ಗುರಿಮುಟ್ಟುವ ಛಲವಿದ್ದರೆ ಸಾಧನೆ ಸುಲಭ

ಕುಣಿಗಲ್

      ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಗುರಿಮುಟ್ಟುವ ಛಲ ಮನಸ್ಸಿಲ್ಲಿ ದೃಢವಾಗಿದ್ದರೆ ಸಾಧನೆ ಮಾಡುವುದು ಬಹುಸುಲಭ ಎಂದು ವಿದ್ಯಾರ್ಥಿಗಳಿಗೆ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹರೀಶ್‍ನಾಯಕ್ ಕಿವಿ ಮಾತು ಹೇಳಿದರು.

       ಪಟ್ಟಣದ ಬಿ.ಜಿ.ಎಸ್.ಶಾಲಾ ಆವರಣದಲ್ಲಿ ಬುಧವಾರ ಶಿಕ್ಷಣಾ ಇಲಾಖೆಯವರು ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರೆವೇರಿಸಿ ಮಾತನಾಡಿದ ಅಧ್ಯಕ್ಷರು ಶಿಕ್ಷಕರು ಮಕ್ಕಳಿಗೆ ಪಾಠಬೋಧನೆ ಮಾಡುವುದರ ಜೊತೆಯಲ್ಲಿ ಅವರಲ್ಲಿರುವ ಇತರೆ ಪ್ರತಿಭೆಗಳನ್ನು ಗುರುತಿಸಿ ನಾಲ್ಕಾರು ಜನಗಳು ವೀಕ್ಷಣೆ ಮಾಡುವ ರೀತಿ ಮಾಡಬೇಕೆಂದರು. ಕೆಲವು ಮಕ್ಕಳಿಗೆ ವಿದ್ಯಾಭ್ಯಾಸ ಸ್ವಲ್ಪಮಟ್ಟಿಗೆ ಕಡಿಮೆ ಇದ್ದರೂ ಬೇರೆ ಕ್ಷೇತ್ರಗಳಲ್ಲಿ ಆತನಿಗೆ ಆಸಕ್ತಿ ಇರುತ್ತದೆ. ಇಂತಹವರನ್ನು ಗುರುತಿಸಿ ಅವರ ಪೋಷಕರಿಗೆ ಮಕ್ಕಳಲ್ಲಿರುವ ಒಳ್ಳೆಯ ಆಸಕ್ತಿಯ ವಿಚಾರಗಳನ್ನು ತಿಳಿಸಿದರೆ ಉಪಯುಕ್ತವಾಗುತ್ತದೆ ಎಂದು ತಿಳಿಸಿದ ಅವರು, ಶಿಕ್ಷಕರು ಮಕ್ಕಳಲ್ಲಿ ಹೆಚ್ಚು ಉತ್ಸಾಹಗಳನ್ನು ತುಂಬಿದರೆ ದಡ್ಡನನ್ನು ಬುದ್ದಿವಂತನನ್ನಾಗಿ ಮಾಡುವ ಶಕ್ತಿ ಗುರುಗಳಲ್ಲಿರುತ್ತದೆ ಎಂದು ತಿಳಿಸಿದರು.

       ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪುರಸಭೆ ಅದ್ಯಕ್ಷೆ ನಳಿನಾಬೈರಪ್ಪ ಕ.ಸಾ.ಪ. ಅಧ್ಯಕ್ಷ ಕೃಷ್ಣಪ್ಪ ಇ.ಒ ಶಿವರಾಜಯ್ಯ ಬಿ.ಇ.ಒ ಸಿದ್ದಯ್ಯ ಅಕ್ಷರ ದಾಸೋಹ ಅಧಿಕಾರಿ ಶ್ರೀರಂಗರಾಜು, ಬಿ.ಆರ್.ಸಿ. ಕೃಷ್ಣಕುಮಾರ್, ಇ.ಸಿ.ಒ. ಧನಂಜಯ, ಸರ್ಕಾರಿ ನೌಕರರ ಅಧ್ಯಕ್ಷ ಗೋಪಾಲ್, ಶಿಕ್ಷಕ ಸಂಘದ ಅಧ್ಯಕ್ಷ ನಾಗರಾಜು ಹಾಗೂ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ನಾಗರಾಜು ಪದಾಧಿಕಾರಿಗಳು, ಸಿ.ಆರ್.ಪಿ ಶಿಕ್ಷಕರು ವಿದ್ಯಾರ್ಥಿಗಳು ಕೆಲವು ಪೋಷಕರು ಮತ್ತಿತರರು ಉಪಸ್ಥಿತರಿದ್ದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap