ತುರುವೇಕೆರೆ
ಪಟ್ಟಣದ ಮಾಯಸಂದ್ರ ರಸ್ತೆಯ ವೀರಭದ್ರೇಶ್ವರ ಬೇಕರಿಯಲ್ಲಿ ಗುಪ್ತವಾಗಿ ಮಾರುತ್ತಿದ್ದ ಸಾವಿರಾರು ರೂಪಾಯಿಗಳ ಮೌಲ್ಯದ ಗುಟ್ಕಾ ಮತ್ತು ಸಿಗರೇಟ್ ಪ್ಯಾಕ್‍ಗಳನ್ನು ತಹಸೀಲ್ದಾರ್ ಆರ್.ನಯಿಂಉನ್ನೀಸಾ ಶನಿವಾರ ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ಗುಟ್ಕಾ ಮತ್ತು ಪಾನ್ ಮಸಾಲ ಮಾರುವುದನ್ನು ಮತ್ತು ಸೇವಿಸುವುದನ್ನು ನಿಷೇಧಿಸಿದೆ. ಆದರೂ ವೀರಭದ್ರೇಶ್ವರ ಬೇಕರಿಯಲ್ಲಿ ಈ ವಸ್ತುಗಳನ್ನು ಮಾರುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, 35 ಗುಟ್ಕಾ ಪಾಕೆಟ್ ಮತ್ತು ವಿವಿಧ ಬ್ಯಾಂಡ್‍ಗಳ 10 ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡು ಅಂಗಡಿ ಮಾಲೀಕರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಪಟ್ಟಣದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 10 ದ್ವಿಚಕ್ರ ವಾಹನ ಮತ್ತು 1 ನಾಲ್ಕು ಚಕ್ರದ ವಾಹನವನ್ನು ಪೊಲೀಸರು ಸೀಜ್ಹ್ ಮಾಡಿ, ತಹಸೀಲ್ದಾರ್ ಅವರ ಸೂಚನೆಯ ಮೇರೆಗೆ ದಂಡ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಇಲಾಖಾ ಸಿಬ್ಬಂದಿ ಸ ಅಣ್ಣಪ್ಪ, ಯಮನಪ್ಪ, ರಂಗನಾಥ ಮತ್ತು ಶಶಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