ಅಮೇರಿಕಾ:
ಅತ್ತೀರಾ ಅವರು “ಕ್ವೀನ್ ಆಫ್ ಸೋಲ್ಸ್” ಎಂದೇ ಖ್ಯಾತಿ ಪಡೆದವರು ,ಗುರುವಾರ ವಿಷಮ ಪರಿಸ್ಥಿಯಲ್ಲಿದ್ದ ಅವರು ಕೊನೆ ಉಸಿರೆಳೆದ್ದಿದ್ದಾರೆ.ಅವರ ಸಾವಿನ ಕಾರಣ ಏನೆಂದರೆ ಪ್ಯಾಕ್ನ್ರಿಯಾಟಿಕ್ ಕ್ಯಾನ್ಸರ್ ಎಂದು ಕುಟುಂಬಸ್ತರು ಹೇಳಿದ್ದಾರೆ.
ಫ್ರಾಕ್ಲಿನ್ ರವರು ಸುಮಾರು 60 ವರ್ಷ ಹಾಡುಗಾರಿಕೆ ನಡೆಸಿದ್ದರು ಅವರ ಪ್ರಸಿದ್ದ ಗೀತೆಗಳಲ್ಲಿ “ರೆಸ್ಪೆಕ್ಟ್”,”ಎ ನ್ಯಾಚುರಲ್ ವುಮೆನ್”ಮತ್ತು “ಐ ಸೇ ಏ ಲಿಟಲ್ ಪ್ರೆಯರ್” ಸೇರಿವೆ . 70 ರ ಹರೆಯದಲ್ಲೂ ಸಹ ಸಂಗೀತ ಸಂಜೆಗಳಲ್ಲಿ ಭಾಗವಹಿಸುತ್ತಾ ಇದ್ದರು. ಅವರು ತಮ್ಮ ಸಂಗಿತ ದಿಂದ ಅಲ್ಲದೇ ಮಹಿಳೆಯರ ಉನ್ನತಿಗಾಗಿ ನೀಡಿದ ಸಂದೇಶ ಅಮೂಲ್ಯವಾದವು.
ಅವರು ವಿಧಿವಶರಾದ ಕೆಲವೇ ನಿಮಿಷಗಳಲ್ಲಿ ನೊಂದ ಅಭಿಮಾನಿಗಳಿಂದ ,ಸಿನಿ ಪ್ರಮುಖರಿಂದ ಮತ್ತು ರಾಜಕೀಯದವರು ಕುಟುಂಬಕ್ಕೆ ಸಾಂತ್ವಾನದ ಮಹಾಪೂರವೇ ಆಯಿತು ಮತ್ತು ಅವರ ಆತ್ಮ ಚಿರ ಶಾಂತಿಯಿಂದ ನೆಲೆಸಲೀ ಎಂದು ಪ್ರಾರ್ಥಿಸಿದರು.
ಅವರ ಸಮಕಾಲೀನರಾದ ಪಾಟಿ ಲಾ ಬೆಲ್ ರವರು ಮಾತನಾಡಿ ಎಷ್ಟೋ ಮಂದಿಗೆ ದಾರಿ ದೀಪದಂತಿದ್ದ ನಂದಾದೀಪ ಇಂದು ಆರಿದೆ ಎಂದು ದುಖಿಸಿದರು. ಫ್ರಾಕ್ಲಿನ್ ಅವರು ದೈವಾಧೀನರಾದಾಗ ಅವರಿಗೆ ಕೇವಲ 76 ವರ್ಷ ವಯಸ್ಸಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
