂ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

                    ಈ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಹರಿಹರದ ಅಲೋಶಿಷಯಸ್ ಕಾಲೇಜು, ಚಿತ್ರದುರ್ಗ ಸರಕಾರಿ ಸೈನ್ಸ್ ಕಾಲೇಜು, ದಾವಣಗೆರೆ ದವನ್ ಕಾಲೇಜು, ಬಿಐಇಟಿ ಕಾಲೇಜು, ಬಿಎಸ್‍ಸಿಎಫ್‍ಐ ಕಾಲೇಜು, ಜಿಎಫ್‍ಜಿಸಿ ಹೊಸದುರ್ಗ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಡಾ.ಬಿ.ವೀರಣ್ಣ, ಸದಾಶಿವ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link