ಹೈದ್ರಾಬಾದ್
ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‍ಶಿಪ್‍ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಒಡ್ಡಿರುವ 199 ರನ್‍ಗಳ ಗೆಲುವಿನ ಗುರಿಯನ್ನು ಸನ್‍ರೈಸರ್ಸ್ ಹೈದರಾಬಾದ್ ಹೊಂದಿದೆ.
ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿರುವ ರಾಜಸ್ಥಾನ್ ರಾಯಲ್ಸ್, ಸಂಜು ಸ್ಯಾಮ್ಸನ್ ಬಿರುಸಿನ ಶತಕ (104*) ಹಾಗೂ ನಾಯಕ ಅಜಿಂಕ್ಯ ರಹಾನೆ (70) ಬಿರುಸಿನ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 198 ರನ್‍ಗಳ ಬೃಹತ್ ಮೊತ್ತ ಪೇರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ಉತ್ತಮ ಆರಂಭ ಕಾಣಲಿಲ್ಲ. ಇನ್ ಫಾರ್ಮ್ ಬ್ಯಾಟ್ಸ್‍ಮನ್ ಜೋಸ್ ಬಟ್ಲರ್ (5) ವಿಕೆಟ್ ಬೇಗನೇ ನಷ್ಟವಾಯಿತು. ಬಳಿಕ ಜತೆಗೂಡಿದ ನಾಯಕ ಅಜಿಂಕ್ಯ ರಹಾನೆ ಹಾಗೂ ಸಂಜು ಸ್ಯಾಮ್ಸನ್ ತಂಡವನ್ನು ಎಚ್ಚರಿಕೆಯನ್ನು ಮುನ್ನಡೆಸಿದರು. ರಹಾನೆ ರನ್ ಗಳಿಸಲು ಚಡಪಡಿಸುತ್ತಿದ್ದರೆ, ರಹಾನೆಗೆ ಆಕ್ರಮಣಕಾರಿ ಆಟವಾಡಿದ ಸ್ಯಾಮ್ಸನ್ ನೆರವಾದರು. 10 ಓವರ್‍ಗಳ ವೇಳೆಗೆ ರಾಜಸ್ಥಾನ್ 75 ರನ್ ಗಳಿಸಿತ್ತು.
ಇದಾದ ಬೆನ್ನಲ್ಲೇ ರಹಾನೆ ಕೂಡಾ ಗೇರ್ ಬದಲಾಯಿಸಿದರು. ರಹಾನೆ-ಸಂಜು ನಿರ್ಣಾಯಕ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ರನ್ ಗತಿಗೆ ಅತಿವೇಗ ತುಂಬಿದರು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ರಹಾನೆ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಸಂಜು ಕೂಡಾ 34 ಎಸೆತಗಳಲ್ಲೇ ಐವತ್ತರ ಸಾಧನೆ ಮಾಡಿದರು.
ಅಂತಿಮ ಹಂತದಲ್ಲಿ ರನ್ ಏರಿಸುವ ಭರದಲ್ಲಿ ರಹಾನೆ ವಿಕೆಟ್ ಒಪ್ಪಿಸಿದರು. 49 ಎಸೆತಗಳನ್ನು ಎದುರಿಸಿದ ರಹಾನೆ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‍ಗಳಿಂದ 70 ರನ್ ಗಳಿಸಿದರು. ಅಲ್ಲದೆ ಸಂಜು ಸ್ಯಾಮ್ಸನ್ ಜತೆ ದ್ವಿತೀಯ ವಿಕೆಟ್‍ಗೆ 119 ರನ್‍ಗಳ ಜತೆಯಾಟದಲ್ಲಿ ಭಾಗಿಯಾದರು.
ಕೊನೆಗೂ ಅಕ್ಷರಶ: ಹೈದರಾಬಾದ್ ಬೌಲರ್‍ಗಳನ್ನು ಸ್ಯಾಮ್ಸನ್ ಧೂಳೀಪಟಗೈದರು. ಅಲ್ಲದೆ ತಾವು ಕೂಡಾ ಟೀಮ್ ಇಂಡಿಯಾ ಆಯ್ಕೆಯ ರೇಸ್‍ನಲ್ಲಿರುವುದಾಗಿ ಸಾರಿದರು. ಭುವನೇಶ್ವರ್ ಕುಮಾರ್ ಎಸೆದ 18ನೇ ಓವರ್‍ನಲ್ಲಂತೂ ಸ್ಯಾಮ್ಸನ್ 24 ರನ್ ಚಚ್ಚಿದ್ದರು. ಅಲ್ಲದೆ ಐಪಿಎಲ್‍ನಲ್ಲಿ ಎರಡನೇ ಶತಕ ಸಾಧನೆ ಮಾಡಿದರು. ಅಂತಿಮವಾಗಿ ರಾಜಸ್ಥಾನ್ ಎರಡು ವಿಕೆಟ್ ನಷ್ಟಕ್ಕೆ 198 ರನ್‍ಗಳ ಬೃಹತ್ ಮೊತ್ತ ಪೇರಿಸಿತು.
ಕೇವಲ 55 ಎಸೆತಗಳನ್ನು ಎದುರಿಸಿದ ಸಂಜು 10 ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್‍ಗಳಿಂದ 102 ರನ್ ಗಳಿಸಿ ಅಜೇಯರಾಗುಳಿದರು. ಅಲ್ಲದೆ ಬೆನ್ ಸ್ಟೋಕ್ಸ್ ಜತೆ ಮುರಿಯದ ಮೂರನೇ ವಿಕೆಟ್‍ಗೆ 64 ರನ್‍ಗಳ ಜತೆಯಾಟ ನೀಡಿದರು. ಇನ್ನೊಂದೆಡೆ ಸೋಕ್ಟ್ 9 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 16 ರನ್ ಗಳಿಸಿ ಔಟಾಗದೆ ಉಳಿದರು.
ಹೈದರಾಬಾದ್‍ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ರಾಜಸ್ಥಾನ್ ರಾಯಲ್ಸ್
ಅಜಿಂಕ್ಯ ರಹಾನೆ, ಜೋಸ್ ಬಟ್ಲರ್, ಸಂಜುಸಾಮ್ಸನ್, ಸ್ಟೀವೆನ್‍ಸ್ಮಿತ್, ಬೆನ್‍ಸ್ಟೋಕ್ಸ್, ರಾಹುಲ್ ತ್ರಿಪಾಟಿ, ಕ್ರಿಷ್ಣಪ್ಪ ಗೌತಮ್, ಜೋಫ್ರಾಆಚಾರ್, ಜಯದೇವ್ ಉನದ್ಕತ್, ಶ್ರೇಯಸ್‍ಗೋಪಾಲ್, ದವಲ್‍ಕುಲಕರ್ಣಿ
ಸನ್‍ರೈಸರ್ಸ್ ಹೈದ್ರಾಬಾದ್
ಡೇವಿಡ್‍ವಾರ್ನರ್, ಜಾನಿ ಬೈರ್‍ಸ್ಟೌವ್, ಕನೆವಿಲಿಯಮ್‍ಸನ್, ವಿಜಯ್ ಶಂಕರ್, ಯೂಸೂಫ್ ಪಠಾಣ್, ಮನಿಷ್‍ಪಾಂಡೆ, ರಶೀದ್‍ಖಾನ್, ಭುವನೇಶ್ವರ್ ಕುಮಾರ್, ಸಹಬಾಜ್‍ನದೀಮ್, ಸಂದೀಪ್ ಶರ್ಮಾ, ಸಿದ್ಧಾರ್ಥಕೌಲ್