ಗುಡಿ ಕೈಗಾರಿಕೆಗಳಿಂದ ಮಾತ್ರಾ ದೇಶದ ಆರ್ಥಿಕ ಬಲಿಷ್ಟತೆ ಸಾದ್ಯ-ಸಚಿವ ಶ್ರೀನಿವಾಸ್

ಶಿರಾ:

        ಸರ್ಕಾರದ ಯೋಜನೆಗಳ ಸಬ್ಸಿಡಿ ಹಾಗೂ ಸವಲತ್ತಿಗಾಗಿ ಜನ ಸಾಮಾನ್ಯರು ಕಾಯುವಂತ ಸ್ಥಿತಿ ದೂರವಾಗ ಬೇಕಿದ್ದ ಅಲ್ಪ ಪ್ರಮಾಣ ಭಂಡವಾಳದಲ್ಲಿ ಸಣ್ಣ ಸಣ್ಣ ಗುಡಿ ಕೈಗಾರಿಕೆಗಳನ್ನು ಮಾಡುವ ಮೂಲಕ ಆರ್ಥಿಕ ಬಲಿಷ್ಠತೆ ಕಾಣುವ ಮೂಲಕ ಸ್ವಾವಲಂಭಿ ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳಬೇಕು. ಹೇಮಾವತಿ ಡ್ಯಾಂನಿಂದ ಹರಿದ ನೀರು ತುಮಕೂರು ಕಾಲುವೆಯಲ್ಲಿ ಹರಿದಂತ ನೀರು ಸೋರಿಕೆಯಾದ ಕಾರಣ ಶಿರಾ ಭಾಗಕ್ಕೆ ಹೆಚ್ಚು ನೀರು ಹರಿಯಲು ಸಾಧ್ಯವಾಗಿಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು.

        ಅವರು ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಐತಿಹಾಸಿಕ ಪ್ರಸಿದ್ಧ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ 18.ನೇ ವರ್ಷದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಶ್ರೀಸ್ಪಟಿಕ ಪುರಿ ಗಡಿನಾಡ ಸಂಸ್ಕøತಿಕ ಉತ್ಸವ-2019 ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು

         ಪ್ರತಿ ನಿತ್ಯ ತುಮಕೂರು ನಾಲಾ ನಿತ್ಯ ಕಾಲುವೆಗೆ 1200 ಕ್ಯೊಸೆಕ್ಸ್ ನೀರು ಬಿಟ್ಟರು ಸಹ 600 ಕ್ಯೊಸೆಕ್ಸ್ ನೀರು ಮಾತ್ರ ಹರಿಯುತ್ತಿತ್ತು. ತುಮಕೂರು ನಾಲೆ ದುರಸ್ತಿ ಹಾಗೂ ಅವೈಜ್ಞಾನಿಕವಾಗಿ 13 ಚೆಕ್ ಡ್ಯಾಂ ನಿರ್ಮಾಣ ಮಾಡಿ ಎಸ್ಕೇಪ್ ಗೇಟ್ ಹಾಕದ ಕಾರಣ ಮದಲೂರು ಕೆರೆಗೆ ಯಾವುದೇ ಕಾರಣಕ್ಕೂ ಹೇಮಾವತಿ ನೀರು ಹರಿಯಲು ಸಾದ್ಯವಿಲ್ಲ ಎಂದರು.

        ಜಿಲ್ಲೆಯಲ್ಲಿ ಮಳೆ ಇಲ್ಲದೆ 1200 ಅಡಿ ಕೊರೆದರು ನೀರು ಸಿಗದಂತ ಸ್ಥಿತಿ ನಿರ್ಮಾಣವಾಗಿದ್ದು ಸರ್ಕಾರ ಈಗಾಗಲೇ ಕುಣಿಗಲ್ ಕಾಲುವೆ ಮೂಲಕ ರಾಮನಗರ ಮತ್ತು ಮಾಗಡಿ ಕೆರೆಗಳಿಗೆ ಹೇಮಾವತಿ ನೀರು ಹರಿಸುವ ನೀಲನಕ್ಷೆ ಸಿದ್ದಗೊಂಡಿದ್ದು ಮುಂದಿನ ದಿನಮಾನಗಳಲ್ಲಿ ಜಿಲ್ಲೆಗೆ ಹೇಮಾವತಿ ನೀರು ಬೇಕೆ ಬೇಕು ಎಂಬ ಗಟ್ಟಿದ್ವನಿ ಮೊಳಗಿಸಿ ಹೋರಾಟ ಮಾಡುವಂತ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ ಎಂದರು.

         ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮೀಜಿ ಜಗತ್ತಿಗೆ ವ್ಯವಸಾಯ ಕಲಿಸಿದ ನಮ್ಮ ದೇಶ ಎಂಬ ಹೆಗ್ಗಳಿಕೆ ನಮ್ಮದಾಗಿದ್ದು, ದೇಶದ ಬೆನ್ನೆಲುಬಾಗಿ ಇಲ್ಲಿನ ರೈತ ಕೃಷಿಗೆ ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದಾನೆ. ಹೀಗಿರುವಾಗ ಅವನು ಕಾಯಕವನ್ನು ಬಿಟ್ಟರೆ ಜಗತ್ತಿನ ಗತಿ ಏನು ಎಂಬುದನ್ನು ಸರ್ಕಾರಗಳು ಅರಿತು ಕೊಳ್ಳಬೇಕು ಎಂದರು. 

          ಬರದಿಂದ ರೈತ ಸಂಕುಲ ನೊಂದು ಹೋಗಿದೆ ಮಳೆ ಇಲ್ಲ, ಬೆಳೆ ಇಲ್ಲ, ಅಲ್ಪಸ್ವಲ್ಪ ಮಳೆ ಬಂದರೂ ಸರಿಯಾದ ವೈಜ್ಞಾನಿಕ ಬೆಲೆ ಸಿಗದೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ರೈತನ ಸಾಲಮನ್ನಾಡಿ ಮಾಡಿದರೆ ಸಾಲದು, ಸರ್ಕಾರ ಘೋಷಣೆ ಮಾಡುವ ಯೋಜನೆಗಳು ನಿಜವಾದ ರೈತನಿಗೆ ತಲುಪುತ್ತಿವೆಯೇ ಎಂಬ ಪ್ರಮಾಣಿಕ ವಿಮರ್ಶೆಯಾಗ ಬೇಕು. ರೈತನಿಗೆ ಬೇಕಾಗಿರುವುದು ಸಾಲಮನ್ನಾ ಅಲ್ಲ, ಅಪ್ಪರ್ ಭದ್ರದತಹ ನೀರಾವರಿ ಯೋಜನೆಗಳು ಅನುಷ್ಟಾನ ಎಂದರು.

          ಈ ಯೋಜನೆಯ ಕಾಮಗಾರಿ ತ್ವರಿತಗತಿಯಲ್ಲಿ ಮುಗಿದು ಕಾಲುವೆಗಳಿಗೆ ನೀರು ಹರಿಯುವಂತಾದರೆ ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ ತಾಲೂಕುಗಳು ಹಸಿರು ಸಸ್ಯ ಶಾಮಲೆಯಿಂದ ಮೈತುಂಬಿ ಕೊಳ್ಳಲಿವೆ ಅಪ್ಪರ ಭದ್ರ ಯೋಜನೆ ಶೀಘ್ರ ಅನುಷ್ಟಾನಗೊಳಿಸುವಂತ ಇಚ್ಚಾಶಕ್ತಿ ಸರ್ಕಾರ ಹೊಂದಬೇಕಿದೆ ಎಂದರು.

         ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಬಿ.ಸತ್ಯನಾರಾಯಣ ಶ್ರೀಮಠ 18 ವರ್ಷಗಳಿಂದ ರೈತರಿಗೆ ಅನುಕೂಲವಾಗುವಂತ ತಂತ್ರಜ್ಞಾನ ಆಧಾರಿತ ಕೃಷಿಯ ಬಗ್ಗೆ ಪ್ರತ್ಯಕ್ಷಿಕೆ ಬೆಳೆಯ ಮೂಲಕ ಮಾಹಿತಿ ನೀಡಿ ರೈತನಿಗೆ ಸಹಕಾರಿಯಾಗಿರುವುದು ಮೆಚ್ಚುವಂತಾದ್ದು. ಅನ್ನದಾತರು ಈ ಕೃಷಿ ವಸ್ತು ಪ್ರದರ್ಶನದಲ್ಲಿ ಬೆಳೆಗಳ ಬಗ್ಗೆ ಅಧಿಕಾರಿಗಳಲ್ಲಿ ಚರ್ಚಿಸುವಂತ ಪರಿಹಾರ ಕಂಡುಕೊಳ್ಳುವಂತ ಆಸಕ್ತಿ ತೋರಿದಾಗ ಶ್ರೀಗಳ ಉದ್ದೇಶ ಸಾರ್ಥಕತೆ ಕಾಣಲಿದೆ ಎಂದರು.

         ಜಿಪಂ ಅಧ್ಯಕ್ಷೆ ಲತಾ ಕೆ.ರವಿಕುಮಾರ್, ಸದಸ್ಯರಾದ ಎಸ್.ರಾಮಕಷ್ಣ, ಗಿರಿಜಮ್ಮ ಶ್ರೀರಂಗಯಾದವ್, ಗ್ರಾಮ ಸ್ವರಾಜ್ ನಿರ್ದೇಶಕ ಗೋವಿಂದರಾಜು, ಜಿಪಂ ಕಾರ್ಯನಿರ್ವಾಹಣಾಧಿಕಾರಿ ಅನಿಶ್ ಕಣ್ಮಣಿ ಜಾಯ್, ತಾಪಂ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ತಾಪಂ ಸದಸ್ಯ ಕೆ.ಎಂ.ಶ್ರೀನಿವಾಸ್, ಜಾತ್ರಾ ಸಮಿತಿ ಅಧ್ಯಕ್ಷ ಏ.ಆರ್.ಶ್ರೀನಿವಾಸಯ್ಯ, ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಟಿ.ಡಿ.ಮಲ್ಲೇಶ್, ನಾದೂರು ಗ್ರಾಪಂ ಅಧ್ಯಕ್ಷೆ ಕೆ.ಭಾಗ್ಯಲಕ್ಷ್ಮೀ, ಜಿಪಂ ಪಿಡಿ ಮಾಂಕಾಳಪ್ಪ, ಇಓ ಮೋಹನ್‍ಕುಮಾರ್, ಡಿಹೆಚ್‍ಓ ಡಾ.ಶೈಲಜಾ, ಟಿಹೆಚ್‍ಒ ಡಾ.ಅಫ್ಜಲ್ ಉರ್ ರಹಮಾನ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

          ವಿಜೃಂಭಣೆಯಿಂದ ನಡೆದ ರಥೋತ್ಸವ: ಐತಿಹಾಸಿಕ ಪ್ರಸಿದ್ದ ಶ್ರೀಓಂಕಾರೇಶ್ವರ ಕಲ್ಲುಗಾಲಿ ರಥೋತ್ಸವ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ನೇತೃತ್ವದಲ್ಲಿ ನಡೆಯಿತು. ವೀರಗಾಸೆ, ಡೊಳ್ಳು ಕುಣಿತ, ನಂದಿಧ್ವಜ ಕುಣಿತ ಸೇರಿದಂತೆ ಹಲವಾರು ಉತ್ಸವಗಳು ರತೋತ್ಸವಕ್ಕೆ ಮೆರಗು ನೀಡಿದ್ದವು. ಸಿಮಾಂದ್ರ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳ ಸಾವಿರಾರು ಭಕ್ತ ಉತ್ಸವದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link