ಚಿನಾಹಳ್ಳಿ ಪುರಸಭೆ: 79 ನಾಮಪತ್ರ ಸಲ್ಲಿಕೆ

ಚಿಕ್ಕನಾಯಕನಹಳ್ಳಿ

              ಪಟ್ಟಣದ ಪುರಸಭೆಯ 23 ವಾರ್ಡ್‍ಗಳಿಗೆ ಆಗಸ್ಟ್ 31ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನದವರೆಗೆ ಒಟ್ಟು 79 ನಾಮಪತ್ರಗಳು ಸಲ್ಲಿಕೆಯಾಗಿದೆ.

                ಕಾಂಗ್ರೆಸ್ ಪಕ್ಷದಿಂದ 23 ವಾರ್ಡ್‍ಗಳಿಗೆ ಬದಲಾಗಿ 24 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 9 ನೇ ವಾರ್ಡ್‍ಗೆ ಇಬ್ಬರು ಕಾಂಗ್ರೆಸ್ ಪಕ್ಷದಿಂದ ಬಿ.ಫಾರ್ಮ್ ನೀಡಿದೆ, ಬಿಜೆಪಿ ಪಕ್ಷದಿಂದ 23 ವಾರ್ಡ್‍ಗಳ ಪೈಕಿ 11 ನೇ ವಾರ್ಡ್ ಹಾಗೂ 23 ನೇ ವಾರ್ಡ್‍ಗೆ ಅಭ್ಯರ್ಥಿಗಳು ಇಲ್ಲದ ಕಾರಣ 21 ಮಂದಿ ಮಾತ್ರ ನಾಮಪತ್ರ ಸಲ್ಲಿಸಲಾಗಿದೆ. ಜೆಡಿಎಸ್ ಪಕ್ಷದಿಂದ 23 ಮಂದಿ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಬಹುಜನ ಸಮಾಜವಾದಿ ಪಕ್ಷದಿಂದ 1 ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದು, ಪಕ್ಷೇತರರಾಗಿ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

               1 ರಿಂದ 23 ರವರೆಗೂ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಿದವರ ವಿವರ ಇಂತಿದೆ: ಕ್ರಮವಾಗಿ ಒಂದನೇ ವಾರ್ಡ್‍ನಿಂದ ಸದಾಶಿವಮೂರ್ತಿ, ಹೇಮಾವತಿ, ಜೆ.ಎಲ್.ಲಕ್ಷ್ಮಿ, ಸೋಮಶೇಖರಯ್ಯ, ಬಾಲರಾಜು, ನಾಗಣ್ಣ, ನಿರ್ಮಲಾ, ಸುಗಂದರಾಜು, 9ನೇ ವಾರ್ಡ್‍ನಲ್ಲಿ ಬ್ರಹ್ಮನಾಂದ್ ಹಾಗೂ ಜಗದೀಶ್ ಒಂದೇ ವಾರ್ಡ್‍ಗೆ ಈ ಇಬ್ಬರಿಗೂ ಬಿ ಫಾರ್ಮ್ ನೀಡಿದೆ. ಮಧು, ಶೋಭಾ, ಸಿ.ಕೆ.ಜಯರಾಮಯ್ಯ, ಜಯಮ್ಮ, ಬಸವರಾಜು.ಸಿ, ಮಹಮದ್‍ಹುಸೇನ್, ಮಹಮದ್‍ಜಹೀರ್, ಸಿ.ಹೆಚ್.ಗಂಗಾಧರಯ್ಯ, ಮಂಜುಳಾ, ಭವ್ಯ, ಹೇಮಾವತಿ, ಹೆಚ್.ಎನ್ ಸಂಜೀವಯ್ಯ, ಗಂಗಾ.ಎಮ್, ಉಮಾಪರಮೇಶ್, ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.

               1 ರಿಂದ 23 ರವರೆಗೂ ಬಿ.ಜೆ.ಪಿ ಪಕ್ಷದಿಂದ 11 ಮತ್ತು 23 ನೇ ವಾರ್ಡ್‍ಗೆ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಕಾರಣ 21 ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ. ಕವಿತಾ, ರತ್ನಮ್ಮ, ರೂಪಕಲಾ, ನಾಗರಾಜು, ಶಾಂತಕುಮಾರ್, ಸಿ.ಆರ್.ಶಶಿಶೇಖರ್, ಬಿ.ವಿ.ಪೂರ್ಣಿಮಾ, ಮೆಹಬೂಬ್, ಹೆಚ್.ಬಿ.ಪ್ರಕಾಶ್, ರಾಜಮ್ಮ, ಸಿ.ಡಿ.ರಂಗದಾಮಯ್ಯ, ಜಯಮ್ಮ, ಮಿಲಿಟರಿಶಿವಣ್ಣ, ಅಲತಾಫ್, ಅಫೀಸುಲ್ಲಾಖಾನ್, ಮಹೇಶ್.ಸಿ.ಪಿ, ಲೀಲಾವತಿ, ವರಮಹಾಲಕ್ಷ್ಮಿ, ಕೆ.ಎಮ್.ಲಕ್ಷ್ಮಮ್ಮ, ಮಲ್ಲಿಕಾರ್ಜುನಸ್ವಾಮಿ, ಮಮತಾ, ಬಿ.ಜೆ.ಪಿ.ಯ ಅಧಿಕೃತ ಅಭ್ಯರ್ಥಿಗಳು.

                 1 ರಿಂದ 23 ರವರೆಗೂ ಜೆ.ಡಿ.ಎಸ್ ಅಭ್ಯರ್ಥಿಗಳು ಕ್ರಮವಾಗಿ ಪೂರ್ಣಿಮ, ಇಂದ್ರಮ್ಮ, ಸುಧಾ, ಸಿದ್ದಮ್ಮ, ಸಿ.ಡಿ.ಸುರೇಶ್, ದಯಾನಂದ್(ಕೆಂಗಾಲ್), ಮಮತಾ, ಕೆ.ಮಲ್ಲಿಕಾರ್ಜುನಸ್ವಾಮಿ, ಕೃಷ್ಣಪ್ಪ, ಸಿ.ಎಮ್ ಲಕ್ಷ್ಮಿ, ಎ.ಲಕ್ಷ್ಮಿ, ಸಿ.ಕೆ.ಉಮೇಶ್, ಪುಷ್ಪಾಲತಾ, ಸಿ.ಬಿ.ರೇಣುಕಾಸ್ವಾಮಿ, ಮಲ್ಲೇಶಯ್ಯ, ಜಾಕೀರ್‍ಸಾಬ್, ಸಿ.ಬಿ.ತಿಪ್ಪೇಸ್ವಾಮಿ, ರೇಣುಕಮ್ಮ, ರಾಜೇಶ್ವರಿ, ದಾಕ್ಷಾಯಣಮ್ಮ, ರಾಜಶೇಖರ, ಪುಷ್ಪಾ, ಲಲಿತಮ್ಮ, ಇವರುಗಳು ನಾಮಪತ್ರ ಸಲ್ಲಿಸಿದ್ದಾರೆ.

                 ಪಕ್ಷೇತರ ಅಭ್ಯರ್ಥಿಗಳಾಗಿ 5,8,9,12,14,16,19,21 ನೇ ವಾರ್ಡ್‍ಗೆ 2 ಪಕ್ಷೇತರ ಅಭ್ಯರ್ಥಿಗಳು 23 ನೇ ವಾರ್ಡ್‍ಗೆ ಒಂದು ಪಕ್ಷೇತರ ಹಾಗೂ ಒಂದು ಬಿ.ಎಸ್.ಪಿ. ಅಭ್ಯರ್ಥಿ ಅಕಾಂಕ್ಷಿಗಳಾಗಿ ಒಟ್ಟು 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ಆಗಸ್ಟ್ 20ರಂದು ಕೊನೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯುತ್ತಾರೆ ಎಂಬುದು ಸೋಮವಾರ ಅಂತಿಮವಾಗಲಿದೆ.

Recent Articles

spot_img

Related Stories

Share via
Copy link