ರಾಣೇಬೆನ್ನೂರು:
ಇಂದಿನ ವಿದ್ಯಾರ್ಥಿಗಳು ಪ್ರತಿಭಾವಂತರಾಗಿದ್ದಾರೆ. ಸರಿಯಾದ ಮಾರ್ಗದರ್ಶನದ ಕೊರತೆಯಿಂದ ತಪ್ಪು ದಾರಿ ತುಳಿಯುತ್ತಿದ್ದು ಸಮಾಜಕ್ಕೆ ಮಾರಕವಾಗುವ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇದು ದೂರಾಗಿ ಒಂದು ನಿರ್ಧಿಷ್ಟ ‘ಗುರಿ ಇಟ್ಟುಕೊಂಡು ಮುನ್ನಡೆಯಿರಿ ಯಶಸ್ಸು ತಮ್ಮದಾಗುತ್ತದೆ’ ಎಂದು ವಿಶ್ರಾಂತ ಹಾವೇರಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಶ್ರೀ ವೀರಭದ್ರಪ್ಪ .ಎ ಹೇಳಿದರು. ಅವರು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ರಾಜ-ರಾಜೇಶ್ವರಿ ಹೆಣ್ಣುಮಕ್ಕಳ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಇತ್ತೀಚೆಗೆ ಎಲ್ಲ ರಂಗಗಳಲ್ಲಿ ಮಹಿಳೆಯರೆ ಯಶಸ್ಸು ಸಾಧಿಸುತ್ತಿದ್ದಾರೆ.
ನೀವು ನಮ್ಮ ದೇಶದ ಮಹಾನ್ ಚಿಂತಕರ ಹೋರಾಟಗಾರರ ವ್ಯಕ್ತಿತ್ವವನ್ನು ರೂಢಿಸಿಕೊಂಡು ಮುನ್ನಡೆಯಿರಿ, ಆಸಕ್ತಿ ಸಾಮಥ್ರ್ಯ ನಿಮಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶ್ರೀ ವ್ಹಿ.ಪಿ.ಲಿಂಗನಗೌಡರ ಇಂದು ಶಿಕ್ಷಣ ಕ್ಷೇತ್ರಕ್ಕೆ ಮಠಮಾನ್ಯಗಳ ಜೊತೆಜೊತೆಗೆ ಡಾ. ಪ್ರಭಾಕರ ಕೋರೆ ಅವರ ಕೊಡುಗೆ ಅಪಾರವಾಗಿದೆ ಎಂದರು. ಅತಿಥಿಗಳಾಗಿದ್ದ ಶ್ರೀ ವೀರಣ್ಣ ಅಂಗಡಿ, ಶ್ರೀ ಬಿ.ಎಸ್.ಪಟ್ಟಣಶೆಟ್ಟಿ ಮಾತನಾಡಿದರು. ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿನಿಯರಿಗೆ ಪ್ರತಿಜ್ಞಾವಿಧಿಯನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಸ್.ಆರ್.ಗಟ್ಟಿರಡ್ಡಿಹಾಳ ಬೋಧಿಸಿದರು. ಪ್ರಾಚಾರ್ಯರಾದ ಶ್ರೀ ಎಫ್.ಎನ್.ಗುಡಿಕಟ್ಟಿ ಸ್ವಾಗತಿಸಿದರು. ಡಾ. ಸುಬ್ರಾವ ಎಸ್. ಎಂಟೆತ್ತಿನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ಮೇಲೆ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಕುಮಾರಿ. ಮಧುಮತಿ ಎಚ್.ಆರ್ ಆಸೀನರಾಗಿದ್ದರು. ಎಲ್ಲ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಉಪನ್ಯಾಸಕಿ ಕುಮಾರಿ. ಸುಮಾ ಮಡ್ಲೂರ ನಿರೂಪಿಸಿದರು. ಶ್ರೀ ಎಸ್.ಎಂ.ಕೋರಿಶೆಟ್ಟರ್ ವಂದಿಸಿದರು.