ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಚರಣೆ

ತುಮಕೂರು

     ಪ್ರತಿಷ್ಠಿತ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರ್ಸ್ ದಿನಾಚರಣೆಯನ್ನು ಕಾಲೇಜಿನ ಆವರಣದಲ್ಲಿ ದಿನಾಂಕ 15-09-2018ರಂದು ಹಮ್ಮಿಕೊಳ್ಳಲಾಗಿತ್ತು.

     ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಡಾ|| ಡಿ.ಎಸ್. ಸುರೇಶ್‍ರವರು, ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಸಿ.ಎಸ್.ಇ ವಿಭಾಗದ ಮುಖ್ಯಸ್ಥರೂ ಆದ ಡಾ|| ಶಾಂತಲರವರು ಹಾಗೂ ಕಾಲೇಜಿನ ಸಂಶೋಧನಾ ಮುಖ್ಯ ಸಲಹೆಗಾರರಾದ ಡಾ|| ಶ್ರೀಧರ್.ಕೆ.ಎನ್.ರಾವ್ ರವರು, ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಇಂಜಿನಿಯರ್ಸ್ ದಿನಾಚರಣೆಯ ಮಹತ್ವವನ್ನು ತಿಳಿಸಲಾಯಿತು.

     ಕಾಲೇಜಿನ ಎನ್.ಎಸ್.ಎಸ್. ಘಟಕದ ಸಹಯೋಗದಲ್ಲಿ ಸಿ.ಐ.ಟಿ-ವೈ.ಇ.ಸಿ ಆಯೋಜಿಸಿದ್ದ ಇಂಜಿನಿಯರ್ಸ್ ದಿನಾಚರಣೆಯಲ್ಲಿ ಮಾತನಾಡಿದ ಕಾಲೇಜಿನ ಸಂಶೋಧನಾ ಮುಖ್ಯ ಸಲಹೆಗಾರರಾದ ಡಾ|| ಶ್ರೀಧರ್.ಕೆ.ಎನ್.ರಾವ್ ಭಾರತ ರತ್ನ ವಿಶ್ವೇಶ್ವರಯ್ಯನವರ ಹುಟ್ಟಿದ ದಿನಮಾತ್ರ ಅವರನ್ನು ನೆನೆದು ಹೂಮಾಲೇ ಅರ್ಪಿಸಿದರೆ ಸಾಲದು, ಅವರ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು. ಇದೇ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲರು ಮತ್ತು ಸಿ.ಎಸ್.ಇ ವಿಭಾಗದ ಮುಖ್ಯಸ್ಥರೂ ಆದ ಡಾ|| ಶಾಂತಲರವರು ಕಾಲೇಜಿನ ಆವರಣಗಳಲ್ಲಿ ವಿಶ್ವೇಶ್ವರಯ್ಯನರವ ಮತ್ತು ಶ್ರೀ ವಿವೇಕಾನಂದ ರವರ ನುಡಿಮುತ್ತುಗಳನ್ನು ಅಳವಡಿಸಿದ್ದು, ವಿದ್ಯಾರ್ಥಿಗಳು ಅವುಗಳನ್ನು ಪ್ರತಿದಿನ ಗಮನಿಸಿ, ಅವರ ಮಾರ್ಗ ಅನುಸರಿಸಬೇಕು ಎಂದು ತಿಳಿಸಿದರು.

    ಇಂಜಿನಿಯರ್ಸ್ ದಿನಾಚರಣೆಯ ಅದ್ಯಕ್ಷೀಯ ಭಾಷಣದಲ್ಲಿ ಕಾಲೆಜಿನ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಡಾ|| ಡಿ.ಎಸ್. ಸುರೇಶ್‍ರವರು ಉತ್ತಮ ಇಂಜಿನಿಯರ್‍ಗಳಾಗಲು ತಾಂತ್ರಿಕ ಜ್ಞಾನದ ಜೊತೆಗೆÉ ತಾಳ್ಮೆ, ಸಂಯಮ ಹಾಗೂ ಸಮಯ ಪ್ರಜ್ಞ್ನೆ ಇರಬೇಕು; ಇವೆಲ್ಲವನ್ನು ರೂಡಿಸಿಕೊಂಡಿದ್ದ ವಿಶ್ವೇಶ್ವರಯ್ಯನವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ “ಭಾರತ ರತ್ನ” ಪಡೆದರು, ವಿಶ್ವೇಶ್ವರಯ್ಯನವರ ವ್ಯೆಕ್ತಿತ್ವ, ಅವರ ತೊಡುಗೆ ಮತ್ತು ಅವರ ಚಾಕಚಕ್ಯತೆಗೆ ಅವರಿಗೆ “ಸರ್” ಬಿರುದು ಅವರಿಗೆ ಒಲಿದು ಬಂತು ಎಂದು ವಿವರಿಸಿದರು. ಈ ಸಮಾರಂಭದಲ್ಲಿ ಕಾಲೇಜಿನ ಎಲ್ಲಾ ವಿಭಾಗಗಳ ಸಿಬ್ಬಂಧಿ ವರ್ಗದವರು ಹಾಗು ಕಾಲೇಜಿನ ಪ್ರಥಮವರ್ಷದ ವಿದ್ಯಾರ್ಥಿಗಳು ಹಾಜರಿದ್ದರು.
ಸಿ.ಐ.ಟಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರಿಂಗ್ ಸಿಬ್ಬಂಧಿಗಳಿಗೆ ಹಾಗೂ ವ್ಯಾಸಂಗದ ಮಾಡುತ್ತಿರುವ ಭಾರತದ ಭಾವಿ ಇಂಜಿನಿಯರ್‍ಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಎಸ್. ಬಸವರಾಜ್ ರವರು ಹಾಗೂ ಕಾರ್ಯದರ್ಶಿಗಳಾದ ಶ್ರೀಯುತ ಜಿ.ಬಿ ಜ್ಯೋತಿಗಣೇಶ್‍ರವರು ಇಂಜಿನಿಯರಿಂಗ್ ದಿನಾಚರಣೆಯ ಶುಭಶಯ ಕೋರಿದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link