ಚನ್ನಮ್ಮನಾಗತಿಹಳ್ಳಿಯ ಶ್ರೀಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಭಾನುವಾರ ಪೂಜಾ ಕಾರ್ಯ ಯಶಸ್ಸಿ

ಚಳ್ಳಕೆರೆ

         ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದ ಪ್ರಾಚೀನ ದೇವಸ್ಥಾನವಾದ ಶ್ರೀಪಾತಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಭಾನುವಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

         ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಶಿರಾ ತಾಲ್ಲೂಕಿನ ತಡಕಲೂರು ಶ್ರೀತೋತಾಪುರಿ ಸೋಮಶೇಖರಸ್ವಾಮೀಜಿ ಆಶೀರ್ವಾಚನ ನೀಡುತ್ತಾ, ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಭಕ್ತಾಧಿಗಳಲ್ಲಿ ಸಮಸ್ಯೆಗಳ ಹಿನ್ನೆಲೆಯಲ್ಲಿ ದೇವರ ಕಾರ್ಯಗಳಿಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲವೆಂಬ ಭಾವನೆ ಇದೆ. ಆದರೆ, ನಾವು ಎಂದೂ ಸಹ ದೇವರು ಮತ್ತು ದೈವತ್ವವನ್ನು ಪರೀಕ್ಷಿಸುವಂತಹ ಸಾಹಸಕ್ಕೆ ಇಳಿಯಬಾರದು. ಭಗವಂತ ಎಲ್ಲವನ್ನು ಅತಿ ಸೂಕ್ಷ್ಮತೆಯಿಂದ ವೀಕ್ಷಿಸುತ್ತಿದ್ಧಾನೆ. ದೇವರು ಯಾವುದೇ ರೀತಿಯ ಪ್ರಸಾದವನ್ನು ಅನುಗ್ರಹಿಸಿದಲ್ಲಿ ಅದು ಸಮಾಜಕ್ಕೆ ಸದ್ವಿನಿಯೋಗವಾಗುವಂತಿರಬೇಕು. ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಆದ ಮಳೆಯ ಅವಾಂತರವನ್ನು ನೀವೆಲ್ಲರೂ ಬಲ್ಲಿರಿ. ಇದಕ್ಕೂ ಸಹ ದೇವರನ್ನು ದೂರುವವರು ಇದ್ಧಾರೆ. ಆದ್ದರಿಂದ ದಯಮಾಯಿಯಾದ ಪರಮಾತ್ಮ ಯಾವ ಸಮಯದಲ್ಲಿ ಎಷ್ಟು ಬೇಕು ಅಷ್ಟು ಮಾತ್ರ ನಮಗೆ ನೀಡುತ್ತಾನೆ.
           ಇಂದು ನಿಮ್ಮೆಲ್ಲರ ಸಮಕ್ಷಮದಲ್ಲಿ ಶ್ರೀಪಾತಲಿಂಗೇಶ್ವರ ಸ್ವಾಮಿಗೆ ಅಭಿಷೇಕ ಮತ್ತು ವಿಶೇಷ ಪೂಜೆಯನ್ನು ನೆರವೇರಿಸಿದ್ದು, ಈ ಭಾಗದಲ್ಲಿ ಹೆಚ್ಚಿನ ಮಳೆ ಬೆಳೆ ನೀಡುವಂತೆ ಪ್ರಾರ್ಥಿಸಲಾಗಿದೆ. ತಾವೆಲ್ಲರೂ ಅನೇಕ ತೊಂದರೆಗಳ ನಡುವೆಯೂ ಸಹ ಗುರು ಪ್ರೇರಣೆಯಿಂದ ಇಂತಹ ಕಾರ್ಯ ಮಾಡುತ್ತಿದ್ದು, ಇದು ಮುಂದಿನ ದಿನಗಳಲ್ಲಿ ನಿಮಗೆ ಎಲ್ಲಾ ರೀತಿಯ ಭಾಗ್ಯವನ್ನು ಕರುಣಿಸಲಿದೆ ಎಂದರು.
ದೇವಸ್ಥಾನ ಸಮಿತಿ ಹಿರಿಯ ಮುಖಂಡ ಪಿ.ರುದ್ರಮೂರ್ತಿ ಮಾತನಾಡಿ, ಇಂದಿನ ಈ ಕಾರ್ಯಕ್ರಮ ಯಶಸ್ಸಿಯಾಗಲು ಕಾರಣ ಪೂಜ್ಯ ಸ್ವಾಮೀಜಿಯವರು ತಮ್ಮ ಹಲವಾರು ಕಾರ್ಯಗಳನ್ನು ಬದಿಗೊತ್ತಿ ಇಲ್ಲಿಗೆ ಬಂದು ನಮ್ಮನ್ನು ಆಶೀರ್ವದಿಸಿದ್ದಾರೆ. ಆದರೆ, ನಮ್ಮಲ್ಲಿರುವ ಎಲ್ಲಾ ಕಷ್ಟಗಳನ್ನು ನೀಗಿಸುವ ನಿಟ್ಟಿನಲ್ಲಿ ಇಂತಹ ಪುಣ್ಯ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗುತ್ತಿದೆ ಇಂದು ನಮಗೆ ಸ್ವಾಮೀಜಿಯವರು ಮಾಡಿದ ಪೂಜೆಯ ಫಲ ಪೂರ್ಣ ಪ್ರಮಾಣದಲ್ಲಿ ಸಿಗಲಿದೆ ಎಂಬ ಆತ್ಮವಿಶ್ವಾಸ ನನಗಿದೆ ಇದೆ ಎಂದರು.
             ಈ ಸಂದರ್ಭದಲ್ಲಿ ಎಂ.ಬಸವರಾಜು, ಪಾತಲಿಂಗಪ್ಪ, ಎಂ.ಬಿ.ರಮೇಶ್, ವೇದಮೂರ್ತಿ, ಮಲ್ಲಯ್ಯ, ಮನಮೋಹನ್, ಎಂ.ಬಿ.ಉಮೇಶ್, ಕರೀಕೆರೆ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap