ಗಂಟಲ ಕಿರಿಕಿರಿ ಸಮಸ್ಯೆಗೆ ಒಂದೇ ಗಂಟೆಯಲ್ಲಿ ಪರಿಹಾರ..!?

     Image result for ಗಂಟಲು ಕೆರೆತ

      ಸಾಮಾನ್ಯ ಶೀತ ಅಥವಾ ಫ್ಲೂ ಪರಿಣಾಮವಾಗಿ ಗಂಟಲಬೇನೆಯೂ ಆವರಿಸಿಕೊಳ್ಳುತ್ತದೆ. ಕೆಲವು ಇತರ ಅನಾರೋಗ್ಯಗಳಿಂದಲೂ ಗಂಟಲಬೇನೆ ಎದುರಾಗಬಹುದು. ಗಂಟಲ ಒಳಭಾಗದಲ್ಲಿರುವ ತೇವವಿರುವ ಅಂಗಗಳ ಮೇಲೆ ಬ್ಯಾಕ್ಟೀರಿಯಾ ಅಥವಾ ವೈರಸ್ಸು ಬೀಡು ಬಿಡುತ್ತದೆ ಹಾಗೂ ಈ ತೇವವಿರುವಲ್ಲಿ ತಮ್ಮ ಸಂಖ್ಯೆಯನ್ನು ಅಪಾರವಾಗಿ ವೃದ್ದಿಸಿಕೊಂಡು ಸೋಂಕು ಉಂಟುಮಾಡುತ್ತವೆ. ಗಂಟಲ ಒಳಭಾಗ, ಮೂಗಿನ ಮೇಲ್ಭಾಗ, ಶ್ವಾಸನಾಳ ಮೊದಲಾದ ತೇವವಿರುವ ಭಾಗವೆಲ್ಲಾ ಈ ಸೋಂಕಿನಿಂದ ಉರಿಯೂತಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ ತೇವವಾಗಿರಬೇಕಾಗಿದ್ದ ಗಂಟಲ ಒಣಭಾಗ ಶುಷ್ಕವಾಗುವುದು, ಗಂಟಲ ಕೆರೆತ, ನೋವು, ಉರಿ, ಆಹಾರ ನುಂಗಲು ಕಷ್ಟವಾಗುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ…

      ಸಾಮಾನ್ಯವಾಗಿ ಜ್ವರ ಬಂದಾಗ ಗಂಟಲಬೇನೆ ಎದುರಾಗುತ್ತದೆಯೋ ಅಥವಾ ಇದಕ್ಕೆ ತದ್ವಿರುದ್ದವೋ ಹೇಳಲು ಬರುವುದಿಲ್ಲ. ಈ ಸೋಂಕು ವೈರಸ್ಸುಗಳ ಹೊರತಾಗಿ ಸೂಕ್ಷ್ಮಜೀವಿಗಳಿಂದಲೂ ಆಗಮಿಸಬಹುದು. ಹಾಗಾಗಿ ವೈದ್ಯರು ಇವೆರಡಕ್ಕೂ ಮದ್ದು ನೀಡುತ್ತಾರೆ. ಇನ್ನು ಔಷಧಿಗಳ ಜೊತೆಗೇ ಕೆಲವು ಗಂಟಲನ್ನು ಸ್ವಚ್ಛಗೊಳಿಸುವ ದ್ರವಗಳನ್ನು ಗಳಗಳ ಮಾಡುವ ಮೂಲಕವೂ ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಬಹುದು. ಒಂದು ವೇಳೆ ನಿಮಗೆ ಎದುರಾಗ ಗಂಟಲಬೇನೆ ಸೂಕ್ಷ್ಮಜೀವಿಗಳಿಂದ ಎಂದು ತಿಳಿದುಬಂದರೆ, ಇದನ್ನು ಪರಿಹರಿಸಲು ಕೆಳಗೆ ವಿವರಿಸಿರುವ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು…

