ಚಳ್ಳಕೆರೆ
ಯಾದವ ಸಮುದಾಯದ ಮಹಿಳೆಯರು ತಮ್ಮ ಮೂಲ ಸಂಪ್ರದಾಯ ಮತ್ತು ಕಟ್ಟು ಪಾಡುಗಳನ್ನು ನಿಯಂತ್ರಿಸಬೇಕು. ಪ್ರಸ್ತುತ ಸಮಾಜದಲ್ಲಿ ಎಲ್ಲಾ ರೀತಿಯ ಬದಲಾವಣೆಯನ್ನು ಆಪೇಕ್ಷೆ ಪಡುವ ಸಂದರ್ಭದಲ್ಲಿ ಹಳೇ ಸಂಪ್ರದಾಯಗಳನ್ನು ಪಾಲಿಸಿದಲ್ಲಿ ಈ ಸಮುದಾಯದ ಮಹಿಳೆಯರು ಪ್ರಗತಿಯೊಂದಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯೂ ಇಂದಿನ ಆಧುನಿಕತೆಗೆ ಹೊಂದಿಕೊಂಡು ಅಭಿವೃದ್ಧಿ ಪಥದತ್ತ ಸಾಗುವಂತೆ ಶ್ರೀಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ, ಸಂಸ್ಥೆಯ ಹಿರಿಯ ಮುಖಂಡ ಬಿ.ವಿ.ಸಿರಿಯಣ್ಣ ತಿಳಿಸಿದರು.
ಅವರು, ಸೋಮವಾರ ಇಲ್ಲಿನ ಯಾದವ ಹಾಸ್ಟಲ್‍ನಲ್ಲಿ ತಾಲ್ಲೂಕು ಗೊಲ್ಲರ ಮಹಿಳಾ ಮಂಡಳಿ ಹಮ್ಮಿಕೊಂಡಿದ್ದ ಕೃಷ್ಣ ಜನ್ಮಾಷ್ಟಮಿಯ ಛದ್ಮ ವೇಷಸ್ಪರ್ಧೆ ಹಾಗೂ ನೂತನ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಗೊಲ್ಲರ ಮಹಿಳಾ ಮಹಿಳಾ ಮಂಡಳಿ ಅಧ್ಯಕ್ಷೆ ಚಿತ್ರಾವತಿ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಮಕ್ಕಳ ಶ್ರೀಕೃಷ್ಣ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು 50ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಬಹುಮಾನ ಪಡೆದಿದ್ಧಾರೆ. ಆದರೆ, ಈ ಬಾರಿ ವಿಶೇಷವಾಗಿ ಮುಸ್ಲಿಂ ಸಮುದಾಯ ಸಿರಿಶ ಎಂಬ ಮಗು ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿದೆ ಎಂದರು.
ಕಾರ್ಯದರ್ಶಿ ಚಾರುಮತಿ ಮಾತನಾಡಿ, ಪ್ರತಿವರ್ಷದಂತೆ ಈ ವರ್ಷವೂ ಕೃಷ್ಣ ವೇಷಭೂಷಣ ಸ್ಪರ್ಧೆ ಹಮ್ಮಿಕೊಂಡಿದ್ದು ಉತ್ತಮ ಪ್ರತಿಕ್ರಿಯೆ ದೊರಕಿದೆ. ಹಲವಾರು ಮಕ್ಕಳು ವಿಭಿನ್ನವಾಗಿ ಶ್ರೀಕೃಷ್ಣ ವೇಷಧರಿಸಿ ಬಂದಿದ್ಧಾರೆ. ಮಹಿಳಾ ಸಂಘ ಮುಂದಿನ ದಿನಗಳಲ್ಲಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಿಸಿದ್ದು, ಎಲ್ಲರ ಸಹಕಾರ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಕೃಷ್ಣ ವಿದ್ಯಾಸಂಸ್ಥೆ ಅಧ್ಯಕ್ಷ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ರವಿಕುಮಾರ್ ಮಾತನಾಡಿ, ನಗರಸಭಾ ಚುನಾವಣೆಯಲ್ಲಿ ವಿಜೇತರಾದ ನಮ್ಮ ಸಮುದಾಯದ ಸಾಕಮ್ಮಕ್ಯಾತಪ್ಪ ಮತ್ತು ವೈ.ಪ್ರಕಾಶ್‍ರವರನ್ನು ಸನ್ಮಾನಿಸುವ ಮೂಲಕ ಈ ಜನಾಂಗವೂ ಸಹ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಪ್ರವೇಶವನ್ನು ಪಡೆದಿದೆ. ಸಮುದಾಯವು ಹಿನ್ನಡೆಯನ್ನು ಸಾಧಿಸಲು ನಮ್ಮಲ್ಲಿರುವ ಮೂಡನಂಬಿಕೆಗಳೇ ಕಾರಣ. ಇನ್ನಾದರೂ ಆಧುನಿಕತೆಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ನಾವೆಎಲ್ಲರೂ ಕಾಯೋನ್ಮುಖರಾಗೊಣವೆಂದರು.ಕಾರ್ಯಕ್ರಮದಲ್ಲಿ ಡಾ.ಹನುಮಪ್ಪ, ತಿಪ್ಪೇಸ್ವಾಮಿ, ಲಲಿತಮ್ಮ, ಜಯಮ್ಮ, ಸುವರ್ಣ, ನಳಿನ, ಶಕುಂತಲಮ್ಮ, ರತ್ನಮ್ಮ, ಅನುಸೂಯಮ್ಮ, ಗೀತಾ, ಲಕ್ಷ್ಮಿದೇವಿ, ಗಿರಿಜಮ್ಮ, ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