ಚಾಮರಾಜನಗರ : 4 ಹಂತಗಳಲ್ಲಿ2000 ಕೋಟಿ ರೂಪಾಯಿ ಬಂಡವಾಳ ಹೂಡಿಕೆ

ಬೆಂಗಳೂರು

      ಟೆಕ್ರೆನ್ ಟೆಕ್ರೆನ್ ಬ್ಯಾಟರಿಸ್ ಪ್ರೈ. ಲಿಮಿಟೆಡ್ನಿಂದ ವಿಶ್ವದ ಮೊದಲ ಕೃತಕ ಬುದ್ದಿಮತ್ತೆ [ಆರ್ಟಿಫಿಶಿಯಲ್ ಇಂಟೆಲಿಜೆನ್ಸ್] ಸಂಯೋಜಿತ ಪರಿಸರ ಸ್ನೇಹಿ, ಧೀರ್ಘ ಬಾಳಿಕೆ ಬರುವ ಸ್ಮಾರ್ಟ್ ಬ್ಯಾಟರಿ ಉತ್ಪಾದನಾ ಕೇಂದ್ರವನ್ನು ತೆರೆಯುತ್ತಿದ್ದು, ಎರಡು ಸಾವಿರ ಕೋಟಿ ರೂಪಾಯಿ ಮೊತ್ತದ ಹೂಡಿಕೆ ಮಾಡಲಾಗುತ್ತಿದೆ.

    ಚಾಮರಾಜನಗರದ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ಕೈಗಾರಿಕಾ ಪ್ರದೇಶದಲ್ಲಿ ಮೊದಲ ಹಂತದಲ್ಲಿ 500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದ್ದು, ನಾಲ್ಕು ಹಂತಗಳ ಈ ಯೋಜನೆಯಡಿ ಹಿಂದುಳಿದ ಪ್ರದೇಶದ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗ ದೊರೆಯಲಿದೆ.

    ಟೆಕ್ರೆನ್ ಬ್ಯಾಟರಿಸ್ ಪ್ರೈವೇಟ್ ಲಿಮಿಟೆಡ್ ನ ಸಿ.ಇ.ಓಡಾ. . ಸಿಎಸ್‍ಆರ್ ರಾಜು, ಕಾರ್ಯಕಾರಿ ನಿರ್ದೇಶಕ ಟಿ.ಪಿ. ಭಾರ್ಗವ್, ಸಂಸ್ಥೆಯ ಸಲಹೆಗಾರ ಶ್ರೀ ವಲ್ಲಭ, ಸಿಒಒ ಧನಂಜಯ್ ಮತ್ತು ತಾಂತ್ರಿಕ ಸಲಹೆಗಾರ ಎ.ಕಾರ್ತಿಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನೂತನ ಮತ್ತು ವಿಶೇಷವಾದ ಬ್ಯಾಟರಿ ಉತ್ಪಾದನಾ ಘಟಕಕ್ಕೆ ಶನಿವಾರ [ಆ.26] ಚಾಮರಾಜನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ಪುಟ್ಟರಂಗ ಶೆಟ್ಟಿ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.

   ವಿಶ್ವದ ಮೊಲದ ಆಲ್ ಇಂಟಿಗ್ರೇಟೆಡ್ ಲಿ-ಐಯಾನ್ ಬ್ಯಾಟರಿ ಸೆಲ್ ಘಟಕವನ್ನು ಅಸ್ಥಿತ್ವಕ್ಕೆ ತರಲಾಗುತ್ತಿದ್ದು, ಟೆಕ್ರೆನ್ ಬ್ಯಾಟರಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅಮೆರಿಕದ ಟೆಕ್ರೆನ್ ಇಂಕ್ ಇದರ ಅಂಗಸಂಸ್ಥೆಗಳಾಗಿವೆ. ಪವನ ವಿದ್ಯುತ್, ಸೌರ ವಿದ್ಯುತ್ ಮತ್ತಿತರ ನೈಸರ್ಗಿಕ ಇಂಧನ ಮೂಲ ಗಳಿಂದಲೂ ಬ್ಯಾಟರಿಗಳಿಗೆ ಇಂಧನ ಸಂಗ್ರಹಿಸಬಹುದಾಗಿದೆ. ಈಗಿರುವ ಬ್ಯಾಟರಿಗಳಿಗಿಂತ ಈ ಆಧುನಿಕ ಬ್ಯಾಟರಿಗಳು ಎರಡು ಪಟ್ಟು ಬಾಳಿಕೆ ಬರುತ್ತವೆ. ಯಾವುದೇ ಅಪಾಯಕರಾಗಿ ವಸ್ತುಗಳನ್ನು ಇದು ಒಳಗೊಂಡಿಲ್ಲ.

    ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ನಿಸರ್ಗಕ್ಕೆ ಯಾವುದೇ ರೀತಿಯಲ್ಲೂ ಹಾನಿಕಾರಕವಲ್ಲ. ಕೈಗಾರಿಕೆಗಳು, ಮನೆಗಳು, ಬೃಹತ್ ಬಸ್ ಗಳು, ಸರಕು ಸಾಗಾಣೆ ವಾಹನಗಳು ಒಳಗೊಂಡಂತೆ ಎಲ್ಲಾ ವಾಹನ, ವಲಯಗಳಲ್ಲೂ ಇಂತಹ ಬ್ಯಾಟರಿಗಳನ್ನು ಬಳಸಬಹುದಾಗಿದೆ ಎಂದರು.

    ಬ್ಯಾಟರಿ ಸೆಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಪ್ರಮುಖ ತಜ್ಞರು, ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯ ತಯಾರಿಕೆ ಮತ್ತು ನವೀಕರಿಸಬಹುದಾದ ಇಂಧನ ಪೂರೈಕೆದಾರರು, ಡೆವಲಪರ್‍ಗಳು ಮತ್ತು ಪವರ್ ಗ್ರಿಡ್ ಆಪರೇಟರ್‍ಗಳಿಗೆ ಇಂಧನ ಸಂಗ್ರಹದ ಶೇಖರಣೆಯ ಪರಿಹಾರಗಳನ್ನು ಒದಗಿಸಲಾಗುತ್ತಿದೆ. ಈಗಾಗಲೇ ಬ್ರಿಟನ್ ನ ಡಿಸ್ಟ್ರಿಬ್ಯೂಟೆಡ್ ನೆಟ್‍ವರ್ಕ್ ಕಾರ್ಯಾಚರಣೆಗಳಿಗಾಗಿ ಡಿಎನ್‍ಒ 90 ಮೆಗಾವ್ಯಾಟ್‍ಗಿಂತಲೂ ಹೆಚ್ಚು ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ.

   ಮೇಕ್ ಇನ್ ಇಂಡಿಯಾ ಯೋಜನೆಗೆ ಪೂರಕವಾಗಿರುವ ಮತ್ತು 100% ಮರುಬಳಕೆ ಮಾಡಬಹುದಾದ, ವಿಷಕಾರಿಯಲ್ಲದ ಮತ್ತು ಎಲ್ಲಾ ರೀತಿಯ ಸ್ಮಾರ್ಟ್ ಬ್ಯಾಟರಿಗಳನ್ನು ಉತ್ಪಾದಿಸಬಹುದು, ಇದು ಪ್ರಪಂಚದಲ್ಲೇ ಮೊದಲನೆ ಗಟಕವಾಗಿದ್ದು, ಅತ್ಯಾಧುನಿಕ ಮತ್ತು ವಿಶಿಷ್ಟ ಸ್ವಾಮ್ಯದ ತಂತ್ರಜ್ಞಾನವನ್ನು ಪರಿಚಯಿಸುತ್ತದೆ. ಎಲ್ಲಾ ರೀತಿಯ ವಿದ್ಯುನ್ಮಾನ ವಾಹನಗಳಿಗೆ ಮತ್ತು ಶೇಖರಣಾ ಬ್ಯಾಟರಿಗಳನ್ನು ಸಹ ಉತ್ಪಾದಿಸಲಿದೆ ಎಂದು ಹೇಳಿದರು.

    ಹಸಿರುಮನೆ ಅನಿಲ ಹೊರಸೂಸುವಿಕೆ ಮತ್ತು ಇಂಧನ ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ನಿವ್ವಳ ಶೂನ್ಯ ಇಂಗಾಲದ ತಂತ್ರಗಳು ಮತ್ತು ಭಾರತದ ಕಾರ್ಯಕ್ಷಮತೆಯನ್ನು ಬೆಂಬಲಿಸುತ್ತದೆ. ಉತ್ಪಾದನಾ ಮಾರ್ಗವು ಲಿಥಿಯಂ ಬ್ಯಾಟರಿ ತ್ಯಾಜ್ಯದ ಮಾನವ ಟೋಲ್ ಮತ್ತು ಪರಿಸರ ವಿಜ್ಞಾನದ ಹೆಜ್ಜೆಗುರುತನ್ನು ನಿವಾರಿಸಲಿದೆ.

     ಇದು ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಯನ್ನು ಉತ್ತೇಜಿಸುತ್ತದೆ. ಪ್ರಸ್ತಾವಿತ ಉತ್ಪಾದನಾ ಮಾರ್ಗವು ಕರ್ನಾಟಕವನ್ನು ಲಿಥಿಯಂ-ಐಯಾನ್ ಕೋಶಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುತ್ತದೆ ಮತ್ತು ಬ್ಯಾಟರಿಗಳು ವಿದ್ಯುತ್ ಚಲನಶೀಲತೆ ಮತ್ತು ಶಕ್ತಿಯ ಶೇಖರಣೆಗಾಗಿ ಇತರ ರಾಜ್ಯಗಳಿಗಿಂತ ಉತ್ತಮವಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link