      ಉಪ್ಪು ನೀರಿನ ಗಳಗಳ :Related image

      ಗಂಟಲಬೇನೆ ಎದುರಾದ ಬಳಿಕ ತಕ್ಷಣವೇ ಅನುಸರಿಸಬೇಕಾದ ಈ ವಿಧಾನಕ್ಕಿಂತ ಸುಲಭವಾದದ್ದು ಇನ್ನಾವುದೂಇಲ್ಲ. ಈ ವಿಧಾನವನ್ನು ಬಲು ಪ್ರಾಚೀನ ಕಾಲದಿಂದಲೇ ನಮ್ಮ ಹಿರಿಯರು ಅನುಸರಿಸಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಒಂದರಿಂದ ಎರಡು ದೊಡ್ಡ ಚಮಚ ಉಪ್ಪನ್ನು ಉಗುರುಬೆಚ್ಚನೆನ ನೀರಿನಲ್ಲಿ (ಅಥವಾ ನಿಮಗೆ ಸಹಿಸಲು ಸಾಧ್ಯವಾಗುವಷ್ಟು ಬಿಸಿಯಾಗಿರುವ ) ನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗಾದರೂ ಗಳಗಳ ಮಾಡುವ ಮೂಲಕ ಗಂಟಲ ಬೇನೆ ಕಡಿಮೆ ಮಾಡಬಹುದು. ಉಪ್ಪಿನ ಆವರಣದಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಅಥವಾ ಸೂಕ್ಷ್ಮಜೀವಿಗಳು ಜೀವಂತ ಉಳಿಯುವುದಿರುವುದೇ ಇದರ ಗುಟ್ಟು.

ಹಸಿಶುಂಠಿಯ ನೀರು:

Image result for ginger water

      ಈ ನೀರಿನಿಂದ ಗಳಗಳ ಮಾಡುವ ಮೂಲಕವೂ ಸೂಕ್ಷ್ಮಜೀವಿಗಳನ್ನು ಕೊಂದು ಉರಿಯೂತ ನಿವಾರಿಸಿ ಗಂಟಲಬೇನೆಯಿಂದ ಶಮನ ಪಡೆಯಬಹುದು. ಇದಕ್ಕಾಗಿ ಒಂದು ಚಿಕ್ಕ ಚಮಚ ಜೇನು, ಅರ್ಧ ಚಿಕ್ಕ ಚಮಚ ಬೆಲ್ಲ ಅಥವಾ ಸಕ್ಕರೆ ಹಾಗೂ ಒಂದು ದೊಡ್ಡ ಚಮಚ ಲಿಂಬೆರಸವನ್ನು ಒಂದು ಲೋಟ ಬಿಸಿನೀರಿನಲ್ಲಿ ಹಾಕಿ ಸುಮಾರು ಅರ್ಧ ಇಂಚಿನಷ್ಟು ಹಸಿಶುಂಠಿಯನ್ನು ಜಜ್ಜಿ ಬೆರೆಸಿ ಈ ನೀರಿನಿಂದ ಸುಮಾರು ಐದರಿಂದ ಹತ್ತು ನಿಮಿಷಗಳವರೆಗೆ ಗಳಗಳ ಮಾಡಬೇಕು.

ಶಿರ್ಕಾ:

      ಅಡುಗೆಮನೆಯಲ್ಲಿ ಲಭ್ಯವಿರುವ ಈ ಶಿರ್ಕಾ ಕ್ಷಾರೀಯವಾಗಿದ್ದು ಇದರಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಈ ಗುಣ ಗಂಟಲಬೇನೆ ಕಡಿಮೆಗೊಳಿಸಲೂ ನೆರವಾಗುತ್ತದೆ. ಎರಡು ದೊಡ್ಡ ಚಮಚ ಶಿರ್ಕಾವನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಿ.

ಪುದಿನಾ ಎಣ್ಣೆ:Related image

      ಇದೊಂದು ಅವಶ್ಯಕ ತೈಲವಾಗಿದ್ದು ಗಂಟಲಬೇನೆಯನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾಗಿದೆ. ಒಂದು ಕಪ್ ಬಿಸಿನೀರಿನಲ್ಲಿ ನಾಲ್ಕೈದು ತೊಟ್ಟು ಈ ಎಣ್ಣೆಯನ್ನು ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸುಮಾರು ಐದು ನಿಮಿಷಗಳ ಕಾಲ ಗಳಗಳ ಮಾಡಿ.

