ಗೌರಿಶಂಕರ ಅಪ್ರಭುದ್ದತೆ ಉಳ್ಳ ಶಾಸಕ – ಬಿ.ಸುರೇಶಗೌಡ

ತುಮಕೂರು

                 ಗ್ರಾಮಾಂತರ ಕ್ಷೇತ್ರದ ಶಾಸಕ ಡಿ,ಸಿ ಗೌರಿಶಂಕರ ಅವರು ಅಪ್ರಬುದ್ದತೆಯಿಂದ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ, ಕ್ಷೇತ್ರದ ಅಭಿವೃದ್ದಿಗೆ ಕಳೆದ ಸಾಲಿನಲ್ಲಿ ನಾನು ತಂದಿರುವ 100 ಕೋಟಿ ಅನುದಾನದ ಕಾಮಗಾರಿಗಳನ್ನು ಅನುಷ್ಠಾನ ಮಾಡಲು ಅವಕಾಶ ಮಾಡಿಕೊಡುವುದನ್ನು ಮೊದಲು ಕಲಿಯಲಿ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಮುಕ್ತವಾಗಿ ಕೆಲಸ ಮಾಡಲು ಅವಕಾಶ ನೀಡದ ಶಾಸಕರು ಕೇವಲ ಕಮೀಷನ್ ಆಸೆಗೆ ಕಾಮಗಾರಿ ನಿಲ್ಲಿಸುವುದು ಶೋಭೆ ತರುವಂತಹದಲ್ಲ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ,

