ಗುಡಿಬಂಡೆ : ಎಸ್.ಎಸ್.ಎಲ್. ಸಿ 2022 ಪರೀಕ್ಷೆ ಯಲ್ಲಿ ಸ್ವಯಂಸೇವಕ ರಾಗಿ ಸೇವೆ ಸಲ್ಲಿಸಿದ ಸ್ಕೌಟರ್ ಗೈಡರ್ ಗಳಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಬೇಸಿಗೆ ಶಿಬಿರ ನೆಡೆಸಿದ ದಳನಾಯಕರಿಗೆ ಸ್ಕಾರ್ಫ್ ಓಗಲ್ ವಿತರಣೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ ವಿತರಣೆ ವಿತರಿಸಿದರು.
ಗುರುವಾರ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಬ್ಗತ್ ವುಲ್ಲ ಮಾತನಾಡಿರು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ಪರೀಕ್ಷಾ ಸಮಯದಲ್ಲಿ ಅತ್ಯುತ್ತಮ ಕೆಲಸ ಮಾಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲೂ ನಿಮ್ಮಿಂದ ಇಂತಹ ಸೇವೆ ಬೇಕಾಗುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಪ್ಪ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ನಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳ ಸಮಯದಲ್ಲಿ ಮಕ್ಕಳಿಗೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೇಷನ್, ಮಕ್ಕಳನ್ನು ಪರೀಕ್ಷಾ ಕೊಠಡಿಯಲ್ಲಿ ಕೂರಿಸುವುದು ಸೇರಿದಂತೆ ಪರೀಕ್ಷೆ ಪಾರದರ್ಶಕವಾಗಿ ನಡೆಸಲು ಬೇಕಾದ ನೆರವು ಸೇರಿದಂತೆ ಹಲವು ವಿಧಗಳಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ಸಾಮಾಜಿಕ ಕಳಕಳಿಯನ್ನು ಭಾರತೀಯ ಸ್ಕೌಟ್ಸ್ ಮತ್ತು ಗೈಡ್ ಗಳು ಮಾಡಿದ್ದಾರೆ. ಬೇಸಿಗೆ ಶಿಬಿರದಿಂದ ಶೆ?ಕ್ಷಣಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಿದ್ದು ಮುಂದಿನ ದಿನಗಳಲ್ಲೂ ಭಾನುವಾರ ಸೇರಿದಂತೆ ಇತರೆ ದಿನಗಳಲ್ಲಿ ಹತ್ತನೇ ತರಗಯಿಯ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಸ.ಮಾ.ಪ್ರಾ.ಶಾ.ಸೋಮೇನಹಳ್ಳಿಯ ನಾಗೇಶ್ ಜಿ., ತಿರುಮಣಿ ಪ್ರೌಢಶಾಲೆಯ ಗೌರಮ್ಮ, ಎಲ್ಲೋಡು.ಸ.ಹಿ.ಪ್ರಾ.ಶಾಲೆಯ ಸುಮಿತ್ರ ಎನ್, ಬೀಚಗಾನಹಳ್ಳಿ ಕ್ರಸ್ ಕೆ.ಜಿ.ಬಿ.ವಿ ಶಾಲೆಯ ಭಾರತಿ.ಜಿ.ಎನ್, ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನ ಅರ್ಚನ ಕೆ ರನ್ನು ಸನ್ಮಾನಿಸಿದರು.
ಬೇಸಿಗೆ ಶಿಬಿರ ನೆಡೆಸಿದ ಸ.ಹಿ.ಪ್ರಾ.ಶಾಲೆ. ತೀಲಕುಂಟಹಳ್ಳಿ ವಿಜಯ್ ಕುಮಾರ್ ಪಿ, ಸ.ಹಿ.ಪ್ರಾ.ಶಾ.ಹಂಪಸಂದ್ರ ಸುಭಾಷಿಣಿ.ವಿ.ಆರ್. ಸ.ಫ್ರೌಢಶಾಲೆ.
ತಿರುಮಣಿ ಗೌರಮ್ಮ, ಸ.ಮಾ.ಹಿ.ಪ್ರಾ.ಶಾ.ಎಲ್ಲೋಡು ಸುಮಿತ್ರ ಎನ್. ಗೆ ಸ್ಕಾರ್ಫ್ ಓಗಲ್ ವಿತರಣೆ ಹಾಗೂ ಅಭಿನಂದನಾ ಪತ್ರ ವಿತರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ ಮತ್ತು ಗೈಡ್ ಜಿಲ್ಲಾ ಆಯುಕ್ತೆ ಡಿ.ವಿ.ಮಂಜುಳ, ತಾಲ್ಲೂಕು ಕಾರ್ಯದರ್ಶಿ ಎನ್ ನಾಗಲಿಂಗಪ್ಪ, ಉಪಾಧ್ಯಕ್ಷ ಬಿ.ಮಂಜುನಾಥ, ಬಿ.ಆರ್.ಸಿ ಸಂಯೋಜಕಿ ಜಿ.ವಿ. ಗಂಗರತ್ನಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ, ಪ್ರಧಾನ ಕಾರ್ಯದರ್ಶಿ ವಿ.ಶ್ರೀರಾಮಪ್ಪ, ಉಪಾಧ್ಯಕ್ಷೆ ಸುಮಿತ್ರಾ, ಎ.ಎನ್. ಶ್ರೀರಾಮರೆಡ್ಡಿ, ಜಿಲ್ಲಾ ಸಹ ಕಾರ್ಯದರ್ಶಿ ಆರ್.ರಾಜಪ್ಪ, ಟಿಪಿಓ ಮುರಳಿ, ಇಸಿಓ ಜಿ.ವಿ.ಚಂದ್ರಶೇಖರ್, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮುನಿಕೃಷ್ಣಪ್ಪ ಸೇರಿದಂತೆ ತಾಲೂಕಿನ ವಿವಿಧ ವೃಂದ ಸಂಘಗಳ ಅಧ್ಯಕ್ಷರು ಹಾಗೂ ಎಲ್ಲಾ ಪಧಾಧಿಕಾರಿಗಳು ಭಾಗವಹಿಸಿದರು.