ಗೆದ್ದರೆ 33ನೇ ವಾರ್ಡಿನ ಸಮಗ್ರ ಅಭಿವೃದ್ದಿಗೆ ಸಂಕಲ್ಪ ಪಕ್ಷೇತರ ಅಭ್ಯರ್ಥಿ ಗೀತಾ ಪ್ರಕಾಶ್ ಭರವಸೆ

ಚಿತ್ರದುರ್ಗ;

            ಅಭಿವೃದ್ದಿಯ ದೃಷ್ಠಿಯಿಂದ ಆದರೂ ವಾರ್ಡಿನ ಮತದಾರರು ನನಗೆ ಬೆಂಬಲ ನೀಡುವರೆಂಬ ಆತ್ಮ ವಿಶ್ವಾಸವಿದೆ. ನಾನು ಇದೇ ವಾರ್ಡಿನ ಸ್ಥಳೀಯ ಅಭ್ಯರ್ಥಿಯಾಗಿದ್ದು, ಜನರ ಮನಗೆಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಇದು ಜನಬಲ ಮತ್ತು ಹಣ ಬಲದ ನಡುವಿನ ಹೋರಾಟ ಎಂದು ಹೇಳಬಹುದು. ನನಗೆ ಜನಬಲವಿದೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ…

              ಚಿತ್ರದುರ್ಗ ನಗರಸಭೆಯ ಚುನಾವಣೆಯಲ್ಲಿ 34ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಗೀತಾ ಪ್ರಕಾಶ್ ಅವರ ವಿಶ್ವಾದ ಮಾತುಗಳಿವು.

            ಗೀತಾ ಪ್ರಕಾಶ್ ಇದೇ ವಾರ್ಡಿನಲ್ಲಿ ವಾಸವಿದ್ದು, ಅವರಿಗೆ ಪ್ರತಿ ಮತದಾರರ ಮುಖ ಪರಿಚಯವಿದೆ. ಎಲ್ಲಾ ಜಾತಿ, ವರ್ಗಗಳ ಜನರೊಂದಿಗೆ ಉತ್ತಮ ಬಾಂಧ್ಯ ಬೆಳೆಸಿಕೊಂಡಿದ್ದು, ವಾರ್ಡಿನ ಮುಖಂಡರು ಮತ್ತು ಮತದಾರರ ಒತ್ತಾಯದ ಹಿನ್ನಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದಾಗಿ ಹೇಳಿದ್ದಾರೆ.

            ಈಗಾಗಲೇ ಅವರ ಪತಿ ಗರಡಿ ಪ್ರಕಾಶ್ ಕಳೆದ ಬಾರಿ 34ನೇ ವಾರ್ಡಿನಲ್ಲಿ ಗೆದ್ದು, ಉತ್ತಮ ಕೆಲಸ ಮಾಡಿದ್ದರು. ಮೀಸಲಾತಿ ಬದಲಾದ ಕಾರಣ ತಾವು ವಾಸವಿರುವ ವಾರ್ಡಿನಲ್ಲಿಯೇ ಪತ್ನಿಯನ್ನು ಕಣಕ್ಕಿಳಿಸಿರುವ ಪ್ರಕಾಶ್ ಈ ಭಾಗದಲ್ಲಿ ಉತ್ತಮ ಹೆಸರು ಗಳಿಸಿಕೊಂಡಿದ್ದಾರೆ. ಗೀತಾ ಪ್ರಕಾಶ್ ಮತ್ತು ಗರಡಿ ಪ್ರಕಾಶ್ ಸೌಮ್ಯ ಸ್ವಭಾವದವರಾಗಿದ್ದು, ಎಲ್ಲರೊಂದಿಗೆ ಬೆರೆಯುವ ಮತ್ತು ಎಲ್ಲರ ಮಾತಿಗೂ ಮನ್ನಣೆ ಕೊಟ್ಟು ನಡೆದುಕೊಳ್ಳುವ ವ್ಯಕ್ತಿತ್ವದವರು