ಅಡುಗೆ ಸೋಡಾ:

Related image

      ಇದರಲ್ಲಿರುವ ಸಂಯುಕ್ತಗಳು ಗಂಟಲಿನಲ್ಲಿರುವ ಸೋಂಕನ್ನು ಕಡಿಮೆ ಮಾಡಿ ಗಂಟಲಬೇನೆಯಿಂದ ಪರಿಹಾರ ಒದಗಿಸುತ್ತವೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿಗೆ ಕಾಲು ದೊಡ್ಡ ಚಮಚ ಅಡುಗೆ ಸೋಡಾ ಮತ್ತು ಕಾಲು ಚಿಕ್ಕ ಚಮಚ ಉಪ್ಪು ಬೆರೆಸಿ ನಿತ್ಯವೂ ಬೆಳಿಗ್ಗೆ ಐದು ನಿಮಿಷಗಳ ಕಾಲ ಗಳಗಳ ಮಾಡಿ. ಬೇನೆ ಇಲ್ಲವಾಗುವವರೆಗೂ ಮುಂದುವರೆಸಿ.

ಅರಿಶಿನದ ನೀರು:Image result for turmeric water

      ಗಂಟಲಬೇನೆಗೆ ಆಯುರ್ವೇದ ಸೂಚಿಸುವ ಚಿಕಿತ್ಸೆ ಎಂದರೆ ಅರಿಶಿನದ ನೀರು. ಈಗ ಈ ವಿಧಾನವನ್ನು ಅಧುನಿಕ ವಿಜ್ಞಾನವೂ ಪುರಸ್ಕರಿಸಿದೆ. ಅರಿಶಿನ ಒಂದು ಪ್ರಬಲ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಗಂಟಲ ತೇವಭಾಗದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಇದಕ್ಕಾಗಿ ಒಂದು ದೊಡ್ಡ ಚಮಚ ಅರಿಶಿನ ಪುಡಿಯನ್ನು ಒಂದು ಕಪ್ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಐದರಿಂದ ಹತ್ತು ನಿಮಿಷ ಗಳಗಳ ಮಾಡಿ.

ಮೆಂತೆ:

      ಮೆಂತೆಯಲ್ಲಿರುವ ಅಪಾರವಾದ ಗುಣಗಳಿಂದಾಗಿ ಇದಕ್ಕೆ ಸುಪರ್ ಫುಡ್ ಎಂಬ ಅನ್ವರ್ಥನಾಮವೂ ದಕ್ಕಿದೆ. ಗಂಟಲಬೇನೆ ನಿವಾರಿಸಲೂ ಮೆಂತೆ ಉತ್ತಮ ಆಯ್ಕೆಯಾಗಿದೆ. ಇದರ ಉರಿಯೂತ ನಿವಾರಕ ಗುಣ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ. ಒಂದು ದೊಡ್ಡ ಚಮಚ ಮೆಂತೆಯನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ಬಿಸಿನೀರಿನಲ್ಲಿ ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷ ಗಳಗಳ ಮಾಡಬೇಕು.

ಲವಂಗದ ಎಣ್ಣೆ:Related image

      ಬ್ಯಾಕ್ಟೀರಿಯಾಗಳ ಮೂಲಕ ಎದುರಾಗಿದ್ದ ಸೋಂಕು ಮತ್ತು ಇದರ ನೋವನ್ನು ಇಲ್ಲವಾಗಿಸಲು ಲವಂಗದ ಎಣ್ಣೆಯೂ ಉತ್ತಮ ಆಯ್ಕೆಯಾಗಿದೆ. ಒಂದು ಕಪ್ ಬಿಸಿನೀರಿಗೆ ನಾಲ್ಕೈದು ತೊಟ್ಟು ಲವಂಗದ ಎಣ್ಣೆಯನ್ನು ಬೆರೆಸಿ ಈ ನೀರಿನಿಂದ ಸುಮಾರು ಐದು ನಿಮಿಷಗಳವರೆಗೆ ಗಳಗಳ ಮಾಡುವ ಮೂಲಕ ಗಂಟಲಬೇನೆಯನ್ನು ಸುಲಭವಾಗಿ ನಿವಾರಿಸಬಹುದು.

 

ಟೊಮಾಟೋ ಜ್ಯೂಸ್:

Related image

      ಟೊಮಾಟೋಗಳಲ್ಲಿ ವಿಟಮಿನ್ ಸಿ ಹಾಗೂ ಲೈಕೋಪೀನ್ ಎಂಬ ಪೋಷಕಾಂಶ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕನ್ನು ಇಲ್ಲವಾಗಿಸುವ ಮೂಲಕ ಗಂಟಲಬೇನೆಯನ್ನು ನಿವಾರಿಸುತ್ತವೆ. ಇದಕ್ಕಾಗಿ ಅರ್ಧ ಕಪ್ ಟೊಮಾಟೋ ರಸವನ್ನು ಅರ್ಧ ಕಪ್ ನೀರಿಗೆ ಬೆರೆಸಿ ಈ ಮಿಶ್ರಣವನ್ನು ನೀವು ಸಹಿಸುವಷ್ಟು ಬಿಸಿಮಾಡಿ. ಈ ಮಿಶ್ರಣದಿಂದ ಐದು ನಿಮಿಷ ಗಳಗಳ ಮಾಡುವ ಮೂಲಕ ಗಂಟಲಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

  • ಸಲಹೆ:

      ಈ ಲೇಖನದಲ್ಲಿ ಮುಕ್ಕಳಿಸುವ ಬದಲು ಗಳಗಳ ಎಂಬ ಪದವನ್ನು ಉಪಯೋಗಿಸಲಾಗಿದೆ. ಏಕೆಂದರೆ ಮುಕ್ಕಳಿಸು ಎಂದರೆ ತಲೆ ಎತ್ತದೇ ಕೆನ್ನೆಗಳಿಂದ ಬಾಯಿಯಲ್ಲಿರುವ ದ್ರವವನ್ನು ಬಾಯಿಯ ತುಂಬಾ ಹೊರಳಾಡಿಸುವುದಾಗಿದೆ. ಆದರೆ ಗಳಗಳ ಎಂದರೆ ನೀರನ್ನು ಬಾಯಿಯಲ್ಲಿ ಹಾಕಿದ ಬಳಿಕ ಸಾಧ್ಯವಾದಷ್ಟು ತಲೆಯನ್ನು ಹಿಂದಕ್ಕೆ ಬಾಗಿಸಿ ಉಸಿರನ್ನು ನಿಧಾನವಾಗಿ ಬಾಯಿಯ ಮೂಲಕ ಹೊರಬಿಡುವಾಗ ಗಳಗಳ ಸದ್ದು ಬರಬೇಕು. ಈ ಸದ್ದಿನಿಂದಾಗಿಯೇ ಗಳಗಳ ಎಂದು ನಮ್ಮ ಹಿರಿಯರು ಕರೆದಿದ್ದಾರೆ.

      ಕೆಲವೊಮ್ಮೆ ನಾಲ್ಕು ಜನರ ನಡುವೆ ಇರುವಾಗ ಗಂಟಲಲ್ಲಿ ತುರಿಕೆಯಾದರೆ ಕೆಮ್ಮಲೂ ಆಗದೇ ಕೆಮ್ಮದಿರಲೂ ಆಗದೇ ಇಬ್ಬಂದಿ ಅನುಭವಿಸುವಂತಾಗುತ್ತದೆ. ತಕ್ಷಣ ಇದನ್ನು ಕಡಿಮೆ ಮಾಡಬೇಕೆಂದರೆ ಹೇಗೆ ಎಂದು ಆ ಕ್ಷಣ ಎಲ್ಲರೂ ಯೋಚಿಸುತ್ತಾರೆ… ಇಂತಹ ಸಮಸ್ಯೆ ನಿಮಗೂ ಕಾಡಿರಬಹುದು ಅಲ್ಲವೇ? ಚಿಂತಿಸದಿರಿ ಇವೆಲ್ದಕ್ಕೆ ಇಲ್ಲಿದೆ ನೋಡಿ ಸರಳ ಪರಿಹಾರಗಳು ಬೇವಿನ ನೀರಿನಿಂದ ಗಳಗಳ ಮಾಡುವುದು ಬೇವಿನ ನೀರಿನಿಂದ ಗಳಗಳ ಅಥವಾ ಗಲಬರಿಕೆ ಮಾಡಿಕೊಳ್ಳುವ ಮೂಲಕ ಗಂಟಲ ಕೆರೆತ ಶೀಘ್ರವಾಗಿ ಗುಣವಾಗುತ್ತದೆ.

      ಸುಮಾರು ಇಪ್ಪತ್ತರಿಂದ ಮೂವತ್ತು ಎಲೆಗಳನ್ನು ಕೊಂಚ ನೀರಿನಲ್ಲಿ ಚೆನ್ನಾಗಿ ಹಾಕಿ ಐದು ನಿಮಿಷ ಕುದಿಯುತ್ತಿರುವಂತೆ ಮಾಡಿ. ಬಳಿಕ ಉರಿ ಆರಿಸಿ ತಣಿಯಲು ಬಿಡಿ. ನೀರು ಸುಮಾರು ಉಗುರು ಬೆಚ್ಚಾಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರಿನಿಂದ ಗಂಟಲ ಕೆರೆತವಿದ್ದಾಗ ಮುಕ್ಕಳಿಸಿ, ವಿಶೇಷವಾಗಿ ಬಾಯಿ ಮೇಲೆತ್ತಿ ಗಂಟಲಿನಲ್ಲಿ ಗಳಗಳ ಮಾಡಿ. ಇದರ ಅದ್ಭುತ ಪರಿಣಾಮವನ್ನು ತಕ್ಷಣವೇ ಅರಿಯಿರಿ.

