ಚಿಕನ್‌ ಮಟನ್‌ ಮೊಟ್ಟೆ ಬೆಲೆ ಏರಿಕೆ….!

ಬೆಂಗಳೂರು

        ಒಂದು ತಿಂಗಳ ಹಿಂದೆ ಒಂದು ಕೆಜಿ ರೆಡಿ ಚಿಕನ್ 160-180 ರೂಪಾಯಿ ಇದ್ದರೆ, ಸದ್ಯ ಒಂದು ಕೆಜಿ ರೆಡಿ ಚಿಕನ್ ದರ 300 ರೂಪಾಯಿ ಆಸುಪಾಸಿಗೆ ಬಂದು ನಿಂತಿದೆ. 500-600 ರೂಪಾಯಿ ಇದ್ದ ಮಟನ್ ಬೆಲೆ ಸದ್ಯ 700-800 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು ಮೊಟ್ಟೆ ಬೆಲೆ ಕೂಡ 5.5 ರೂಪಾಯಿಗಳಿಂದ ಸದ್ಯ 7-8 ರುಪಾಯಿಗೆ ಹೆಚ್ಚಳವಾಗಿದೆ. 

    ದರ ಹೆಚ್ಚಳಕ್ಕೆ ಕಾರಣವೇನು? ಬೇಸಿಗೆ ಕಾಲದಲ್ಲಿ ಚಿಕನ್‌ಗೆ ಬೇಡಿಕೆ ಕಡಿಮೆಯಾದ ಕಾರಣ ಬೆಲೆ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ಕೋಳಿ ಸಾಕಾಣಿಕೆದಾರರು, ಉದ್ಯಮಿಗಳು ಸಾಕಾಣಿಕೆಯನ್ನು ಕಡಿಮೆ ಮಾಡಿದ್ದರು. ಮೇವಿನ ಕೊರತೆಯಿಂದಾಗಿ ಕುರಿ, ಮೇಕೆ ಸಾಕಾಣಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಆದರೆ, ಈಗ ಮದುವೆ ಸೀಜನ್ ಕೂಡ ಶುರುವಾಗಿದ್ದು, ಜಾತ್ರೆಗಳು ಕೂಡ ನಡೆಯುತ್ತಿರುವ ಕಾರಣ ಚಿಕನ್, ಮಟನ್‌ಗೆ ಭಾರಿ ಬೇಡಿಕೆ ಉಂಟಾಗಿದೆ.

    ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆ ಇದ್ದು ಬೇಡಿಕೆ ದಿಢೀರ್ ಎಂದು ಹೆಚ್ಚಾದ ಕಾರಣ ಮಾಂಸದ ದರ ಭಾರಿ ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ಕೂಡ ನಿಷೇಧ ಇರುವ ಕಾರಣ, ಮೀನು ಪೂರೈಕೆ ಕಡಿಮೆಯಾಗಿದ್ದು, ಮಾಂಸಕ್ಕೆ ಬೇಡಿಕೆ ಹೆಚ್ಚಾಗಲು ಕಾರಣಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

   ಬಿಜೆಪಿಯಿಂದ ಹಣ ಪಡೆದ ಮುಸ್ಲಿಮರು ಕಾಂಗ್ರೆಸ್‌ಗೆ ಮತ ಹಾಕಿದರು: ಮಾಜಿ ಸಚಿವ ಎಂಟಿಬಿ ನಾಗರಾಜ್ ವಿವಾದ ತರಕಾರಿ, ಹಣ್ಣು ಬೆಲೆಯೂ ದುಬಾರಿ ಇನ್ನು ತರಕಾರಿ ಹಣ್ಣುಗಳ ಬೆಲೆಯಲ್ಲೂ ದಿಢೀರ್ ಹೆಚ್ಚಳವಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಯಾವುದೇ ತರಕಾರಿ ಬೆಲೆ ಕೇಳಿದರೂ 50-100 ರೂಪಾಯಿ ಆಗಿದೆ. ಸದ್ಯ ಈರುಳ್ಳಿ ಮಾತ್ರ 100 ರೂಪಾಯಿಗೆ 5-6 ಕೆಜಿ ಸಿಗುತ್ತಿದೆ. ತೀವ್ರ ಬಿಸಿಲು ಅದಾದ ನಂತರ ಬಂದ ಮಳೆಯಿಂದಾಗಿ ಸೊಪ್ಪು, ತರಕಾರಿ ಬೆಳೆಗಳು ನಾಶವಾಗಿದೆ, ಮದುವೆ ಸೀಸನ್ ಬೇರೆ ಶುರುವಾಗಿದ್ದು ತರಕಾರಿಗೆ ಬೇಡಿಕೆ ಹೆಚ್ಚಾದ ಪರಿಣಾಮ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

    ಒಂದು ಕೆಜಿ ಹುರುಳಿಕಾಯಿ ಬೆಲೆ 100 ರೂಪಾಯಿ ಗಡಿ ದಾಟಿದ್ದು, ಮೈಸೂರು ಬದನೆ 60-80 ರೂಪಾಯಿ ಆಗಿದೆ. ಕ್ಯಾರೆಟ್ 60 ರೂಪಾಯಿ, ನುಗ್ಗೆಕಾಯಿ 120 ರೂಪಾಯಿ, ಟೊಮ್ಯಾಟೊ 30-40 ರೂಪಾಯಿ, ಹಸಿರು ಮೆಣಸಿನಕಾಯಿ 40-50 ರುಪಾಯಿ, ಕ್ಯಾಪ್ಸಿಕಂ 50-60 ರೂಪಾಯಿ, ಗೋರಿಕಾಯಿ 45-55 ರೂಪಾಯಿ, ಬೆಂಡೆಕಾಯಿ 45-50 ರುಪಾಯಿಗೆ ಮಾರಾಟವಾಗುತ್ತಿದೆ. ತರಕಾರಿ ಮಾತ್ರವಲ್ಲದೆ ಸೊಪ್ಪುಗಳ ದರ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ದುಪ್ಪಟ್ಟಾಗಿದೆ. ಕೊತ್ತಮರಿ, ದಂಟು, ಅರಿವೆ, ಪಾಲಕ್, ಮೆಂತ್ಯ ಸೊಪ್ಪಿನ ದರ ಭಾರಿ ಏರಿಕೆಯಾಗಿದೆ.

    ಹಣ್ಣಿನ ಬೆಲೆಗಳಲ್ಲಿ ಕೂಡ ಏರಿಕೆ ಕಂಡಿದ್ದು ಗ್ರಾಹಕರಿಗೆ ಹೊರೆಯಾಗಿದೆ. ಸಪೋಟಾ 90 ರೂಪಯಿ, ದಾಳಿಂಬೆ 130, ಅನಾನಸ್ 90 ರು., ಪಪ್ಪಾಯ 60 ರುಪಾಯಿ, ಮೋಸಂಬಿ 60, ದ್ರಾಕ್ಷಿ 80 ರೂಪಾಯಿ, ಸೇಬು 220 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap