ಗಂಧದ ಮರ ಕಳ್ಳ ಸಾಗಾಣಿಕೆ

ಬೆಂಗಳೂರು

ವಿಜಯನಗರದ ಮೂರು ಕಡೆಗಳಲ್ಲಿ ಗಂಧದ ಮರಗಳನ್ನು ಕತ್ತರಿಸಿಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ತಡರಾತ್ರಿ ಯಂತ್ರಗಳನ್ನು ಬಳಸಿ ಶಬ್ದ ಬಾರದಂತೆ ದುಷ್ಕರ್ಮಿಗಳು ಗಂಧದ ಮರಗಳನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದು ಅವರಿಗಾಗಿ ವಿಜಯನಗ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.

ವಿಜಯನಗರ ಬಳಿಯಿರುವ ಫೇಮಸ್ ಕ್ಲಬ್ ಹಾಗೂ ಅದರ ಪಕ್ಕದಲ್ಲಿರುವ ಸರ್ಕಾರಿ ಕಾಲೇಜಿನ ಒಳಗಿದ್ದ ಗಂಧದ ಮರವನ್ನು ಒಂದು ವಾರದ ಹಿಂದೆ ದುಷ್ಕರ್ಮಿಗಳು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ.

ಇದಲ್ಲದೇ ಆರ್‍ಬಿಐ ವಸತಿಗೃಹಗಳ ಬಳಿಯೂ ಗಂಧದ ಮರ ಕಳ್ಳತನ ನಡೆದಿದ್ದು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಜಯನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Recent Articles

spot_img

Related Stories

Share via
Copy link