ಬೆಂಗಳೂರು
ಗಾರೆಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಕತ್ತುಬಿಗಿದು ಕೊಲೆ ಮಾಡಿ ಪೊದೆಯಲ್ಲಿ ಎಸೆದು ಪರಾರಿಯಾಗಿರುವ ದುರ್ಘಟನೆ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೀರಸಾಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೊಲೆಯಾದವರನ್ನು ವೀರಸಾಗರದ ಸಗಾಯಿರಾಜ (29)ಎಂದುಗುರುತಿಸಲಾಗಿದೆ,ರಾತ್ರಿ 11ರ ವೇಳೆ ದುಷ್ಕರ್ಮಿಗಳು ಬಟ್ಟೆಕತ್ತು ಬಿಗಿದು ಕೊಲೆ ಮಾಡಿ ಮನೆಗೆ ಹತ್ತಿರದ ಪೊದೆಗಳ ಬಳಿ ಮೃತದೇಹವನ್ನು ಎಸೆದು ಪರಾರಿಯಾಗಿದ್ದು ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಿದ್ದ ಸ್ಥಳೀಯರು ನೋಡಿ ಮಾಹಿತಿ ನೀಡಿದ ತಕ್ಷಣ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಅದು ಸಗಾಯಿರಾಜ್‍ನ ಮೃತದೇಹ ಎನ್ನುವುದು ಪತ್ತೆಯಾಗಿದೆ.
ತಮಿಳುನಾಡು ಮೂಲದ ಸಗಾಯಿರಾಜ ಹಲವು ವರ್ಷಗಳಿಂದ ಗಾರೆಕೆಲಸ ಮಾಡಿಕೊಂಡು ವೀರಸಾಗರದಲ್ಲಿ ನೆಲೆಸಿದ್ದು ವಿವಾಹವಾಗಿದ್ದ ಅವರಿಗೆ ಮಕ್ಕಳಿರಲಿಲ್ಲ ಎಂದಿನಂತೆ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ರಾತ್ರಿ 7.30ರ ಸುಮಾರಿನಲ್ಲಿ ಹೊರಗೆ ಹೋದವನು 9.30ರ ವೇಳೆ ಪತ್ನಿಗೆ ಕರೆಮಾಡಿ ಮಾತನಾಡಿದ್ದಾನೆ.
ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಬೆಳಿಗ್ಗೆ ಕತ್ತು ಬಿಗಿದ ಸ್ಥಿತಿಯಲ್ಲಿ ಕೊಲೆಯಾದ ಆತನ ಮೃತದೇಹ ಮನೆಯಿಂದ ಸ್ವಲ್ಪ ದೂರದ ಪೊದೆಗಳ ಬಳಿ ಪತ್ತೆಯಾಗಿದೆ.
ಸಗಾಯಿರಾಜ್ ಕೊಲೆಗೆ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ ಪ್ರಕರಣ ದಾಖಲಿಸಿರುವ ಯಲಹಂಕ ಉಪನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