              ಪ್ರಸ್ತುತ ನಗರಸಭೆಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಗೀತಾ ಪ್ರಕಾಶ್ ಕಳೆದ ಒಂದು ವಾರದಿಂದ ಬಿಡುವಿಲ್ಲದಂತೆ ವಾರ್ಡಿನಲ್ಲಿ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಸ್ಥಳೀಯ ಮುಖಂಡರ ಜೊತೆಗೂಡಿ ಮತದಾರರ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಚುನಾವಣೆಯ ಅನಿವಾರ್ಯತೆ ಮತ್ತು ತಮ್ಮ ಮುಂದಿನ ಯೋಜನೆಗಳ ಕುರಿತು ಗೀತಾ ಪ್ರಕಾಶ್ ಅವರು ಮಾತನಾಡಿದ್ದಾರೆ.

 ನಿಮಗೆ ಚುನಾವಣೆ ಹೊಸದು, ಹೇಗೆ ಎದುರಿಸುತ್ತೀರಿ?

            ಚುನಾವಣೆಯಲ್ಲಿ ಸ್ಪರ್ದಿಸುತ್ತಿರುವುದು ಹೊಸದು. ಆದರೆ ಚುನಾವಣಾ ರಾಜಕಾರಣ ಹೊಸದೇನೂ ಅಲ್ಲ. ಕಳೆದ ಐದು ವರ್ಷಗಳಲ್ಲಿ ಚುನಾವಣೆಯ ಎಲ್ಲಾ ತಂತ್ರಗಾರಿಕೆಯನ್ನು ಅನುಭವದಿಂದ ತಿಳಿದುಕೊಂಡಿದ್ದೇನೆ. ತಮ್ಮ ಪತಿ ಗರಡಿ ಪ್ರಕಾಶ್ ಅವರು ಕಳೆದ ಚುನಾವಣೆಯಲ್ಲಿ ಸ್ಪರ್ದಿಸಿದ್ದಾಗ ಹೆಚ್ಚು ಜವಾಬ್ದಾರಿ ಹೊತ್ತು ಕೆಲಸ ಮಾಡಿದ್ದೇನೆ. ಮಹಿಳೆಯರು ಸೇರಿದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಹೇಗೆ ಎದುರಿಸಬೇಕು ಎಂಬುದನ್ನು ಕಲಿತುಕೊಂಡಿದ್ದೇನೆ.

               ಹೀಗಾಗಿ ಈ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಷ್ಟವಾಗುತ್ತಿಲ್ಲ. ಹಿಂದಿನ ಚುನಾವಣೆಗಿಂತ ಈಗ ನಡೆಯುತ್ತಿರುವ ಚುನಾವಣೆ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಹಣ ಬಲ ಇರುವವರೂ, ಜನಬಲ ಇರುವವರೂ ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದಾರೆ. ಹಣಬಲಕ್ಕಿಂತ ನಾವು ಜನಬಲವನ್ನು ನಂಬಿದ್ದೇವೆ

              ನಾನು ಚುನಾವಣೆಯಲ್ಲಿ ಸ್ಪರ್ದಿಸಲೇ ಬೇಕು ಎನ್ನುವ ಯಾವುದೇ ಉದ್ದೇಶವಿರಲಿಲ್ಲ. ಆದರೆ ವಾರ್ಡಿನ ಮತದಾರರು, ಮುಖಂಡರುಗಳು ಮತ್ತು ಯುವಕರು ಒತ್ತಡ ಹೇರಿದ್ದರಿಂದ ಸ್ಪರ್ದಿಸಿದ್ದು, ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸುತ್ತಿದ್ದೇನೆ. ಪ್ರತಿ ಮತದಾರರ ಮನೆ ಬಾಗಿಲಿಗೆ ತೆರಳಿ ಬೆಂಬಲ ಕೊಡುವಂತೆ ಮನವಿ ಮಾಡಿಕೊಳ್ಳುತ್ತಿದ್ದೇನೆ.

 ವಾರ್ಡಿನ ಮತದಾರರಿಗೆ ನಿಮ್ಮ ಭರವಸೆಗಳೇನು ?

              ಚಿತ್ರದುರ್ಗ ನಗರದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ದಿ ಕೆಲಸಗಳು ನಡೆದಿಲ್ಲ. ನಾಗರೀಕರು ಇನ್ನೂ ಮೂಲಭೂತ ಸೌಲಬ್ಯಕ್ಕಾಗಿ ಪರದಾಡಬೇಕಾದ ಸ್ಥಿತಿ ಇದೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸೌಲಬ್ಯಗಳಿಂದ ವಂಚಿತರಾಗಿದ್ದಾರೆ.

              33ನೇ ವಾರ್ಡಿನಲ್ಲಿಯೂ ಪರಿಸ್ಥಿತಿ ಹೀಗೆಯೇ ಇದೆ. ಯಾವ ಬದಲಾವಣೆಗಳೂ ಆಗಿಲ್ಲ. ಮಳೆ ಬಂದರೆ ದ್ವಿಚಕ್ರ ವಾಹನಗಳ ಸಂಚಾರಕ್ಕೂ ತೊಂದರೆಯಾಗುತ್ತಿದೆ. ವಾರ್ಡಿನ ಯಾವ ರಸ್ತೆಗಳೂ ಸುಧಾರಣೆಯಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದರೆ ವಾರ್ಡಿನ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

              ಈ ಚುನಾವಣೆಯಲ್ಲಿ ನಾನು ಗೆದ್ದರೆ ನನ್ನ ಜನರ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ. ವಾರ್ಡಿನಲ್ಲಿ ಇರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾವುದು. ನಗರಸಭೆ ಮತ್ತು ಸರ್ಕಾರದ ವಿವಿಧ ಮೂಲಗಳಿಂದ ಲಬ್ಯವಾಗುವ ಅನುದಾನದಲ್ಲಿ ಇಡೀ ವಾರ್ಡಿನ ಅಭಿವೃದ್ದಿಗೆ ವಿಶೇಯ ಯೋಜನೆ ರೂಪಿಸಲಾಗುವುದು.

               ಕುಡಿಯುವ ನೀರು, ರಸ್ತೆಗಳ ಅಭಿವೃದ್ದಿ, ಚರಂಡಿ ವ್ಯವಸ್ಥೆ, ವಸತಿ ಸಮಸ್ಯೆ, ಬೀದಿ ದೀಪಗಳ ವ್ಯವಸ್ಥೆಯೂ ಒಳಗೊಂಡಂತೆ ನಾಗರೀಕರಿಗೆ ಅವಶ್ಯವಾಗಿರುವ ಮೂಲಭೂತ ಸೌಲಬ್ಯಗಳನ್ನು ಒದಗಿಸಿಕೊಡಲು ಸರ್ವ ಪ್ರಯತ್ನ ಮಾಡುತ್ತೇನೆ.

             ಕಳೆದ ಎರಡು ವರ್ಷಗಳ ಹಿಂದೆ ನಗರ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಾಗ ಇಲ್ಲಿನ ಜನರು ನೀರಿಗಾಗಿ ಪರದಾಡಿದ್ದಾರೆ. ಇಲ್ಲಿ ಮುನಿಸಿಪಾಲಿಟಿ ಪೂರೈಸುವ ನೀರನ್ನೆ ಜನರು ಅವಲಂಬಿಸಿದ್ದಾರೆ. ಬೇರೆ ಯಾವ ಮೂಲವೂ ಇಲ್ಲ. ಈ ಸಮಸ್ಯೆಯ ಬಗ್ಗೆ ತಮಗೆ ಅರಿವಿದೆ. ನಾನು ಗೆದ್ದರೆ ಇಡೀ ವಾರ್ಡಿಗೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇನೆ. ನಗರಸಭೆ, ಜಿಲ್ಲಾಡಳಿತ ಮತ್ತು ಸರ್ಕಾರದ ವಿವಿಧ ಯೋಜನೆಗಳ ಅನುದಾನ ತಂದು ಮೊದಲು ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೇನೆ.

 ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆಯೇ ?

