ಚಳ್ಳಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಿದೆ.

ಚಳ್ಳಕೆರೆ

     ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ಪಕ್ಷಕ್ಕೆ ಇಲ್ಲಿನ ಮತದಾರರು ಹೆಚ್ಚು ಒಲವನ್ನು ತೋರಿದ್ದಾರೆ. 60 ಸಾವಿರ ಮತಗಳನ್ನು ನೀಡಿದ್ಧಾರೆ. ಪಕ್ಷದ ಅಭ್ಯರ್ಥಿ ಎಂ.ರವೀಶ್‍ಕುಮಾರ್ ಗೆಲುವಿನ ಮೆಟ್ಟಿಲತ್ತ ಹೆಜ್ಜೆ ಇಟ್ಟಿದ್ದರು. ಆದರೆ, ಅದೃಷ್ಟ ಕೈಕೊಟ್ಟಿದ್ದು, ಎರಡನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ಆದರೆ, ನಗರ ಮತದಾರರು ಜೆಡಿಎಸ್ ಪಕ್ಷದ 10 ಜನ ನೂತನ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ಜೆಡಿಎಸ್ ಪಕ್ಷ ಈ ಕ್ಷೇತ್ರದಲ್ಲಿ ಹೆಚ್ಚು ಪ್ರಾಲಬ್ಯವನ್ನು ಹೊಂದಿದೆ ಎಂಬುವುದನ್ನು ನಿರೂಪಿಸಿದ್ಧಾರೆಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ತಿಪ್ಫೇಸ್ವಾಮಿ ತಿಳಿಸಿದ್ದಾರೆ.

      ಅವರು, ಶನಿವಾರ ಇಲ್ಲಿನ ಜೆಡಿಎಸ್ ಕಾರ್ಯಾಲಯದಲ್ಲಿ ಪಕ್ಷದಿಂದ ಆಯ್ಕೆಯಾದ 10 ನಗರಸಭಾ ಸದಸ್ಯರು ಹಾಗೂ ನಗರಸಭಾ ಚುನಾವಣೆಯಲ್ಲಿ ಹೋರಾಟ ನಡೆಸಿ ಸೋತ ಅಭ್ಯರ್ಥಿಗಳಿಗೆ ಆತ್ಮಸ್ಥೈರ್ಯ ತುಂಬ ಮತ್ತು ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

      ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೆಡಿಎಸ್ ರಾಜ್ಯ ಘಟಕದ ಕಾರ್ಯಕಾರಿ ಸಮಿತಿ ಸದಸ್ಯ ಎನ್.ಭೀಮಪ್ಪ, ದೇಶದ ಮಾಜಿ ಪ್ರಧಾನ ಮಂತ್ರಿಯಾಗಿ ಎಚ್.ಡಿ.ದೇವೇಗೌಡ ಪ್ರಸ್ತುತ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ರಾಜ್ಯಕ್ಕೆ ಉತ್ತಮ ಸೇವೆಯನ್ನು ಸಲ್ಲಿಸಿದ್ದು, ಮತದಾರರು ಜೆಡಿಎಸ್ ಪಕ್ಷವನ್ನು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರಲಿರುವರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಂಘಟನೆಯಲ್ಲಿ ಹೆಚ್ಚು ತೊಡಗಿಕೊಳ್ಳುವಂತೆ ಮನವಿ ಮಾಡಿದರು.

       ಜಿಲ್ಲಾ ಪಂಚಾಯಿತಿ ಸದಸ್ಯ ಟಿ.ಮುತ್ತುರಾಜ್ ಮಾತನಾಡಿ, ರಾಜ್ಯದಲ್ಲೇ ಜೆಡಿಎಸ್ ಪಕ್ಷ ಪ್ರಬಲ ಸಂಘಟನೆಯನ್ನು ಹೊಂದಿದ್ದು, ಎಲ್ಲಾ ಚುನಾವಣೆಗಳಲ್ಲಿ ಹೆಚ್ಚು ಪೈಪೋಟಿ ನೀಡಲಿದೆ. ಚಳ್ಳಕೆರೆ ಕ್ಷೇತ್ರದಲ್ಲೂ ಸಹ ನಮ್ಮ ಪಕ್ಷದ ಗೆಲುವನ್ನು ಸಾಧಿಸಲು ಸಂಘಟನೆಯ ಕೊರತೆ ಕಾರಣ ಈ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ನಿವಾರಿಸಿಕೊಳ್ಳೋಣವೆಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಸಮರ್ಥರಾಯ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲಲ್ಲು ಮತದಾರರಿಗೆ ಹೆಚ್ಚು ಆಮೀಷಗಳನ್ನು ಒಡ್ಡಿದ್ದೇ ಕಾರಣ. ಆದರೆ, ಜೆಡಿಎಸ್ ಪ್ರಬಲ ಪೈಪೋಟಿ ಮೂಲಕ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ ಎಂದರು.

       ನಗರಸಭೆಗೆ ಆಯ್ಕೆಯಾದ ನೂತನ ಸದಸ್ಯರಾದ ಕೆ.ಸಿ.ನಾಗರಾಜು, ವಿ.ವೈ.ಪ್ರಮೋದ್, ವಿ.ಎಂ.ವಿಶುಕುಮಾರ್, ಕವಿತಾನಾಯಕಿ, ಜಿ.ಗೋವಿಂದ, ಎಂ.ನಾಗವೇಣಿ,ಡಿ.ನಿರ್ಮಲ, ತಿಪ್ಪಮ್ಮ, ಸಿ.ಶ್ರೀನಿವಾಸ್, ಎಚ್.ಪ್ರಶಾಂತ್‍ಕುಮಾರ್(ಪಚ್ಚಿ) ಇವರನ್ನು ಸನ್ಮಾನಿಸಲಾಯಿತು.ಸಭೆಯಲ್ಲಿ ಕೆ.ಸಿ.ವೀರೇಂದ್ರ(ಪಪ್ಪಿ), ತಾಲ್ಲೂಕು ಗೌರವಾಧ್ಯಕ್ಷ ಎಚ್.ಆನಂದಪ್ಪ, ಎಲೆವೀರಭದ್ರಪ್ಪ, ಕಲಮರಹಳ್ಳಿ ಶಿವಣ್ಣ, ಸಣ್ಣಬೋರಣ್ಣ, ಸಿ.ಚಂದ್ರಯ್ಯ, ಕರಡಪ್ಪ ಮುಂತಾದವರು ಉಪಸ್ಥಿತರಿದ್ದರು.

                     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link