ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಕ್ರಮ: 28 ಕೋಟಿ.ರೂ.ಗೆ ಕ್ರಿಯಾಯೋಜನೆಗೆ ಅನುಮೋದನೆ

ಚಿತ್ರದುರ್ಗ;

    ಚಿತ್ರದುರ್ಗ ಜಿಲ್ಲೆಯಲ್ಲಿ ನಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ 28 ಕೋಟಿರೂ. ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವ ಕಾಮಗಾರಿಗಳ ಕ್ರಿಯಾಯೋಜನೆಗೆ ಈಗಾಗಲೆ ಆಡಳಿತಾತ್ಮಕ ಅನುಮೋದನೆದೊರೆತಿದ್ದು, ಜಿಲ್ಲಾ ಖನಿಜ ಪ್ರತಿಷ್ಠಾನದ ಸಮಿತಿಗೆ ಜಿಲ್ಲಾ ಪಂಚಾಯತಿ ಸದಸ್ಯರನ್ನೂ ಸೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದುಜಿಲ್ಲಾ ಪಂಚಾಯತಿಅಧ್ಯಕ್ಷೆ ಸೌಭಾಗ್ಯ ಬಸವರಾಜನ್‍ಅವರು ಹೇಳಿದರು.

     ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿಏರ್ಪಡಿಸಲಾದಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಸುಪ್ರಿಂಕೋರ್ಟ್‍ಆದೇಶದ ಪ್ರಕಾರಜಿಲ್ಲೆಯಲ್ಲಿನ ಮುಖ್ಯಖನಿಜ ಹಾಗೂ ಉಪಖನಿಜಗಳ ಮೇಲೆ ವಿಧಿಸಲಾಗುವರಾಜಧನದ ಮೊತ್ತವನ್ನುಜಿಲ್ಲಾಖನಿಜ ಪ್ರತಿಷ್ಠಾನದ ಉಳಿತಾಯ ಖಾತೆಗೆಜಮಾ ಮಾಡಲಾಗುತ್ತಿದೆ.ಕಳೆದ ಆಗಸ್ಟ್ ವರೆಗೆಒಟ್ಟು 64.51 ಕೋಟಿರೂ.ಜಮಾಆಗಿದೆ. ಈ ಪೈಕಿ ಪ್ರಥಮ ಹಂತದಲ್ಲಿ 28 ಕೋಟಿ ರೂ.ಗಳ ವೆಚ್ಚದಲ್ಲಿಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿದ್ದು, ಈಗಾಗಲೆ ಕ್ರಿಯಾಯೋಜನೆಗೆ ಆಡಳಿತಾತ್ಮಕ ಅನುಮೋದನೆದೊರೆತಿದೆ.ಸಂಬಂಧಪಟ್ಟ ಅನುಷ್ಠಾನ ಇಲಾಖೆಗಳಿಗೆ ಈಗಾಗಲೆ ಕಾಮಗಾರಿಗಳ ವಿವರವನ್ನು ನೀಡಲಾಗಿದೆಎಂದು ಸೌಭಾಗ್ಯ ಬಸವರಾಜನ್‍ಅವರು ಹೇಳಿದರು.

     ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆಕ್ರಿಯಾಯೋಜನೆರೂಪಿಸುವ ಸಂದರ್ಭದಲ್ಲಿಜಿಲ್ಲಾ ಪಂಚಾಯತಿ ಸದಸ್ಯರ ಗಮನಕ್ಕೆ ತರುವುದು ಸೂಕ್ತ.ಹೀಗಾಗಿ ಜಿಲ್ಲಾಖನಿಜ ಪ್ರತಿಷ್ಠಾನದ ಸಮಿತಿಗೆಆಯಾ ಗ್ರಾಮಗಳ ವ್ಯಾಪ್ತಿಯಜಿಲ್ಲಾ ಪಂಚಾಯತಿ ಸದಸ್ಯರನ್ನೂ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದುಜಿಲ್ಲಾ ಪಂಚಾಯತಿ ಸದಸ್ಯರು ಸಭೆಗೆ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತಿಅಧ್ಯಕ್ಷರು, ಸರ್ಕಾರದ ಮಾರ್ಗಸೂಚಿಯಂತೆ ಈಗಾಗಲೆ ಜಿಲ್ಲಾಉಸ್ತುವಾರಿ ಸಚಿವರಅಧ್ಯಕ್ಷತೆಯಲ್ಲಿಜಿಲ್ಲಾಖನಿಜ ಪ್ರತಿಷ್ಠಾನ ಸಮಿತಿಯನ್ನುರಚಿಸಲಾಗಿದೆ.

