ಚಾಲಕರಿಂದ ಹಣ ವಸೂಲಿ: ಇಬ್ಬರು ಪೊಲೀಸರ ಅಮಾನತು

ತುಮಕೂರು:

     ಹೆದ್ದಾರಿಯಲ್ಲಿ ವಾಹನ ನಿಲ್ಲಿಸಿಕೊಂಡು ಅಲ್ಲಿ ಓಡಾಡುವ ವಾಹನ ಚಾಲಕರುಗಳಿಂದ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಬಂದ ದೂರಿನ ಮೇರೆಗೆ ಓರ್ವ ಎಎಸ್‌ಐ ಮತ್ತು ಜೀಪ್ ಚಾಲಕನನ್ನು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಅಮಾನತು ಮಾಡಿದ್ದಾರೆ.

    ಕಳ್ಳಂಬೆಳ್ಳ ಮಾರ್ಗದಲ್ಲಿ ಬರುವ ಶೀಬಿ ಬಳಿ ವಾಹನ ನಿಲ್ಲಿಸಿಕೊಂಡು ವಾಹನಗಳನ್ನು ಅಡ್ಡಗಟ್ಟಿ ಹಣ ಪಡೆಯುತ್ತಿದ್ದರೆಂಬ ಆಪಾದನೆ ಮೇರೆಗೆ ಎಎಸ್‌ಐ ಚಿದಾನಂದಸ್ವಾಮಿ ಮತ್ತು ಜೀಪ್ ಚಾಲಕ ಚಿಕ್ಕಹನುಮಯ್ಯ ಅವರುಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ.

   ಕರ್ನಾಟಕ ರಾಷ್ಟ ಸಮಿತಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರು ವಿಡಿಯೋ ಮಾಡಿದ್ದು, ಸದರಿ ವಿಡಿಯೋದಲ್ಲಿ ಜೀಪ್ ಚಾಲಕ ರೈತರೊಬ್ಬರಿಗೆ ಹಣ ವಾಪಸ್ ಮಾಡುತ್ತಿರುವ ದೃಶ್ಯಗಳು ಹೆಚ್ಚು ವೈರಲ್ ಆಗಿವೆ. ರೈತರಿಂದ ಹೀಗೆ ಹಣ ಪಡೆಯುತ್ತಿರುವ ಬಗ್ಗೆ ರಾಷ್ಟç ಸಮಿತಿ ಪಕ್ಷದ ಪದಾಧಿಕಾರಿಗಳು ಖಂಡಿಸಿದ್ದು, ಹಣ ವಾಪಸ್ ಕೊಡಿಸಿದ್ದಾರೆ.. ಈ ಸಂಬಂಧ ಎಸ್ಪಿ ಅವರಿಗೂ ಮಾಹಿತಿ ಹೋಗಿದ್ದು, ಅಮಾನತ್ತಿನ ಕ್ರಮ ಜರುಗಿಸಿದ್ದಾರೆ.

    ಹಿರಿಯೂರಿನಿಂದ ಕುರಿಗಳನ್ನು ವಾಹನದಲ್ಲಿ ತರುತ್ತಿದ್ದರು. ಆ ವಾಹನ ತಡೆದು ಅವರಿಂದ ಕಾಸಿಗೆ ಕೈ ಒಡ್ಡಿದ್ದಾರೆ. ಶಿರಾ ತುಮಕೂರು ರಸ್ತೆಯಲ್ಲಿ 2 ಕಡೆ ಇದೇ ದೃಶ್ಯಗಳು ಕಂಡುಬAದವು. ತಡೆಯಲಾಗದೆ ಬಡ ಚಾಲಕನಿಗೆ ಹಣ ಕೊಡಿಸಿದೆ. ಈ ಹಿಂದೆ ಕುಣಿಗಲ್ ತಾಲ್ಲೂಕಿನ ಹುಲಿಯೂರು ದುರ್ಗದಲ್ಲಿ ಪ್ರಭಾರ ಉಪ ನೋಂದಣಾಧಿಕಾರಿ ಹೀಗೆ ಲಂಚ ಪಡೆಯುವುದನ್ನು ನಮ್ಮ ರಾಷ್ಟ ಸಮಿತಿ ಪಕ್ಷದ ಕಾರ್ಯಕರ್ತರು ವಿಡಿಯೋ ಮಾಡಿದ್ದರು. ಅದರ ದೂರಿನ ಆಧಾರದ ಮೇರೆಗೆ ಅವಬರನ್ನು ಅಮಾನತು ಮಾಡಲಾಗಿದೆ.

    ಸಮಾಜದಲ್ಲಿ ಲಂಚ ಎಂಬುದು ವ್ಯಾಪಕವಾಗುತ್ತಿದ್ದು ಇದರ ವಿರುದ್ದ ಹೋರಾಡದಿದ್ದರೆ ಸಮಾಜಕ್ಕೆ ಉಳಿಗಾಲವಿಲ್ಲ, ಲಂಚ ಪಡೆದ ಆರೋಪಿತರನ್ನು ಅಮಾನತುಗೊಳಿಸಿದರೆ ಸಾಲದು. ಅವರನ್ನು ಕೆಲಸದಿಂದಲೇ ವಜಾಗೊಳಿಸಬೇಕು ಎಂದು ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap