ಚಿತ್ರದುರ್ಗ:
ಕಾರ್ಕಳ ಮಾಜಿ ಶಾಸಕ, ಸವಿತಾ ಸಮಾಜದ ಮುಖಂಡ ಗೋಪಾಲ್ ಭಂಡಾರಿರವರ ನಿಧನಕ್ಕೆ ಸವಿತ ಸಮಾಜದವರು ಪತ್ರಕರ್ತರ ಭವನದಲ್ಲಿ ಶುಕ್ರವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿದರು.
ಸವಿತ ಸಮಾಜದ ಜಿಲ್ಲಾಧ್ಯಕ್ಷ ಎನ್.ಚಂದ್ರಶೇಖರ್ ಮಾತನಾಡಿ ಗೋಪಾಲ್ ಭಂಡಾರಿರವರ ನಿಧನದಿಂದ ಸವಿತ ಸಮಾಜ ಒಬ್ಬ ಧುರೀಣನನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಕರುಣಿಸಿ ದುಃಖತಪ್ತ ಕುಟುಂಬಕ್ಕೆ ಭಗವಂತ ನೆಮ್ಮದಿ ನೀಡಲಿ ಎಂದು ಪ್ರಾರ್ಥಿಸಿದರು.
ಸವಿತ ಸಮಾಜದ ಮುಖಂಡ ಎನ್.ಡಿ.ಕುಮಾರ್ ಮಾತನಾಡಿ ಗೋಪಾಲ್ ಭಂಡಾರಿ ಎರಡು ಬಾರಿ ಕಾರ್ಕಳ ಶಾಸಕರಾಗಿದ್ದರು ಜೀವನದುದ್ದಕ್ಕೂ ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಎಲ್ಲಾ ಜಾತಿಯವರ ವಿಶ್ವಾಸ ಗಳಿಸಿದ್ದರು. ಅವರ ನಿಧನದಿಂದ ಸವಿತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಕಂಬನಿ ಮಿಡಿದರು.
ಸವಿತ ಸಮಾಜದ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ ಸಂಪಿಗೆ ಮಾತನಾಡುತ್ತ ಸವಿತ ಸಮಾಜದ ಮುಖಂಡರು ಹಾಗೂ ಮಾಜಿ ಶಾಸಕ ಗೋಪಾಲ್ ಭಂಡಾರಿರವರ ನಿಧನದಿಂದ ಸವಿತ ಸಮಾಜಕ್ಕೆ ಅಪಾರ ನೋವಾಗಿದೆ. ಪಾರದರ್ಶಕ, ಪ್ರಾಮಾಣಿಕ ರಾಜಕಾರಣಿಯಾಗಿದ್ದ ಅವರ ತತ್ವ ಸಿದ್ದಾಂತವನ್ನು ಸವಿತ ಸಮಾಜ ಪಾಲಿಸಬೇಕಾಗಿದೆ ಎಂದರು.
ಸವಿತ ಸಮಾಜದ ತಾಲೂಕು ಅಧ್ಯಕ್ಷ ಆರ್.ಶ್ರೀನಿವಾಸ್, ಉಪಾಧ್ಯಕ್ಷ ಶ್ರೀನಿವಾಸ್, ಸವಿತ ಸಮಾಜದ ಮುಖಂಡರುಗಳಾದ ಜಿ.ಕೆ.ವೆಂಕಟೇಶ್, ಪಿ.ಘನಶ್ಯಾಂ, ರಾಜು, ನಾಗರಾಜ್, ರಂಜಿತ್, ಪ್ರಸನ್ನಕುಮಾರ್, ಬೋಜು, ನರಸಿಂಹಮೂರ್ತಿ, ಹನುಮಂತಪ್ಪ, ಎನ್.ಶ್ರೀನಿವಾಸ್ ಇನ್ನು ಮುಂತಾದವರು ಭಾವಪೂರ್ಣ ಶ್ರದ್ದಾಂಜಲಿಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








