ಚಳ್ಳಕೆರೆ ನಗರವನ್ನು ರಾಜ್ಯದ ನಂ.1 ಅಭಿವೃದ್ಧಿ ಕ್ಷೇತ್ರವಾಗಿ ಪರಿವರ್ತನೆ

ಚಳ್ಳಕೆರೆ

     ಚಳ್ಳಕೆರೆ ನಗರವನ್ನು ರಾಜ್ಯದ ನಂ.1 ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡಬೇಕೆನ್ನುವ ನನ್ನ ಸಂಕಲ್ಪದ ಕನಸು ನನಸಾಗುವತ್ತ ಸಾಗಿದೆ. ಈಗಾಗಲೇ ನಬಾರ್ಡ್ 3ನೇ ಹಂತದಲ್ಲಿ ಸುಮಾರು 22.40 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ಹಂತ ಹಂತವಾಗಿ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದು, ಚಳ್ಳಕೆರೆ ನಗರ ಉತ್ತಮ ಅಭಿವೃದ್ಧಿಯತ್ತ ಸಾಗಿದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

      ಅವರು, ಶನಿವಾರ ಮಧ್ಯಾಹ್ನ ಇಲ್ಲಿನ 24ನೇ ವಾರ್ಡ್ ವ್ಯಾಪ್ತಿಯಲ್ಲಿರುವ ನೂತನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ವಿಶಾಲವಾದ ಮಣ್ಣಿನ ರಸ್ತೆಗೆ ಡಾಂಬರೀಕರಣ ಮಾಡುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ಅವಧಿಯಲ್ಲಿ ಈ ಕಾಮಗಾರಿಗಳನ್ನು ಪ್ರಾರಂಭಿಸುವ ಸಂದರ್ಭದಲ್ಲೇ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ತಡವಾಗಿ ಈ ಎಲ್ಲಾ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದರು.

       ಪೌರಾಯುಕ್ತ ಜೆ.ಟಿ.ಹನುಮಂತರಾಜು ಮಾತನಾಡಿ, ನಗರದ 31 ವಾರ್ಡ್‍ಗಳ ವ್ಯಾಪ್ತಿಯ ಅವಶ್ಯವಿರುವ 7 ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿ ಚಾಲ್ತಿಯಲ್ಲಿದೆ. ಖಾಸಗಿ ಬಸ್ ನಿಲ್ದಾಣ, ನಗರಸಭೆಯ ನೂತನ ಕಾರ್ಯಾಲಯ ಹಾಗೂ ಎಲ್ಲಾ ರಸ್ತೆಗಳ ಅಭಿವೃದ್ಧಿಯನ್ನು ನರ್ಬಾಡ್‍ನ ಯೋಜನೆಯಡಿ ಜಾರಿಗೊಳಿಸಲಾಗುತ್ತಿದೆ ಎಂದರು.

      ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಆರ್.ಮಂಜುಳಾ, ಕವಿತಾ, ಬಿ.ಟಿ.ರಮೇಶ್‍ಗೌಡ, ಜಿ.ಮಲ್ಲಿಕಾರ್ಜುನ್, ಕೆ.ವೀರಭದ್ರಪ್ಪ, ಚಳ್ಳಕೇರಪ್ಪ, ಕೆ.ಶಿವಮೂರ್ತಿ, ವಿರೂಪಾಕ್ಷಿ, ಕಾಂಗ್ರೆಸ್ ಮುಖಂಡರಾದ ಆರ್.ಪ್ರಸನ್ನಕುಮಾರ್, ನೇತಾಜಿ ಪ್ರಸನ್ನ, ಭರಮಣ್ಣ, ಜಿ.ಮಾರಣ್ಣ, ಇಂಜಿನಿಯರ್ ಲೋಕೇಶ್, ಅಕೌಂಟೆಂಟ್ ಸಂದೀಪ್ ಮುಂತಾದವರು ಭಾಗವಹಿಸಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap