“ಕ್ರೈಸ್ತ, ಇಸ್ಲಾಂಗೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೇ?ಬೇಡವೇ?”

 ಹೊಸದಿಲ್ಲಿ:

          ಕ್ರೈಸ್ತ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೇ ಎಂದು ಪರಿಶೀಲಿಸಲು ರಾಷ್ಟ್ರೀಯ ಆಯೋಗವೊಂದನ್ನು ರಚಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಚಿಂತಿಸುತ್ತಿದೆ ಎಂದು economic times ವರದಿ ಮಾಡಿದೆ.

            ಕಮಿಷನ್ ಆಫ್ ಎಂಕ್ವೈರೀಸ್ ಕಾಯಿದೆ, 1952 ಅಡಿಯಲ್ಲಿ ಇತರ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ರಚಿಸುವ ಕುರಿತು ಅಂತರ್-ಸಚಿವಾಲಯ ಚರ್ಚೆಗಳು ನಡೆಯುತ್ತಿವೆ ಎಂಬ ಮಾಹಿತಿಯಿದೆ.

ಹಿಂದು, ಸಿಖ್, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ದೊರಕಿದೆಯಾದರೂ ಕ್ರೈಸ್ತ ಅಥವಾ ಮುಸ್ಲಿಂ ಸಮುದಾಯಗಳಿಗೆ ಮತಾಂತರಗೊಂಡಿರುವವರಿಗೆ ಈ ಸ್ಥಾನಮಾನ ದೊರಕಿಲ್ಲ. ಈ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಹಲವರು ಪ್ರಕರಣಗಳಿರುವುದರಿಂದ ಆಯೋಗ ರಚಿಸುವ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ.

ಯಾವುದೇ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಬೇಕೆಂದು ಕೋರಿ ಜನವರಿ 2020ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ದಲಿತ್ ಕ್ರಿಶ್ಚಿಯನ್ಸ್ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು ಈ ಕುರಿತು ನ್ಯಾಯಾಲಯ ಕೇಂದ್ರ ಸರಕಾರದ ಪ್ರತಿಕ್ರಿಯೆ ಕೋರಿದೆ.

ಮಂಡಲ ಆಯೋಗದ ಶಿಫಾರಸಿನಂತೆ 20 ರಾಜ್ಯಗಳು ದಲಿತ ಕ್ರೈಸ್ತರನ್ನು ಕೇಂದ್ರೀಯ ಒಬಿಸಿ ಪಟ್ಟಿಯಲ್ಲಿ ಸೇರಿಸಿ ಅವರಿಗೆ ಸರಕಾರಿ ಉದ್ಯೊಗಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲಾತಿ ಸಂದರ್ಭ ಮೀಸಲಾತಿ, ಒಬಿಸಿ ಪೋಸ್ಟ್-ಮೆಟ್ರಿಕ್ ವಿದ್ಯಾರ್ಥಿವೇತನ ಮತ್ತಿತರ ಸವಲತ್ತುಗಳನ್ನು ಒದಗಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap