ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್‌ ನಿಧನ…

ಬೆಂಗಳೂರು:

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಹಿರಿಯ ಗಾಯಕಿ ವಾಣಿ ಜಯರಾಮ್ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ .ವಾಣಿ ಜಯರಾಮ್ ಇತ್ತೀಚೆಗೆ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದರು . 18 ಕ್ಕೂ ಹೆಚ್ಚು ವಿವಿಧ ಭಾರತೀಯ ಭಾಷೆಗಳಲ್ಲಿ ಹಾಡಿದ್ದಾರೆ .

    ಅವರು ತಮ್ಮ ವೃತ್ತಿಜೀವನದಲ್ಲಿ 10,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ವಾಣಿ ಜಯರಾಮ್ ಅವರು ಮೂರು ಬಾರಿ  ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಹಾಗು  ಎರಡು ಬಾರಿ ತೆಲುಗು ಚಲನಚಿತ್ರಗಳಲ್ಲಿ ಹಾಡಿದ ಹಾಡುಗಳಿಗೆ ಪ್ರಶಸ್ತಿ ಬಂದಿದೆ.

       1945 ರಲ್ಲಿ ತಮಿಳುನಾಡಿನಲ್ಲಿ ಜನಿಸಿದ ಅವರು ಬಾಲಿವುಡ್‌ನಲ್ಲಿ ತಮ್ಮ ಗಾಯನ ವೃತ್ತಿಯನ್ನು ಪ್ರಾರಂಭಿಸಿದರು. ಹಿಂದಿ ಭಅಷೆಯಲ್ಲಿ ಮೂಡಿಬಂದ ಗುಡ್ಡಿ (1971) ಚಿತ್ರದಿಂದ ಮೊದಲ ಬಾರಿ ಗುರುತಿಸಿಕೊಂಡರು. ತೆಲುಗು ಚಿತ್ರರಂಗದ ದಂತಕತೆ ಎಂದೇ ಪ್ರಸಿದ್ದವಾದ  “ಶಂಕರಾಭರಣಂ” ಚಿತ್ರದಲ್ಲಿ ಅವರು ಹಾಡಿದ ಹಾಡುಗಳಿಗೆ ಅತ್ಯಂತ ಪ್ರಶಂಸೆ ಸಿಕ್ಕತ್ತು .

Recent Articles

spot_img

Related Stories

Share via
Copy link
Powered by Social Snap