ತುಮಕೂರು
ಗ್ರಾಮೀಣ ಜನತೆಗೆ ಕಾನೂನು ಸಾಕ್ಷರತಾ ಕಾರ್ಯಕ್ರಮಗಳ ಅರಿವು ಹೆಚ್ಚು ಉಪಯೋಗವಾಗಲಿ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ರಾಜೇಂದ್ರ ಬದಾಮಿಕರ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ಆವರಣಕ್ಕೆ ಆಗಮಿಸಿದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾನೂನು ಸಾಕ್ಷರತಾ ರಥವನ್ನು ಬರಮಾಡಿಕೊಂಡು ಆನಂತರ ಏರ್ಪಾಟಾಗಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನೆರವಿನೊಂದಿಗೆ ಕಾನೂನು ಅರಿವಿನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಕಾನೂನು ಸಾಕ್ಷರತಾ ರಥದ ಮೂಲಕ ಪ್ರತಿ ಜಿಲ್ಲೆಯನ್ನು ಸಂಪರ್ಕಿಸಿ ಕಾನೂನು ಅರಿವು ಮತ್ತು ನೆರವನ್ನು ಮೂಡಿಸಲಾಗುತ್ತಿದೆ. ಇದರ ಪ್ರಯೋಜನ ಗ್ರಾಮೀಣ ಪ್ರದೇಶದ ಜನತೆಗೆ ಆಗಬೇಕು ಎಂದರು.
ಜಿಲ್ಲೆಯಲ್ಲಿ ಇಂದಿನಿಂದ ಆರಂ‘ವಾಗಿರುವ ಕಾನೂನು ಸಾಕ್ಷರತಾ ರಥ ವಿವಿ‘ ತಾಲ್ಲೂಕುಗಳನ್ನು ಸಂಚರಿಸಲಿದೆ. ಆಯ್ದ ಗ್ರಾಮಗಳಲ್ಲಿ ಕಾನೂನು ಅರಿವು ಮೂಡಿಸಲಾಗುತ್ತದೆ. ವಕೀಲರ ಸಂಘದಿಂದ ಇದಕ್ಕೆ ಉತ್ತಮ ಸ್ಪಂ‘ನೆ ದೊರಕುತ್ತಿದೆ. ಜಿಲ್ಲೆಯ ಯಾವುದೇ ‘ಭಾಗದಲ್ಲಾಗಲಿ ನಮಗೆ ಕಾನೂನಿನ ಅರಿವು ಕಾರ್ಯಕ್ರಮ ಬೇಕು ಎಂದು ತಿಳಿಸಿದರೆ ಅಂತಹ ‘ಭಾಗಗಳಲ್ಲಿ ಕಾರ್ಯಕ್ರಮ ನಡೆಸಲು ನಾವು ಸಿದ್ದರಿದ್ದೇವೆ. ಆಸಕ್ತರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯನ್ನು ಭೇಟಿ ಮಾಡಿ. ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದು ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಮರಿಚೆನ್ನಮ್ಮ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುತ್ತಿರುವ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಇಂದಿಗೂ ಸಹ ಬಡತನದಲ್ಲಿರುವ ಹಳ್ಳಿಗಳು, ದೀನದಲಿತರಿಗೆ, ಶೋಷಿತರಿಗೆ ಕಾನೂನು ಪ್ರಜ್ಞೆ ಮೂಡಿಸಲು ಸಾಧ್ಯವಾಗಿಲ್ಲ. ಪ್ರಾಧಿಕಾರದ ಈ ಕಾರ್ಯಕ್ರಮಗಳು ಇಂತಹ ಜನತೆಗೆ ಅನುಕೂಲವಾಗಲಿ ಎಂದರು.
ವಕೀಲರ ಸಂಘದ ಅಧ್ಯಕ್ಷ ಜಿ.ಕೆ.ಅನಿಲ್ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಯಾವತ್ತೂ ನಮ್ಮ ಸಹಕಾರ ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಅರಿವು ಕಾರ್ಯಕ್ರಮಗಳಿಗೆ ಸಂಘದ ಮೂಲಕ ವಕೀಲರನ್ನು ಕಳುಹಿಸಿಕೊಡಲಾಗುತ್ತದೆ. ಸಾಮಾನ್ಯ ಜನರಿಗೆ ಇದರ ಅನುಕೂಲವಾಗಬೇಕು ಎಂದರು.
ಈ ಸಂದ‘ರ್ದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಎಲ್.ಜಿನರಾಳ್ಕರ್, ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜ್, ಸಂಘದ ಮಾಜಿ ಅಧ್ಯಕ್ಷರಾದ ಕೆ.ಎಚ್.ಹರಿಕುಮಾರ್, ಸಂಘದ ಪದಾಧಿಕಾರಿಗಳಾದ ಸುರೇಶ್, ಕವಿತ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಗೆ ಆಗಮಿಸಿದ ಕಾನೂನು ಸಾಕ್ಷರತಾ ರಥವು ತುಮಕೂರು ತಾಲ್ಲೂಕಿನಲ್ಲಿ ಆಗಸ್ಟ್ 30ರವರೆಗೆ ತಾಲ್ಲೂಕಿನ ವಿವಿ‘ ಪ್ರದೇಶಗಳಲ್ಲಿ ಸಂಚರಿಸಲಿದೆ. ಆನಂತರ ಆ.31ರಂದು ಕುಣಿಗಲ್ ತಾಲ್ಲೂಕಿಗೆ ತೆರಳಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








