ಗರ್ಭಾವಸ್ತೆಯಲ್ಲಿ ತಾಯಿಗೆ ಪೌಷಿಕಾಂಶ ಕೊರತೆಯಾದರೆ ಆರೋಗ್ಯವಂತ ಶಿಸು ಜನಿಸುವುದಿಲ್ಲ

ಹರಿಹರ :

 

      ಗರ್ಭಾವಸ್ತೆಯಲ್ಲಿ ತಾಯಿಗೆ ಪೌಷಿಕಾಂಶ ಕೊರತೆಯಾದರೆ ಭ್ರೂಣ ಸರಿಯಾಗಿ ಬೆಳೆಯುವುದಿಲ್ಲ, ಆರೋಗ್ಯವಂತ ಶಿಸು ಜನಿಸುವುದಿಲ್ಲ ಎಂದು ಇಲ್ಲಿನ ಸಿವಿಲ್ ಹಾಗೂ ಜೆಎಂಎಫ್‍ಸಿ ಕೋರ್ಟ್ ನ್ಯಾಯಾಧೀಶರಾದ ಬಿ.ಸುಮಲತಾ ಹೇಳಿದರು.

      ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇಲ್ಲಿನ ಹರ್ಲಾಪುರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

      ತಾಯಿಯ ಗರ್ಭದಲ್ಲಿ ಬ್ರೂಣ ಬೆಳೆದು ನಂತರ ಶಿಸುವಾಗಿ, ಮಗುವಾಗುವುದರಿಂದ ಹಿಡಿದು ಸಾಯುವವರೆಗೂ ನಮ್ಮ ಜೀವಕ್ಕೆ ಪೌಷ್ಟಿಕಾಂಶ ಅತ್ಯಗತ್ಯ. ಶಿಸುವಿಗೆ ಸರಿಯಾಗಿ ಪೌಷ್ಟಿಕ ಆಹಾರ ದೊರೆಯದಿದ್ದರೆ ಸದೃಡ ಮಗುವಾಗಲಾರದು, ನಂತರವೂ ಪೌಷ್ಟಿಕ ಆಹಾರ ಸೇವಿಸದಿದ್ದರೆ ಉತ್ತಮ ಆರೋಗ್ಯ ಹೊಂದಿ ಬಹುಕಾಲ ಬಾಳಲಾಗದು ಎಂದರು.

      ಸಾರ್ವಜನಿಕ ಆಸ್ಪತ್ರೆ ಮಕ್ಕಳ ತಜ್ಞೆ ಡಾ|ಪಂಕಜಾ ಮಾತನಾಡಿ, ಆರೋಗ್ಯ ರಕ್ಷಣೆಯಲ್ಲಿ ಆಹಾರ ಸೇವನೆಯ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಇಂದಿನ ಆಧುನಿಕ ಜೀವನಶೈಲಿಯಲ್ಲಿ ನಾವು ಪರಿವರ್ತಿತ ಆಹಾರಗಳನ್ನು ಸೇವಿಸುತ್ತಿರುವುದರಿಂದ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತಿದೆ ಎಂದರು.

      ಸಹಸ್ರಾರು ವರ್ಷಗಳ ಸಂಪ್ರದಾಯಿಕ ಆಹಾರ ಪದ್ಧತಿಯನ್ನು ಬದಿಗೊತ್ತಿ ಅಕಾಲ ಭೋಜನ ಹಾಗೂ ಫಾಸ್ಟ್ ಫುಡ್ ಸಂಸ್ಕೃತಿಗಳನ್ನು ಬೆಳೆಸಿರುವುದರಿಂದ ಅಜೀರ್ಣ, ಆಮ್ಲೋತ್ಪತ್ತಿಗೆ ಕಾರಣವಾಗಿ ಅಪೌಷ್ಟಿಕತೆ ಹಾಗೂ ವಿವಿಧ ರೋಗಗಳಿಗೆ ಆಹ್ವಾನವಿತ್ತಂತ್ತಾಗುತ್ತದೆ. ಅಪೌಷ್ಟಿಕತೆಯಿಂದ ಉಂಟಾಗುವ ಶಿಶುಮರಣ ಸಂಖ್ಯೆಯನ್ನು ಶೂನ್ಯದತ್ತ ಕೊಂಡೊಯ್ಯುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

      ವಕೀಲರ ಸಂಘದ ಅಧ್ಯಕ್ಷ ನಾಗರಾಜ್ ಹಲವಾಗಲು ಮಾತನಾಡಿ, ಮನುಷ್ಯನ ಆರೋಗ್ಯ ಹಾಗೂ ಬೆಳವಣಿಗೆಯಲ್ಲಿ ಪೌಷ್ಟಿಕಾಂಶ ಆಹಾರ ಬಹು ಮುಖ್ಯ. ವ್ಯಕ್ತಿಗತವಾಗಿ ಉತ್ಪಾದಕತೆಯ ಹೆಚ್ಚಳ, ಆರ್ಥಿಕ ಬೆಳವಣಿಗೆ ಆ ಮೂಲಕ ಒಂದು ದೇಶದ ಅಭಿವೃದ್ದಿಗೆ ಪೌಷ್ಟಿಕ ಆಹಾರ ಸೇವಿನೆ ಅತ್ಯಗತ್ಯ. ಮುಖ್ಯ ಪೌಷ್ಟಿಕಾಂಶ, ಸಮತೋಲನ ಆಹಾರ ಸೇವನೆ, ಯಾವ ಆಹಾರ ಪದಾರ್ಥದಲ್ಲಿ ಯಾವ ಪೌಷ್ಟಿಕಾಂಶ ಎಷ್ಟು ಪ್ರಮಾಣದಲ್ಲಿದೆ ಎಂಬ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

      ವಕೀಲರಾದ ಜಿ.ಎಚ್.ಭಾಗೀರಥಿ ಮಾತನಾಡಿ, ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಅದರಲ್ಲೂ ಗ್ರಾಮೀಣ ಪ್ರದೇಶದ ಕೃಷಿಕರಾದ ನಾಲ್ವರಲ್ಲಿ, ಮೂವರು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ದುರದೃಷ್ಟಕರ. ದೇಶಧ ಆರ್ಥಿಕತೆಯಲ್ಲಿ ಅಗಾಧ ಬೆಳವಣಿಗೆಯಾಗಿದ್ದರೂ ಜನರ ಊಟದ ತಟ್ಟೆಗಳಲ್ಲಿ ಅರೋಗ್ಯಕ್ಕೆ ತಕ್ಕಷ್ಟು ಪ್ರಮಾಣದ ಪೌಷ್ಟಿಕ ಆಹಾರವಿಲ್ಲದಾಗಿದೆ ಎಂದರು.

      ತಾಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ಡಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಎಪಿಪಿಗಳಾದ ಶಂಷೀರ್ ಅಲಿಖಾನ್, ಮುರುಗೇಶ್ ಅಂಕದ್, ಆರೋಗ್ಯ ಕೇಂದ್ರದ ವೈದ್ಯಾದಿಕಾರಿ ಡಾ. ವಿನುತಾ, ವಕೀಲರಾದ ಸೈಯದ್ ಯೂನಸ್, ಸಂತೋಷ್ ಹಿರೇಮಠ್, ನೋಡಲ್ ಅಧಿಕಾರಿ ಡಾ. ಸರೋಜಾ ಬಾಯಿ, ಆರೋಗ್ಯ ಇಲಾಖೆಯ ಯಶೋಧಮ್ಮ ಜವಳಿಗೇರಿ, ಉಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link