ಗಂಡನನ್ನು ಬಿಟ್ಟು ಪ್ರಿಯಕರನ ಹಿಂದೆ ಹೋದಾಕೆ ದುರಂತ ಅಂತ್ಯ.!

ಚಿತ್ರದುರ್ಗ:ಗಂಡನನ್ನು ಬಿಟ್ಟು ಪ್ರಿಯಕರನ ಹಿಂದೆ ಹೋದಾಕೆ ದುರಂತ ಅಂತ್ಯ.! ಸುದ್ದಿ ತಿಳಿದು ವಿಷ ಸೇವಿಸಿದ ಪ್ರಿಯಕರ

 ಈಗಾಗಲೇ ಬೇರೊಬ್ಬನ ಜೊತೆಗೆ ಮದುವೆಯಾಗಿದ್ದಂತ ಆಕೆ, ಗಂಡನನ್ನು ಬಿಟ್ಟು 3 ತಿಂಗಳ ಹಿಂದೆ ಪ್ರಿಯಕರನೊಂದಿಗೆ ವಾಸವಾಗಿದ್ದಳು. ಇದೀಗ ಗಂಡನನ್ನು ತೊರೆದು, ಪ್ರಿಯಕರನ ಜೊತೆಗಿದ್ದಂತ ಆ ಯುವತಿ ದುರಂತ ಅಂತ್ಯಕಂಡಿರುವಂತ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

   ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದ ದಿವ್ಯಾ(22) ಎಂಬಾಕೆ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿ ಗಂಡನನ್ನು ಬಿಟ್ಟು ಪ್ರಿಯಕರ ಮಂಜುನಾಥ್ ಎಂಬುವರೊಂದಿಗೆ ಹಿರಿಯೂರು ಪಟ್ಟಣದಲ್ಲಿ ವಾಸವಾಗಿದ್ದಳು.

ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದಂತ ಆಕೆ, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಳು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಕಾರಣ, ಈ ವಿಷಯ ತಿಳಿದಂತ ಪ್ರಿಯಕರ ಮಂಜುನಾಥ್ ಕೂಡ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆತನನ್ನು ಕೂಡ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ದಿವ್ಯಾ ಪೋಷಕರು ಮಂಜುನಾಥ್ ಹತ್ಯೆ ಮಾಡಿದ್ದಾನೆ ಎಂಬುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