     ಸಮಿತಿಯಲ್ಲಿ, ಸಂಸದರು, ಶಾಸಕರು, ಜಿ.ಪಂ. ಮುಖ್ಯಕಾರ್ಯನಿವಾಹಕ ಅಧಿಕಾರಿಗಳು ಸೇರಿದಂತೆ ವಿವಿಧ ಅಧಿಕಾರಿಗಳಿದ್ದಾರೆ.ಜಿಲ್ಲಾ ಪಂಚಾಯತಿ ಸದಸ್ಯರ ಮನವಿಯ ಮೇರೆಗೆ, ಈ ಕುರಿತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದುಎಂದರು.

      ಆದರ್ಶ ಗ್ರಾಮ ಯೋಜನೆ ಕಾಮಗಾರಿ ಕೂಡಲೆ ಪ್ರಾರಂಭಿಸಿ : ಸಮಾಜಕಲ್ಯಾಣ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಪಟ್ರೆಹಳ್ಳಿ, ಆದಿವಾಲ ಫಾರಂ, ಭರಂಗಿರಿ, ಕಂಬದಹಳ್ಳಿ, ವೀರನಾಗತಿಹಳ್ಳಿ ಸೇರಿದಂತೆಒಟ್ಟು 08 ಗ್ರಾಮಗಳಲ್ಲಿ ವಿವಿಧಅಭಿವೃದ್ಧಿಕಾಮಗಾರಿ ಕೈಗೊಳ್ಳಲು ಕಳೆದ 2017 ರ ವರ್ಷಾಂತ್ಯದಲ್ಲಿಅನುಮೋದನೆ ನೀಡಿ, ಕೆ.ಆರ್.ಐ.ಡಿ.ಎಲ್. ಗೆ ಅಗತ್ಯಅನುದಾನ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಈ ಹಿಂದಿನ ಸರ್ಕಾರದಅವಧಿಯಲ್ಲಿಯೇ ಶಾಸಕರುಕಾಮಗಾರಿಗೆ ಭೂಮಿ ಪೂಜೆ ಕೈಗೊಂಡಿದ್ದಾರೆ .ಆದಾಗ್ಯೂ ಕೆ.ಆರ್.ಐ.ಡಿ.ಎಲ್. ಏಜೆನ್ಸಿಯವರುಕಾಮಗಾರಿ ಪ್ರಾರಂಭಿಸಿಲ್ಲ.ಅನುಮೋದನೆಗೊಂಡಕಾಮಗಾರಿ ಪ್ರಾರಂಭಿಸಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು ಎಂದುಜಿ.ಪಂ. ಸದಸ್ಯ ನಾಗೇಂದ್ರ ನಾಯ್ಕಅವರು ಒತ್ತಾಯಿಸಿದರು.ಇದಕ್ಕೆ ಸ್ಪಂದಿಸಿದ ಜಿಲ್ಲಾ ಪಂಚಾಯತಿಅಧ್ಯಕ್ಷರು, ಈಗಾಗಲೆ ಕಾಮಗಾರಿಗಳಿಗೆ ಭೂಮಿಪೂಜೆಆಗಿರುವುದರಿಂದ, ಕಾಮಗಾರಿಗೆ ಮತ್ತೊಮ್ಮೆ ಭೂಮಿಪೂಜೆ ಕೈಗೊಳ್ಳುವ ಅಗತ್ಯವಿರುವುದಿಲ್ಲ.ಕೂಡಲೆ ಅಧಿಕಾರಿಗಳು ಕಾಮಗಾರಿ ಪ್ರಾರಂಭಿಸಿ, ಸಂಬಂಧಪಟ್ಟ ವ್ಯಾಪ್ತಿಯಎಲ್ಲಜನಪ್ರತಿನಿಧಿಗಳಿಗೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸುವಂತೆಆಹ್ವಾನಿಸಬೇಕು ಎಂದುಕೆಆರ್‍ಐಡಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಪರಿಶೀಲನೆಗೆ ಸಮಿತಿಗಳ ರಚನೆ : ಜಿಲ್ಲೆಯಲ್ಲಿ ಹಲವೆಡೆ ಸೋಲಾರ್ ವಿದ್ಯುತ್ ಘಟಕಗಳು ಸ್ಥಾಪಿಸುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ ಸೋಲಾರ್ ವಿದ್ಯುತ್ ಘಟಕಗಳು ಪ್ರಾರಂಭಕ್ಕೂ ಮುನ್ನಅಗತ್ಯ ನಿಯಮಗಳನ್ನು ಪಾಲಿಸುತ್ತಿಲ್ಲ.ಸಂಬಂಧಪಟ್ಟಗ್ರಾಮ ಪಂಚಾಯತಿಗಳಿಂದ ಎನ್‍ಓಸಿ ಪಡೆಯುತ್ತಿಲ್ಲ .ಆಕ್ಷೇಪಣೆ ವ್ಯಕ್ತವಾದ ಬಳಿಕವೇ, ನಿಯಮ ಪಾಲಿಸಲು ಮುಂದಾಗುತ್ತಿರುವುದು ಕಂಡುಬಂದಿದೆ . ಆದರೆ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯತಿ ಅಧಿಕಾರಿಗಳು ಯಾವುದೇಕ್ರಮ ಕೈಗೊಳ್ಳುತ್ತಿಲ್ಲ ಎಂದುಜಿಲ್ಲಾ ಪಂಚಾಯತಿಯ ಸದಸ್ಯರು ಪ್ರಸ್ತಾಪಿಸಿದರು.

      ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತಿಅಧ್ಯಕ್ಷರು, ಜಿಲ್ಲೆಯಲ್ಲಿರುವ ಸೋಲಾರ್ ವಿದ್ಯುತ್ ಘಟಕಗಳ ಪರಿಶೀಲನೆಗೆ ಜಿಲ್ಲಾ ಪಂಚಾಯಿತಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ, ಪರಿಶೀಲನೆ ನಡೆಸಿ ನಿಯಮ ಬಾಹಿರವಾಗಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧಅಗತ್ಯಕ್ರಮಜರುಗಿಸಲಾಗುವುದುಎಂದರು.

      ಬಿ.ಆರ್.ಜಿ.ಎಫ್‍ ಅನುದಾನದಡಿ ಜಿಲ್ಲೆಯ 183 ಗ್ರಾಮ ಪಂಚಾಯತಿಗಳಿಗೆ ಅಕ್ಷರದಾಸೋಹಯೋಜನೆಗಾಗಿ ಅಕ್ಕಿ, ಬೇಳೆ ಇತ್ಯಾದಿ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ಕಂಟೈನರ್‍ಗಳನ್ನು ಖರೀದಿಸಲು ಅನುಮೋದನೆ ನೀಡಲಾಗಿದೆ.ಆದರೆ ಬಹಳಷ್ಟು ಗ್ರಾಮ ಪಂಚಾಯತಿಗಳಲ್ಲಿ ಗುಣಮಟ್ಟದಕಂಟೈನರ್ ಖರೀದಿಸಿಲ್ಲ, ಇದರಿಂದ ಸರ್ಕಾರದಅನುದಾನ ವ್ಯರ್ಥವಾಗುತ್ತಿದೆ ಎಂದು ಜಿ.ಪಂ. ಸದಸ್ಯರು ಆರೋಪಿಸಿದರು.ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಮಾತನಾಡಿ, ಗ್ರಾಮ ಪಂಚಾಯತಿಗಳು ಪಾರದರ್ಶಕಕಾಯ್ದೆಯನ್ವಯ ಪ್ರಕ್ರಿಯೆಕೈಗೊಂಡು, ಖರೀದಿ ಪ್ರಕ್ರಿಯೆಕೈಗೊಂಡಿದ್ದಾರೆ. ಈ ಕುರಿತು ಆಯಾ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವರದಿ ಪಡೆಯಲಾಗಿದೆಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಅಧ್ಯಕ್ಷರಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಪರಿಶೀಲಿಸಲಾಗುವುದು.ಕಂಟೈನರ್‍ಗಳ ಗುಣಮಟ್ಟ ಕಳಪೆಯಾಗಿದ್ದಲ್ಲಿ, ಅವುಗಳನ್ನು ಬದಲಾಯಿಸಿ, ಉತ್ತಮಗುಣಮಟ್ಟದ ಕಂಟೈನರ್‍ಗಳನ್ನು ಪಡೆದುಕೊಳ್ಳಲಾಗುವುದು ಎಂದರು.

         ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಎಸ್.ಪಿ.ಸುಶೀಲಮ್ಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಅನಂತ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ಕೆ.ಶಿವಮೂರ್ತಿ ಸೇರಿದಂತೆ ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap