ಬುಕ್ಕಾಪಟ್ಟಣ :
ಬುಕ್ಕಾಪಟ್ಟಣ ಗ್ರಾಮದ ಪೋಲಿಸ್ ಠಾಣೆ, ವಂದೇ ಮಾತರಂ ಆಟೋ ಚಾಲಕರ ಸಂಘ, ಸರ್ಕಾರಿ ಕಿರಿಯ/ಹಿರಿಯ ಪ್ರಾಥಮಿಕ ಪಾಠಶಾಲೆ, ಸರ್ಕಾರಿ ಪ್ರೌಢಶಾಲೆ, ಕರ್ನಟಕ ವಿದ್ಯುತ್ ಪ್ರಸರಣ ಕೇಂದ್ರ, ನಾಡ ಕಛೇರಿ, ರೈತ ಸಂಪರ್ಕ ಕೇಂದ್ರ, ಗ್ರಾಮಪಂಚಾಯ್ತಿ ಹಾಗೂ ಸಂಘ ಸಂಸ್ಥೆಗಳು 72 ನೇ ವರ್ಷದ ಸ್ವಾತಂತ್ರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಬುಕ್ಕಾಪಟ್ಟಣ ಕ್ಷೇತ್ರದ ಜಿಲ್ಲಾಪಂಚಾಯ್ತಿ ಸದಸ್ಯರಾದ ಶ್ರೀ ಬಿ.ಸಿ.ಜಯಪ್ರಕಾಶ್‍ರವರು, ಬಿ.ಕೆ.ಮಂಜುನಾಥ್, ಬಿ.ಜೆ.ಪಿ.ಮುಖಂಡರು, ಸತ್ಯನಾರಾಯಣ, ಸತ್ಯಸಾಯಿ ಟ್ರಾನ್ಸ್‍ಪೋರ್ಟ್ ಮಾಲಿಕರು, ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಗೌರಿಬಾಯಿ, ಉಪಾಧ್ಯಕ್ಷರು, ಊರಿನ ಮುಖಂಡರುಗಳು, ಗ್ರಾಮಸ್ಥರು ಹಾಜರಿದ್ದರು.