                 ದಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ನೀರು ಹರಿಸುವ ಸಂಬಂದ ಪೈಪುಲೈನು ಕಾಮಗಾರಿಯಲ್ಲಿ 29 ಕೋಟಿ ರೂಗಳ ಅವ್ಯವಹಾರ ಆಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆರೋಪ ಮಾಡಿರುವ ಶಾಸಕರಿಗೆ ಈ ಯೋಜನೆ ಯಾವುದು ಹಣ ಯಾರದು ಬಿಡುಗಡೆ ಆಗಿರುವ ಅನುದಾನ ಎಲ್ಲಿ ಹೋಗಿದೆ, ಗುತ್ತಿಗೆದಾರರಿಗೆ ಬಿಡುಗಡೆ ಆಗಿರುವ ಅನುದಾನವನ್ನು ಇವರು ನನಗೆ ಸೇರಿದೆ ಎಂದು ಆರೋಪ ಮಾಡುವುದು ಎಷ್ಟು? ಸರಿ ಇವರದೇ ಸರ್ಕಾರ ಇದೆ ಲೋಕಾಯುಕ್ತ ಸಂಸ್ಥೆ ಇದೆ ಎ,ಸಿ,ಬಿ ಇದೆ ಯಾವುದರಿಮದ ಆರದೂ ತನಿಖೆ ಮಾಡಿಸಲಿ ಎಮದು ಸವಾಲು ಹಾಕಿದ್ದಾರೆ, ಇದಕ್ಕೂ ಗ್ರಾಮಾಂತರಕ್ಕೂ ಸಂಬಂದ ಏನಿದೆ, ಇದ್ಯಾವುದೂ ಮಾಹಿತಿ ಇಲ್ಲದ ಗ್ರಾಮಾಂತರ ಶಾಸಕರಿಗೆ ಯೋಜನೆಗಳು ಯಾವುವು ಶಾಸಕರ ಕಾರ್ಯಗಳ ಇತಿ ಮಿತಿ ಏನು ಎಂಬುದರ ಬಗ್ಗೆ ಇವರಿಗೆ ರಾಜ್ಯದ ಮುಖ್ಯಮಂತ್ರಿಗಳು ಆಗಲಿ ವಿಧಾನಸಭಾ ಕಾರ್ಯದರ್ಶಿಗಳಿಂದ 1 ವಾರದ ಕಾಲ ತರಬೇತಿ ಪಡೆಯುವಂತೆ ಸುರೇಶಗೌಡ ಶಾಸಕರಿಗೆ ಸಲಹೆ ನೀಡಿದ್ದಾರೆ,
ಕೆಐಏಡಿಬಿ ಯೋಜನೆಯಡಿ ಹಿರೇಹಳ್ಳಿ ಮತ್ತು ಡಾಬಸ್‍ಪೇಟೆ ಕೈಗಾರಿಕಾ ಪ್ರದೇಶಕ್ಕೆ ಹೇಮಾವತಿ ನೀರು ಹರಿಸುವ ಪೈಪುಲೈನ್ ಕಾಮಗಾರಿಯು ಟೆಂಡರ್ ಆಗಿ ಸ್ಥಗಿತಗೊಂಡಿದ್ದ ಯೋಜನೆಯನ್ನು ಸದನದಲ್ಲಿ ಮಾತನಾಡಿ ಅನೇಕ ಬಾರಿ ಬೃಹತ್ ಕೈಗಾರಿಕಾ ಸಚಿವರಿಗೆ ಪತ್ರ ಬರೆದು ಕಾಮಗಾರಿಯನ್ನು ಅನುಷ್ಟಾನ ಮಾಡದಿರುವ ಸಂಸ್ಥೆ ಮತ್ತು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತಡೆ ಪತ್ರ ಬರೆದಿದ್ದ ನಾನು ಕಮೀಷನ್ ಆಸೆ ಪಟ್ಟವನಲ್ಲ, ಎಂದಿದ್ದಾರೆ, ಈ ಕಾಮಗಾರಿಗಳು ನಮ್ಮ ವ್ಯಾಪ್ತಿಯಲ್ಲಿ ಕೂಡಾ ಬರುವುದಿಲ್ಲ, ಮೈದಾಳ ಕೆರೆ ಕೆಐಏಡಿಬಿ ವ್ಯಾಪ್ತಿಯಲ್ಲಿದೆ, ಬುಗುಡನಹಳ್ಳಿ ತುಮಕೂರು ಮಹಾನಗರ ಪಾಲಿಕೆಯ ವಶದಲ್ಲಿದೆ, ಆದರೂ ಯೋಜನೆ ಅನುಷ್ಠಾನಕ್ಕೆ ನನ್ನ ಕಳಕಳಿ ಇದ್ದದ್ದು ಮೈದಾಳ ಕೆರಯಿಂದ ಹಿರೇಹಳ್ಳಿ ಮತ್ತು ಮೈದಾಳ ಗ್ರಾ,ಪಂ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಶುದ್ದ ಕುಡಿಯುವ ನಿರನ್ನು ಒದಗಿಸಲು ಸಹಕಾರಿ ಆಗಲಿದೆ ಎಂಬ ಒಂದೇ ಕಾರಣಕ್ಕೆ ಈ ಯೋಜನೆಗೆ ಒತ್ತಡ ಹಾಕಿ ಬೃಹತ್ ಕೈಗಾರಿಕಾ ಸಚಿವರ ಜೊತೆ ಚರ್ಚೆ ಮಾಡಿ ಸಭೆಗಳನ್ನು ನಡೆಸಿದ್ದೇನೆ, ಇದರ ಬಗ್ಗೆ ಮಾದ್ಯಮಗಳಲ್ಲೂ ಬಂದಿದೆ, ಇವರ ರೀತಿಯಲ್ಲಿ ಕಮೀಷನ್ ಆಸೆಗೋಸ್ಕರ ಯಾವುದೇ ಕಾಮಗಾರಿಗಳನ್ನು ಸ್ಥಗಿತ ಮಾಡಿರಲಿಲ್ಲ ಆದರೆ ನನ್ನ ರಕ್ತ್ರದಲ್ಲೇ ಕಮೀಷನ್ ಎಂಬ ಪದ ಪ್ರಯೋಗವೇ ಇಲ್ಲ ಎಂದು ಸುರೇಶಗೌಡ ತಿಳಿಸಿದ್ದಾರೆ, ಕ್ಷೇತ್ರದಲ್ಲಿ ಸರಿ ಸುಮಾರು 2 ಸಾವಿರ ಕೊಟಿ ಅನುದಾನದ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿಸಿದ್ದೇನೆ ಎಂದಿಗೂ ಯಾವುದೇ ಕಮೀಷನ್ ಆಸೆಗೆ ಕೆಲಸ ಮಾಡಿದವನಲ್ಲ ಸುಖಾಸುಮ್ಮನೆ ಆರೋಪ ಮಾಡುವುದನ್ನು ಗ್ರಾಮಾಂತರ ಶಾಸಕರು ಕೈ ಬಿಡಬೇಕು ಎಂದರು,

                   ತುಮಕೂರು ಗ್ರಾಮಾಂತರ ಶಾಸಕರಿಗೆ ಕಮೀಷನ್ ದಂದೆಯನ್ನು ಕರಗತ ಮಾಡಿಕೊಂಡಿರುವ ಇವರಿಗೆ ಯಾವ ಯೋಜನೆಯಲ್ಲಿ ಎಷ್ಟು? ಕಮೀಷನ್ ಸಿಗಲಿದೆ ಎಂಬ ಲೆಕ್ಕಾಚಾರ ಬಿಟ್ಟರೆ ಕ್ಷೇತ್ರದ ಅಭಿವೃದ್ದಿಗೆ ಇವರ ಕೊಡುಗೆ ಏನು? ಎಂದು ಬಿ, ಸುರೇಶಗೌಡ ಖಾರವಾಗಿ ಪ್ರಶ್ನಿಸಿದ್ದಾರೆ.

