ಬೆಂಗಳೂರು
ಕೇವಲ ಮದ್ಯ ಬಾಟಲಿಗಾಗಿ ಕೂಲಿ ಕಾರ್ಮಿಕರೊಬ್ಬರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳು ಪುಲಿಕೇಶಿನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಾಣಸವಾಡಿಯ ಸೆಲ್ವರಾಜ್ ತುಳಸಿರಾಮ (18), ಲೋಕೇಶ್ (20) ಹಾಗೂ ಸುನೀಲ್ ಕುಮಾರ್ (24)ನನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ರಾಹುಲ್‍ಕುಮಾರ್ ತಿಳಿಸಿದ್ದಾರೆ.
ಪುಲಿಕೇಶಿನಗರ ಕೂಲಿ ಕಾರ್ಮಿಕ ಸತ್ಯಶೀಲನ್ ಎಂಬುವರನ್ನು ಆರೋಪಿಗಳು ಕಳೆದ ಮಾ.25ರಂದು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದರು.ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಚರಣೆ ಕೈಗೊಂಡ ಪುಲಕೇಶಿನಗರ ಪೊಲೀಸರು ಆರೋಪಿಗಳನ್ನು ಬಂಧಿಸಿ ನಡೆಸಿದ್ದಾರೆ.
ಬಾಣಸವಾಡಿಯ ಹೋಟೆಲ್ ಬಳಿ ಕಳೆದ ಮಾರ್ಚ್ 25ರಂದು ತಡರಾತ್ರಿ ಕೈಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಸತ್ಯಶೀಲನ್ ಅವರು ನಡೆದುಕೊಂಡು ಹೋಗುತ್ತಿದ್ದರು.ಮದ್ಯಕ್ಕಾಗಿ ಹುಡುಕಾಟ ನಡೆಸುತ್ತಿದ್ದ ನಾವು ಸತ್ಯಶೀಲನ್ ಕೈಯಲ್ಲಿದ್ದ ಮದ್ಯದ ಬಾಟಲ್ ನೋಡಿ ಮದ್ಯ ಕೊಡುವಂತೆ ಕೇಳಿದೆವು ಆದರೆ ಸತ್ಯಶೀಲನ್ ಮದ್ಯ ಬಾಟಲ್ ಕೊಡಲು ನಿರಾಕರಿಸಿದ್ದರಿಂದ ಕೋಪಗೊಂಡು ಚಾಕುವಿನಿಂದ ಇರಿದು, ಬಾಟಲ್ ಕಿತ್ತುಕೊಂಡು ಪರಾರಿಯಾದೆವು.
ಮದ್ಯ ಬಾಟಲ್‍ಗಾಗಿ ನಾವು ಬೆದರಿಸಲು ಚಾಕುವಿನಿಂದ ಇರಿದಿದ್ದೇವು ನಮಗೆ ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂದು ಆರೋಪಿಗಳು ವಿಚಾರಣೆಯಲ್ಲಿ ತಿಳಿಸಿದ್ದಾರೆ ಪುಲಿಕೇಶಿನಗರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