ಚಿಕನ್ ಸೂಪ್ :Related image

      ಗಂಟಲ ಬೇನೆಯನ್ನು ಶೀಘ್ರವಾಗಿ ಗುಣಪಡಿಸಲು ಚಿಕನ್ ಸೂಪ್ ಸಹಾ ಪರಿಣಾಮಕಾರಿಯಾಗಿದೆ. ಇದರ ಮಧ್ಯಮ ಪ್ರಾಬಲ್ಯದ ಉರಿಯೂತ ನಿವಾರಕ ಗುಣ ಗಂಟಲ ಬೇನೆಗೆ ಕಾರಣವಾದ ಕಫವನ್ನು ನಿಧಾನವಾಗಿ ನಿವಾರಿಸಿ ಇದರ ಸಂಪರ್ಕಕ್ಕೆ ವೈರಸ್ಸುಗಳನ್ನು ನಿಯಂತ್ರಿಸುವ ಮೂಲಕ ತೊಂದರೆಯನ್ನು ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತದೆ.

      ಗಂಟಲ ಬೇನೆ ಎದುರಾದ ತಕ್ಷಣ ಒಂದು ದೊಡ್ಡ ಬೋಗುಣಿಯಷ್ಟು ಬಿಸಿಬಿಸಿಯಾದ ಚಿಕನ್ ಸೂಪ್ ಹೀರುವುದರಿಂದ ಉತ್ತಮ ಪರಿಹಾರ ಪಡೆಯಬಹುದು. ಜೇನು ಮತ್ತು ಲಿಂಬೆ ಸಮ ಪ್ರಮಾಣದಲ್ಲಿ ಜೇನು ಮತ್ತು ಲಿಂಬೆಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದಲೂ ಗಂಟಲ ಬೇನೆ ಶೀಘ್ರವಾಗಿ ಗುಣವಾಗುತ್ತದೆ. ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿಮಾಡಿ ತಲಾ ಒಂದು ಚಿಕ್ಕ ಚಮಚ ಜೇನು ಮತ್ತು ಲಿಂಬೆರಸವನ್ನು ಬೆರೆಸಿ ಬಿಸಿಬಿಸಿಯಾಗಿ ಸೇವಿಸುವ ಮೂಲಕ ಗಂಟಲ ತೊಂದರೆ ಹಾಗೂ ಇದರಿಂದಾಗಿ ಎದುರಾಗಿದ್ದ ನೋವು ಕಡಿಮೆಯಾಗುತ್ತದೆ.

ಕ್ಯಾರೆಟ್ ಸೂಪ್:Related image

      ಗಂಟಲಲ್ಲಿ ಬೇನೆ ಇದ್ದಾಗ ಹೆಲವು ಹಸಿ ಕ್ಯಾರೆಟ್ಟುಗಳನ್ನು ಜಗಿದು ನುಂಗುವುದು ಉತ್ತಮವಾದರೂ ಇದನ್ನು ನುಂಗುವಾಗ ಗಂಟಲಿಗೆ ನೋವಾದರೆ ಕ್ಯಾರೆಟ್ ಸೂಪ್ ತಯಾರಿಸಿ ತಿನ್ನುವುದೇ ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ವಿಟಮಿನ್ ಎ, ಸಿ ಹಾಗೂ ಪೊಟ್ಯಾಶಿಯಂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಗಂಟಲ ಬೇನೆಯನ್ನು ತಕ್ಷಣವೇ ಕಡಿಮೆಗೊಳಿಸಲು ನೆರವಾಗುತ್ತದೆ. 

