ಹುಳಿಯಾರು
ಆಟವಾಡುತ್ತಿದ್ದ ಮಗುವಿನ ಮೇಲೆ ಹಳೆಯ ಮನೆಯ ಗೋಡೆ ಕುಸಿದು ಬಿದ್ದ ಪರಿಣಾಮ ಪ್ರಣತಿ ಎಂಬ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ಹುಳಿಯಾರು ಸಮೀಪದ ಹಂದನಕೆರೆ ಹೋಬಳಿಯ ದೊಡ್ಡೆಣ್ಣೆಗೆರೆ ಗ್ರಾಮ ಪಂಚಾಯಿ ವ್ಯಾಪ್ತಿಯ ನಡುವನಹಳ್ಳಿಯಲ್ಲಿ ಮಂಗಳವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಜರುಗಿದೆ.
ಮೃತಪಟ್ಟ ಮಗು ರಂಗರಾಜು ಪಾರ್ವತಮ್ಮ ಎಂಬುವರ ಮೂರು ವರ್ಷದ ಮಗಳು ಪ್ರಣತಿ ಎಂದಾಗಿದ್ದು ಈಕೆ ಇನ್ನಿಬ್ಬರ ಮಕ್ಕಳ ಜೊತೆ ಮನೆಯ ಎದುರು ಆಟವಾಡುತ್ತಿದ್ದಾಗ ದೇವರಾಜು ಎಂಬುವರಿಗೆ ಸೇರಿದ ಹಳೆಯ ಮನೆಯ ಇಪ್ಪತ್ತು ಅಡಿ ಎತ್ತರದ ಗೋಡೆ ಕುಸಿದು ಮಗು ಸ್ಥಳದಲ್ಲೇ ಮೃತಪಟ್ಟಿದೆ.ಇನ್ನೆರಡು ಮಕ್ಕಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ.
ಮಗುವಿನ ಸಾವಿನ ಸುದ್ದಿ ಕೇಳಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.