ಚಿತ್ರದುರ್ಗ: ಗೆದ್ದರೆ ದುರ್ಗದಲ್ಲೇ ಮಾದರಿ ವಾರ್ಡ್ ಮಾಡುವೆ

ಚಿತ್ರದುರ್ಗ:

ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಮ್ಮನ್ನು ಬೆಂಬಲಿಸಿ ಗೆಲ್ಲಿಸಿದರೆ ಇಡೀ ಚಿತ್ರದುರ್ಗ ನಗರದಲ್ಲಿಯೇ 35ನೇ ವಾರ್ಡ್‍ನ್ನು ಒಂದು ಮಾದರಿ ವಾರ್ಡ್‍ನಂತೆ ಅಭಿವೃದ್ದಿ ಪಡಿಸುವುದಾಗಿ ಬಿಜೆಪಿ ಅಭ್ಯರ್ಥಿ ಎಸ್.ಬಾಸ್ಕರ್ ಭರವಸೆ ನೀಡಿದರು.
ಶುಕ್ರವಾರದಂದು ವಾರ್ಡಿನಲ್ಲಿ ಮನೆ ಮನೆಗೆ ತೆರಳಿ ಬಿರುಸಿನ ಮತಯಾಚನೆ ನಡೆಸಿದ ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ಮತದಾರರ ಸಭೆಯಲ್ಲಿ ಅವರು ಮಾತನಾಡಿದರು

35ನೇ ವಾರ್ಡಿನಲ್ಲಿ ಅನೇಕ ಸಮಸ್ಯೆಗಳು ಇವೆ. ಇಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಇದೆ. ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ನಾನು ಒಮ್ಮೆ ಚಿತ್ರದುರ್ಗ ನಗರಸಭೆಗೆ ಸದಸ್ಯನಾಗಿ ಆಯ್ಕೆಯಾಗಿದ್ದೇನೆ. ನನ್ನ ವಾರ್ಡಿನಲ್ಲಿ ನನ್ನ ಮೇಲೆ ನಂಬಿಕೆ ಇಟ್ಟು ಅಯ್ಕೆ ಮಾಡಿದ ಜನರಿಗೆ ನ್ಯಾಯ ದೊರೆಕಿಸಿಕೊಟ್ಟಿದ್ದೇನೆ ಎಂದರು
ಪಕ್ಷದ ಕಾರ್ಯಕರ್ತರು, ಇಲ್ಲಿನ ಮತದಾರರು ಮತ್ತು ಶಾಸಕರ ಸೂಚನೆಯ ಮೇರೆಗೆ 35ನೇ ವಾರ್ಡಿನಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದೇನೆ. ಮತದಾರರು ನಂಬಿಕೆ ಇಟ್ಟು ಆಯ್ಕೆ ಮಾಡಿದರೆ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಳ್ಳುತ್ತೇನೆ. ವಾರ್ಡಿನ ಸಮಗ್ರ ಅಭಿವೃದ್ದಿಗಾಗಿ ಸರ್ವ ಪ್ರಯತ್ನ ಮಾಡುವುದಾಗಿಯೂ ಬಾಸ್ಕರ್ ಹೇಳಿದರು
ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ವ್ಯವಸ್ಥೆಯೂ ಸೇರಿದಂತೆ ನಾಗರೀಕ ಸೌಲಬ್ಯಗಳನ್ನು ಕಲ್ಪಿಸಿಕೊಡಲು ಆದ್ಯತೆ ನೀಡಲಾಗುವುದು. ಯಾರೇ ದೂರವಾಣಿ ಕರೆ ಮಾಡಿ ಸಮಸ್ಯೆ ಇರುವ ಬಗ್ಗೆ ತಿಳಿಸಿದರೆ 24 ಗಂಟೆಯೊಳಗೆ ಸ್ಪಂದಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು

ಚಿತ್ರದುರ್ಗದ ಅಭಿವೃದ್ದಿಯ ದೃಷ್ಟಿಯಿಂದ ನಗರಸಭೆಯ ಚುನಾವಣೆ ಈ ಬಾರಿ ತುಂಬಾ ಮಹತ್ವದ್ದಾಗಿದೆ. ನಗರದ ಎಲ್ಲಾ 35 ವಾರ್ಡ್‍ಗಳಲ್ಲಿಯೂ ಸ್ಥಳೀಯ ಶಾಸಕರಾಗಿರುವ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಬಿಜೆಪಿಯ ನಾಯಕರು ಸಮರ್ಥರು ಮತ್ತು ಅಭಿವೃದ್ದಿಯ ಬಗ್ಗೆ ಕಾಳಜಿ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದಾರೆ. ಹೀಗಾಗಿ ಚಿತ್ರದುರ್ಗ ನಗರಸಭೆಯಲ್ಲಿ ಬಿಜೆಪಿ ಅಧಿಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಡೀ ಜಿಲ್ಲೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಚಿತ್ರದುರ್ಗದಲ್ಲಿ ಸತತ ಐದು ಬಾರಿ ತಿಪ್ಪಾರೆಡ್ಡಿ ಅವರು ಗೆದ್ದು ಬಂದಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ನಗರಸಭೆಯ ಚುನಾವಣೆ ನಡೆಯುತ್ತಿದ್ದು, ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಬಿಜೆಪಿಯ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು

ಇಡೀ ದೇಶ ಇಂದು ಬಿಜೆಪಿಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಗತ್ತು ಕೊಂಡಾಡುತ್ತಿದೆ. ಇಂತಹ ಶ್ರೇಷ್ಠ ನಾಯಕ ಇಂದು ದೇಶಕ್ಕೆ ಸಿಕ್ಕಿರುವುದು ನಮ್ಮ ಸೌಭಾಗ್ಯ. ಪಕ್ಷವನ್ನು ತಳಮಟ್ಟದಿಂದ ಇನ್ನೂ ಗಟ್ಟಿಗೊಳಿಸಬೇಕಾಗಿರುವುದರಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾಗಿರುವುದು ಅನಿವಾರ್ಯ ಎಂದು ಹೇಳಿದರು
ಇದಕ್ಕೂ ಮುಂಚೆ ಗಾಂಧಿ ನಗರ ಮತ್ತು ಸಾಧಿಕ್‍ನಗರದಲ್ಲಿ ಅವರು ಮತಯಾಚಿಸಿದರು. ಮನೆ ಮನೆಗೆ ಬೇಟಿ ನೀಡಿದ ಬಾಸ್ಕರ್, ಅಭಿವೃದ್ದಿಗಾಗಿ ತಮಗೆ ಬೆಂಬಲ ನೀಡುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಣ್ಣ, ಕೃಷ್ಣಮೂರ್ತಿ, ಈಶ್ವರ್, ಪುಟ್ಟಣ್ಣ, ರಮೇಶ್, ಮಂಜುನಾಥ್, ಸಂತೋಷ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು

]ಇಂದು ನಾಮಪತ್ರ ಸಲ್ಲಿಕೆ;
ನಗರಸಭೆಯ 35ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಅನುಪಮ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಸ್.ಬಾಸ್ಕರ್ ಅವರು ಶನಿವಾರದಂದು ನಾಮಪತ್ರ ಸಲ್ಲಿಸುವರು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಬಾಸ್ಕರ್ ಅವರು ಮನವಿ ಮಾಡಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page like ಮಾಡಿ

Recent Articles

spot_img

Related Stories

Share via
Copy link
Powered by Social Snap