ಕಳೆದ ಸಾಲಿನಲ್ಲಿ ನನ್ನ ಅವಧಿಯಲ್ಲಿ ಬಿಡುಗಡೆ ಆಗಿರುವ ನೂರು ಕೋಟಿ ಅನುದಾನದ ವಿವರ

                    ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 25 ಕೋಟಿ ಲೋಕೋಪಯೋಗಿ ಇಲಾಖೆಯಲ್ಲಿ 39 ಕೊಟಿ ಸಣ್ಣ ನೀರಾವರಿ ಇಲಾಖೆಯಲ್ಲಿ 3 ಕೋಟಿ ಕಾಡಗುಜ್ಜನಹಳ್ಳಿ ಬಯಲಾಂಜನೇಯಸ್ವಾಮಿ ದೇವಸ್ತಾನದ ರಸ್ತೆಗೆ 60 ಲಕ್ಷ ಕುರುವೇಲಯು ರಸ್ತೆ ಅಭಿರ್ವದ್ದಿಗೆ 2 ಕೋಟಿ ಬೆಳಗುಂಬ ಗ್ರಾಮದ ಸಿಸಿ ರಸ್ತೆಗೆ 40 ಲಕ್ಷ ಕೇಂದ್ರ ಸರ್ಕಾರದ ಸಿ,ಎಸ್,ಆರ್ ಫಂಡ್ ನಲ್ಲಿ ಸೀತಕಲ್ಲು ಊರುಕೆರೆ ಗ್ರಾಮಗಳ ಶಾಲೆಗಳ ಅಭಿವೃದ್ದಿಗೆ ಬಿಡುಗಡೆ ಆಗಿರುವ 2 ಕೋಟಿ ಅನುದಾನ ಸೋರೆಕುಂಟೆ ರಸ್ತೆಯಿಂದ ಗುಬ್ಬಿ ಮಾರ್ಗದ ರಸ್ತೆ ಸಂಪರ್ಕ ರಸ್ತೆಗೆ 5 ಕೋಟಿ ಹಾಲನೂರು ರಸ್ತೆಗೆ 2 ಕೋಟಿ ಊರುಕೆರೆ ಗ್ರಾ.ಪಂ ಕಟ್ಟಡದ ನಿರ್ಮಾನ ಕಾಮಗಾರಿ 20 ಲಕ್ಷ ಎಸ್,ಇ,ಪಿ ಟಿ,ಎಸ್,ಪಿ ಯೋಜನೆಯಡಿ 6 ಕೋಟಿ ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ಬಿಡುಗಡೆ ಆಗಿರುವ ಅನುದಾನ ತಲಾ 12 ಲಕ್ಷದಂತೆ 33 ಅಂಬೇಡ್ಕರ್ ಸಮುದಾಯ ಭವನಗಳ ನಿರ್ಮಾಣಕ್ಕೆ ಬಿಡುಗಡೆ ಆಗಿರುವ ಅನುದಾನ ಉದ್ಯೋಗಖಾತ್ರಿ ಯೋಜನೆಯ 15.3 ಕೋಟಿ ಎಸ್,ಎಸ್ಟಿ ಗಳಿಗೆ ನೀಡಿರುವ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಲು ಕಮೀಷನ್ ಆಸೆಗಾಗಿ ಕೊಳವೆ ಬಾವಿ ಕೊರೆಯಲು ಬಿಟ್ಟಿಲ್ಲ ಹೀಗೆ ಹತ್ತು ಹಲವು ಯೋಜನೆಗಳ ಅನುದಾನಗಳನ್ನು ಸ್ಥಗಿತಗೊಳಿಸಿರುವುದನ್ನು ಈ ಕೂಡಲೇ ಪ್ರಾರಂಭ ಮಾಡದೇ ಇದ್ದಲ್ಲಿ ಡಿ,ಸಿ ಕಛೇರಿ ಮುಂದೆ ಪ್ರತಿಭಟಿಸಬೇಕಾದೀತು ಎಂದು ಬಿ.ಸುರೇಶಗೌಡ ಎಚ್ಚರಿಕೆಯನ್ನು ನೀಡಿದ್ದಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap