ಗಾಂಧಿನಗರ:
ಹಳೆಯ 500 ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳು ಬ್ಯಾನ್ ಆಗಿ 2 ವರ್ಷಗಳು ಕಳೆದಿದೆ. ಅದಾಗಿಯೂ 500 ಮತ್ತು 1000 ರೂ. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಪತ್ತೆಯಾಗಿರುವುದು ಪ್ರಧಾನಮಂತ್ರಿಗಳ ತವರಾದ ಗುಜರಾತಿನಲ್ಲಿ ಬರೋಬ್ಬರಿ 3.36 ಕೋಟಿ ಹಣ ಪತ್ತೆಯಾಗಿದೆ.
ಕಟೋದರದಲ್ಲಿ 3.36 ಕೋಟಿ ರೂ. ಮೊತ್ತದ ನೋಟುಗಳು ಪತ್ತೆಯಾಗಿದ್ದು ಮೂವರನ್ನು ಬಂಧಿಸಲಾಗಿದೆ. ಗಗನೀಶ್ ರಜ್‍ಪೂತ್, ಮೊಹಮ್ಮದ್ ಅಲಿ ಶೇಖ್ ಹಾಗೂ ಲತೀಫ್ ಶೇಖ್ ಬಂಧಿತ ಆರೋಪಿಗಳು ಎಂದು ಪೊಲೀಸರು ವರದಿಯಲ್ಲಿ ತಿಳಿಸಿದ್ದಾರೆ.
ಕಟೋದರ ಪ್ರದೇಶದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಕಾರೊಂದರಲ್ಲಿ 1 ಸಾವಿರ ಹಾಗೂ 500 ರೂ.ಗಳ ನಿಷೇಧಿತ ನೋಟುಗಳು ಸಿಕ್ಕಿದೆ. ಕಾರಿನಲ್ಲಿ ಪತ್ತೆಯಾದ ಹಣದಲ್ಲಿ ಹಳೆಯ 500 ರೂ. ಮುಖಬೆಲೆಯ 1.20 ಕೋಟಿ ರೂ. (24 ಸಾವಿರ ನೋಟುಗಳು) ಹಾಗೂ 1 ಸಾವಿರ ರೂ. ಮುಖಬೆಲೆಯ 2.16 ಕೋಟಿ ರೂ. (21,600 ನೋಟುಗಳು) ಪತ್ತೆಯಾಗಿದೆ. ಒಟ್ಟು 3.36 ಕೋಟಿ ಹಣ ಸಿಕ್ಕಿದ್ದು, ಸೂರತ್ ಪೊಲೀಸರು ಹಣವನ್ನು ವಶಪಡಿಸಿಕೊಂಡಿದ್ದಾರೆ.
