ದಾವಣಗೆರೆ:
ನಗರದ ನಿಟ್ಟುವಳ್ಳಿಯ ರಾಜೇಶ್ವರಿ ಬಡಾವಣೆಯಲ್ಲಿ 7ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸುವರ್ಣ ಕರ್ನಾಟಕ ವೇದಿಕೆ ಹಾಗೂ ಗೌರಿಸುತ ಫ್ರೇಂಡ್ಸ್ ಗ್ರೂಪ್ ಸಂಯುಕ್ತಾಶ್ರಯದಲ್ಲಿ ಭಾನುವಾರ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು 16 ಸ್ಪರ್ಧಿಗಳು ಭಾಗವಹಿಸಿದ್ದರು. ಚೈತ್ರ- ಪ್ರಥಮ, ಅನುಷಾ- ದ್ವೀತಿಯ, ವಿನುತಾ- ತೃತಿಯ ಹಾಗೂ ಆಶಾ, ಗಾಯತ್ರಿ- ನಾಲ್ಕನೆ ಬಹುಮಾನ ಪಡೆದರು. ವಿಜೇತರಿಗೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ವೇದಿಕೆಯ ಸಂಸ್ಥಾಪಕ, ರಾಜ್ಯಧ್ಯಕ್ಷ ಸಂತೋಷಕುಮಾರ್ ಆರ್, ಅಂತಾರಾಷ್ಟ್ರೀಯ ಯೋಗಪಟು, ಗಿನ್ನಿಸ್ ದಾಖಲೆ ಪ್ರಶಸ್ತಿ ಪುರಸ್ಕೃತ ಎನ್.ಪರಶುರಾಮ್, ಮಹಾಂತೇಶ ಒಣರೊಟ್ಟಿ, ಜಿಲ್ಲಾಧ್ಯಕ್ಷ ವಿರೂಪಾಕ್ಷಿ ಸಿ., ಮಹ್ಮದ್‍ಅಲಿ, ಮಂಜುನಾಥ ಬಾಳೆಕಾಯಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.