ಚಳ್ಳಕೆರೆ ನಗರದಲ್ಲಿ ಗಣೇಶೋತ್ಸವ ಸೆ.13ರಿಂದ ಆರಂಭ : ಸಿಟಿ ಗಣಪತಿ ಯುವಕ ಸಂಘ ನೇತೃತ್ವ

ಚಳ್ಳಕೆರೆ

                ಕಳೆದ ಸುಮಾರು 40 ವರ್ಷಗಳಿಂದ ಚಳ್ಳಕೆರೆ ನಗರದಲ್ಲಿ ನಿರಂತರವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದ ದಿವ್ಯಜ್ಯೋತಿ ಯುವಕ ಸಂಘ ಪ್ರಸ್ತುತ ವರ್ಷದಿಂದ ಈ ಉತ್ಸವವನ್ನು ನಡೆಸದಿರಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ನೂತನವಾಗಿ ಸಿಟಿ ಗಣಪತಿ ಯುವಕ ಸಂಘ ನೇತೃತ್ವದಲ್ಲಿ ಶ್ರೀಗಣೇಶೋತ್ಸವ ಕಾರ್ಯಕ್ರಮವನ್ನು ಸೆ.13ರಿಂದ ಅಕ್ಟೋಬರ್ 13ರ ತನಕ ನಡೆಸಲಾಗುವುದು ಎಂದು ಸಿಟಿ ಗಣಪತಿ ಯುವಕ ಸಂಘದ ಅಧ್ಯಕ್ಷ ಜಿ.ಯಶವಂತ ತಿಳಿಸಿದ್ಧಾರೆ.
               ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಸಿಟಿ ಗಣಪತಿ ಯುವಕ ಸಂಘದ ಗೌರವಾಧ್ಯಕ್ಷರಾಗಿ ಶಾಸಕ ಟಿ.ರಘುಮೂರ್ತಿ ಹಾಗೂ ಇನ್ನಿತರೆ ಗಣ್ಯರನ್ನು ನೂತನ ಸಮಿತಿಗೆ ಆಯ್ಕೆ ಮಾಡಿದ್ದು, ಶೀಘ್ರದಲ್ಲೇ ಸಂಪೂರ್ಣ ಮಾಹಿತಿಯನ್ನು ನೀಡುವುದಾಗಿ ಸಂಘದ ನೂತನ ಕಾರ್ಯದರ್ಶಿ ಎ. ನಾಗರಾಜು ತಿಳಿಸಿದ್ಧಾರೆ.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link