ಹಸಿ ಶುಂಠಿ :

Image result for Shunti

      ಹಸಿಶುಂಠಿಯನ್ನು ಹಲವಾರು ಕಾಯಿಲೆಗಳಿಗೆ ಔಷಧಿಯಾಗಿ ಬಳಸಬಹುದು. ಗಂಟಲ ಬೇನೆಯ ವಿಷಯ ಬಂದಾಗ ಇದರ ಬಳಿ ಹಲವಾರು ಪ್ರಬಲ ಗುಣಪಡಿಸುವ ಅಂಶಗಳಿಗೆ. ವಿಶೇಷವಾಗಿ ಗಂಟಲ ಬೇನೆಯ ಮೂಲಕ ಎದುರಾಗಿದ್ದ ಕುಹರದ ಸೋಂಕು  ನಿವಾರಣೆಯಾಗುತ್ತದೆ ಹಾಗೂ ಕಫ ಸಡಿಲಗೊಂಡು ಕಟ್ಟಿಕೊಂಡಿದ್ದ ಮೂಗು ಗಂಟಲು ತೆರವಾಗುತ್ತವೆ. ಇದರ ಜೊತೆಗೇ ಹಸಿಶುಂಠಿಯ ಉರಿಯೂತ ನಿವಾರಕ ಗುಣ ಗಂಟಲ ಭಾಗದಲ್ಲಿ ಎದುರಾಗಿದ್ದ ಉರಿಯುತವನ್ನು ನಿವಾರಿಸಲೂ ನೆರವಾಗುತ್ತದೆ.

ಬಿಸಿಬಿಸಿ ಅರಿಶಿನ ಹಾಲು :Image result for turmeric milk

      ಗಂಟಲು ಕೆರೆತ ಕಾಣಿಸಿಕೊಂಡಾಗ ಮನೆಮದ್ದನ್ನು ಬಳಸಿದರೆ ಅದರಿಂದ ಮುಕ್ತಿ ಪಡೆಯಬಹುದು. ಅರಿಶಿನ ಹಾಕಿದ ಹಾಲನ್ನು ದಿನದಲ್ಲಿ 2-3 ಸಲ ಕುಡಿಯುವುದರಿಂದ ಗಂಟಲು ಕೆರೆತ ನಿವಾರಿಸಬಹುದು. ಅರಿಶಿನದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಉರಿಯೂತ ಶಮನಕಾರಿ ಗುಣಗಳಿವೆ. ಇದು ಬ್ಯಾಕ್ಟೀರಿಯಾ ಬೆಳೆಯುವುದನ್ನು ತಡೆದು ಉರಿಯೂತವನ್ನು ಶಮನಗೊಳಿಸುತ್ತದೆ. ಇದರಿಂದ ಗಂಟಲಿನಲ್ಲಿನ ಕೆರೆತ ಕಡಿಮೆಯಾಗುತ್ತದೆ.

      *ಒಂದು ಕುಟ್ಟಾಣಿಯನ್ನು ತೆಗೆದುಕೊಂಡು ಅದಕ್ಕೆ ಸುಮಾರು 6-7 ಕರಿಮೆಣಸನ್ನು ಹಾಕಿ ಹುಡಿ ಮಾಡಿಕೊಳ್ಳಿ. ಈಗ ಒಂದು ಲೋಟ ಹಾಲನ್ನು ತೆಗೆದುಕೊಂಡು 5-10 ನಿಮಿಷ ಕುದಿಸಿ. *ಹಾಲು ಕುದಿಯುತ್ತಿರುವಂತೆ ಅರ್ಧ ಟೀ ಚಮಚ ಅರಿಶಿನ ಮತ್ತು ಸ್ವಲ್ಪ ಹುಡಿ ಮಾಡಿದ ಕರಿಮೆಣಸಿನ ಹುಡಿಯನ್ನು ಹಾಕಿ. *ಹಾಲಿಗೆ ಒಂದು ಚಮಚ ಸಕ್ಕರೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಬಳಿಕ ಗ್ಯಾಸ್ ಒಲೆ ಆಫ್ ಮಾಡಿ ಬಿಸಿಯಾಗಿರುವಾಗಲೇ ಈ ಮಿಶ್ರಣವನ್ನು ಕುಡಿಯಿರಿ. *ಬೆಳಿಗ್ಗೆ ಉಪಹಾರ ಸೇವಿಸಿದ ಬಳಿಕ ಮತ್ತು ರಾತ್ರಿ ನಿದ್ರಿಸುವ ಮೊದಲು ಇದನ್ನು ಸೇವಿಸಿ. ಇದು ಗಂಟಲು ಕೆರೆತವನ್ನು ನಿವಾರಿಸುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap