ಛತ್ತರ್ಪುರ:
ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಿಯೋಜನೆಗೊಂಡಿದ್ದ ಡೆಪ್ಯೂಟಿ ಕಲೆಕ್ಟರ್‌ರೊಬ್ಬರು ಅಂತರಾಷ್ಟ್ರೀಯ ಕಾರ್ಯಕ್ರಮ ಮತ್ತು ಅವರ ಹೊಸ ಮನೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ರಜೆ ಕೊಡದಿದ್ಕೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ರಾಜೀನಾಮೆ ನೀಡಿದ ಅಧಿಕಾರಿ ನಿಶಾ ಬೇಂಗ್ರೆ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಅಂತರರಾಷ್ಟ್ರೀಯ ಸರ್ವ ಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ರಜೆ ನಿರಾಕರಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಜೂನ್ 25 ರಂದು ಬೆತುಲ್‌ನ ಆಮ್ಲಾದಲ್ಲಿ ಅಂತರರಾಷ್ಟ್ರೀಯ ಸರ್ವ ಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿಯನ್ನು ಆಯೋಜಿಸಲಾಗುತ್ತಿದೆ. ಗಗನ್ ಮಲಿಕ್ ಫೌಂಡೇಶನ್ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಜರಾಗಲು ಮತ್ತು ತಮ್ಮ ಮನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ಅವರು ರಜೆ ಕೋರಿದ್ದರು.
ಶ್ರೀಲಂಕಾದ ಕಾನೂನು ಸಚಿವರು ಸೇರಿದಂತೆ 11 ದೇಶಗಳ ಎಲ್ಲಾ ಧರ್ಮಗಳ ಪ್ರತಿನಿಧಿಗಳು ಅಂತಾರಾಷ್ಟ್ರೀಯ ಸರ್ವಧರ್ಮ ಶಾಂತಿ ಸಮ್ಮೇಳನ ಮತ್ತು ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಶ್ರೀಲಂಕಾದಿಂದ ತಥಾಗತ ಬುದ್ಧನ ಅಸ್ಥಿಯೂ ಬರಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡದ ಕಾರಣ ಜಿಲ್ಲಾಧಿಕಾರಿ ನಿಶಾ ಬೇಂಗ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