ಬೆಂಗಳೂರು:
ತನ್ನ ಮನೆಯ ಮುಂದೆ ಕುಂಡಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ.
22 ವರ್ಷದ ಪ್ರದೀಪ್ ಎಂಬುವವನೇ ಬಂಧಿತ ಆರೋಪಿ. ಎಚ್ಎಸ್ಆರ್ ಬಡಾವಣೆಯ 18ನೇ ಕ್ರಾಸ್ನ ಮನೆಯೊಂದರಲ್ಲಿ ನೆಲೆಸಿರುವ ಈತ ಮನೆ ಮುಂದಿನ ಪ್ಯಾಸೇಜ್ನಲ್ಲೇ ಗಾಂಜಾ ಬೆಳೆದಿದ್ದ. ಈ ಬಗ್ಗೆ ಅಕ್ಕ ಪಕ್ಕದ ಯಾರಿಗೂ ಸಣ್ಣ ಅನುಮಾನ ಕೂಡ ಬಂದಿರಲಿಲ್ಲ. ಮನೆ ಮುಂದೆ ಐದಾರು ಪಾಟ್ಗಳಲ್ಲಿ ಗಾಂಜಾ ಸೊಪ್ಪನ್ನು ಬೆಳೆಯುತ್ತಿದ್ದ. ಅಕ್ಕ ಪಕ್ಕದವರು ಯಾರಾದರೂ ಕೇಳಿದರೆ ಅದು ಅಲಂಕಾರಿಕ ಗಿಡ ಎಂದು ಹೇಳುತ್ತಿದ್ದ. ಆದರೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಈತ ಸತ್ಯ ಸಂಗತಿ ಬಾಯಿ ಬಿಟ್ಟಿದ್ದಾನೆ.
ಈತ ಕನಕಪುರದ ಗೋವಿಂದಪ್ಪ ಎನ್ನುವವರಿಂದ ಗಾಂಜಾ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಎನ್ನುವ ಸುಳಿವಿನ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರಿಗೆ ಈತ ಗಾಂಜಾ ಬೆಳೆಗಾರ ಎನ್ನುವ ಸಂಗತಿ ಕೂಡ ಗೊತ್ತಾಗಿದೆ. ಈತನಿಂದ ಮೂರು ಲಕ್ಷ ರೂ ಮೌಲ್ಯದ 5 ಕೆಜಿ ತೂಕದ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