           ಖಂಡಿತವಾಗಿಯೂ ಈ ಬಾರಿಯ ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೆಂಬ ವಿಶ್ವಾಸವಿದೆ. ಪಕ್ಕದ ವಾರ್ಡಿನಲ್ಲಿ ಆಗಿರುವ ಅಭಿವೃದ್ದಿಯನ್ನು ಜನರು ಗಮನಿಸಿದ್ದಾರೆ. ನನ್ನ ಪತಿ ಗರಡಿ ಪ್ರಕಾಶ್ ಆ ವಾರ್ಡಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಿಕೊಟ್ಟಿದ್ದಾರೆ. ಹೊಸದಾಗಿ ಸುಮಾರು 11 ಬೋರ್‍ಗಳನ್ನು ಕೊರೆಸಿ ಜನರಿಗೆ ನೀರು ಕೊಟ್ಟಿದ್ದಾರೆ

           ಇದರ ಜೊತೆಗೆ 33ನೇ ವಾರ್ಡಿಗೂ ಅನುಕೂಲವಾಗುವಂತೆ ಎರಡು ಕುಡಿಯುವ ನೀರಿನ ಘಟಕಗಳನ್ನು ತೆರೆದಿದ್ದು, ಅಕ್ಕ ಪಕ್ಕದ ವಾರ್ಡಿನ ಜನ ಇದೇ ನೀರು ಬಳಕೆ ಮಾಡುತ್ತಿದ್ದಾರೆ. ಇಂತಹ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು, ಇದನ್ನು ಇಲ್ಲಿನ ಜನರು ಮನಗಂಡಿದ್ದಾರೆ. ಈ ಕಾರಣಕ್ಕಾಗಿಯೇ ನನಗೆ ಗೆಲುವಿನ ವಿಶ್ವಾಸ ಹೆಚ್ಚಿದೆ.

           ಇನ್ನು ಆ ವಾರ್ಡಿನ ಪ್ರತಿ ಬೀದಿಯ ರಸ್ತೆಗಳು ಸುಧಾರಣೆಯಾಗಿದೆ. ಪ್ರತಿ ಬೀದಿಯಲ್ಲೂ ವಿದ್ಯುತ್ ದ್ವೀಪಗಳಿವೆ. ಸುಮಾರು ನೂರಕ್ಕೆ ಹೆಚ್ಚು ದೀಪಗಳನ್ನು ಅಳವಡಿಸಿ ಜನರಿಗೆ ಬೆಳಕು ಕೊಟ್ಟಿದ್ದಾರೆ. ನನ್ನನ್ನು ಗೆಲ್ಲಿಸಿದರೆ ಈ ವಾರ್ಡಿನಲ್ಲಿಯೂ ಮೊದಲು ರಸ್ತೆ ಮತ್ತು ಚರಂಡಿ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ಕೊಟ್ಟು ಕೆಲಸ ಮಾಡಲು ಯೋಚಿಸಿದ್ದೇನೆ.

            ನಾವು ಇದೇ ವಾರ್ಡಿನಲ್ಲಿ ಬೆಳೆದವರು. ಇಲ್ಲಿನ ಜನರ ಜೊತೆಗೆ ಬೆರೆತುಕೊಂಡಿದ್ದೇವೆ. ಮತಯಾಚನೆಗೆ ಮನೆ ಮನೆಗೆ ಹೋದಾಗ ಸಾಕಷ್ಟು ಮಂದಿ ಮತದಾರರು ತುಂಬಾ ಪ್ರೀತಿ ತೋರುತ್ತಿದ್ದಾರೆ. ಅಭಿವೃದ್ದಿಯ ಬಗ್ಗೆ ಕಾಳಜಿ ಮತ್ತು ಬದ್ಧತೆ ಇರುವವರು ಚುನಾವಣೆಗೆ ಬರಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಾವೂ ಸಹ ಹೆಚ್ಚು ಅಭಿವೃದ್ದಿಯ ಬಗ್ಗೆ ಕಾಳಜಿ ಇಟ್ಟುಕೊಂಡು ಬಂದಿದ್ದೇವೆ. ಜನರು ವ್ಯಕ್ತ ಪಡಿಸುತ್ತಿರುವ ಪ್ರೀತಿ ನೋಡಿದರೆ ನಾವು ಗೆಲುವು ಸಾಧಿಸುತ್ತೇವೆಂಬ ವಿಶ್ವಾಸ ಇನ್ನಷ್ಟು ಹೆಚ್ಚಿಸಿದೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link